25 ಕೋಟಿ ಡ್ರಗ್ಸ್ ಜಪ್ತಿ : ರಾಜ್ಯದ 8 ಸ್ಥಳಿಯರು ಸೇರಿ 17 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ

ಬೆ0ಗಳೂರು : ಮಾದಕವಸ್ತುಗಳ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಮೂವರು ವಿದೇಶಿ ಪ್ರಜೆಗಳು, ಹೊರ ರಾಜ್ಯದ 8 ಸ್ಥಳಿಯರು ಸೇರಿದಂತೆ 17 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ 25.23 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಎಂಸಿ ಯಾರ್ಡ್, ಸುಬ್ರಮಣ್ಯನಗರ, ಮಡಿವಾಳ, ರಾಜಾಜಿನಗರ, ವೈಟ್‌ಫೀಲ್ಡ್, ತಿಲಕನಗರ, ಯಶವಂತಪುರ,ಇAದಿರಾನಗರ ಪೊಲೀಸರು ಹಾಗೂ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ಕೈಗೊಂಡು ಡ್ರಗ್ಸ್ ದಂಧೆಯನ್ನು ಬೇಧಿಸಿ 17ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ಫೆಡ್ಲರ್ ಗಳಿಂದ 25.23 ಕೋಟಿ ಮೌಲ್ಯದ 10 ಕೆಜಿ 306 ಗ್ರಾಂ ಎಂಡಿಎAಎ, 127 ಕೆಜಿ 302 ಗ್ರಾಂ ಗಾಂಜಾ, 3 ಕೆಜಿ 314 ಗ್ರಾಂ ಹೈಡ್ರೋಗಾಂಜಾ, 300 ಇ-ಸಿಗರೇಟ್‌ಗಳು, 90 ಹುಕ್ಕಾ ಪ್ಲೇವರ್ ಗಳು, 30 ಹುಕ್ಕಾ ಪಾಟ್‌ಗಳು, ಸ್ಟಾ÷್ಯಂಡ್‌ಗಳು, ಹುಕ್ಕಾ ಪಿಂಗಾಣಿಗಳು, ವಿದೇಶಿ ಸಿಗರೇಟ್ ಪ್ಯಾಕ್‌ಗಳು ಹಾಗೂ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ತಯಾರಿಸಿದ್ದ ವಿವಿಧ ಕಂಪೆನಿಯ ತಂಬಾಕು ಉತ್ಪನ್ನಗಳು, 7 ಮೊಬೈಲ್,6 ದ್ವಿಚಕ್ರ ವಾಹನ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸರು ಖಚಿತವಾದ ಮಾಹಿತಿ ಆಧರಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಬಂಧಿತ 17 ಮಂದಿಯನ್ನು ವಿಚಾರಣೆ ನಡೆಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ವಿದೇಶಿ ಮೂಲದ, ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಹಾಗೂ ಕೋಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ವಿವಿಧ ಕಂಪೆನಿಯ ತಂಬಾಕು ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದನ್ನು ತಪ್ಪೊಪ್ಪಿಕೊಂಡಿದ್ದಾರೆ.

ಪ್ರಕರಣಗಳಲ್ಲಿ ಭಾಗಿಯಾಗಿದ್ದ 17 ಆರೋಪಿಗಳನ್ನು ವಿವಿಧ ದಿನಾಂಕಗಳAದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಗಳನ್ನು ಡಿಸಿಪಿಗಳಾದ ರಾಜ ಇಮಾಮ್ ಕಾಸಿಂ,ಬಿ.ಎಸ್.ನೇಮಗೌಡ, ಡಾ:ವಿಕ್ರಮ್ ಅಮಟೆ,ಸೈದುಲು ಅಡಾವತ್, ಮೊಹಮ್ಮದ್ ಸುಜೀತ ಮಾರ್ಗದರ್ಶನದಲ್ಲಿ, ಉಪ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಆರೆಂಸಿ ಯಾರ್ಡ್, ಸುಬ್ರಮಣ್ಯನಗರ, ಮಡಿವಾಳ, ರಾಜಾಜಿನಗರ, ವೈಟ್‌ಫೀಲ್ಡ್, ತಿಲಕನಗರ, ಯಶವಂತಪುರ ಹಾಗೂ ಇಂದಿರಾನಗರ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ಗಳು ಮತ್ತವರ ಸಿಬ್ಬಂದಿ ಕೈಗೊಂಡಿದೆ ಎಂದು ಕಮೀಷನರ್ ತಿಳಿಸಿದರು.

ಲಗೇಜ್ ಬ್ಯಾಗ್‌ನಲ್ಲಿ ಡ್ರಗ್ಸ್

ಬಂಧಿತ ಮೂವರು ನೈಜೀರಿಯಾ ಪ್ರಜೆಗಳು ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಡ್ರಗ್ಸ್ ತರುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡ ನೈಜೀರಿಯಾ ಪ್ರಜೆಗಳು ಮಾದನಾಯಕನಹಳ್ಳಿಯ ಬೈಲಕೊನೆಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದುಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಮೆಡಿಕಲ್ ಮತ್ತು ಟೂರಿಸ್ಟ್ ವೀಸಾದಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು ನೈಜೀರಿಯಾದಿಂದ ಬೇರೆ ಪೆಡ್ಲರ್ ಗಳಿಂದ ಎಂಡಿಎAಎ ಕ್ರಿಸ್ಟಲ್ ಬೆಂಗಳೂರಿಗೆ ತರಿಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ವೀಸಾ ಅವಧಿ ಮುಗಿದಿದ್ದರೂ ನೈಜೀರಿಯಾ ಪ್ರಜೆಗಳು ಬೆಂಗಳೂರಿನಲ್ಲಿ ಅನಧಿಕೃತವಾಗಿ ವಾಸವಾಗಿದ್ದು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Recent Articles

spot_img

Related Stories

Share via
Copy link