ಹರಪನಹಳ್ಳಿ;
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ ಹರಪನಹಳ್ಳಿ, ವತಿಯಿಂದ ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೂಸಾಸಾಬ್ ಹೇಳಿದ್ದಾರೆ.
ಪಟ್ಟಣದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೂಸಾಸಾಬ್ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಅಬ್ದುಲ್ ಜಬ್ಬರ್ ನೆರವೇರಿಸಲಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಯ್ಯದ್ ಮನ್ಸೂರ್ ಭಾಷಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹ್ಮದ್ ಶಿರಾಜ್, ಉಪ ವಿಭಾಗಾಧಿಕಾರಿ ಜೆ.ನಜ್ಮಾ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಅರಿವು ಮೂಡಿಸಲು, ವಸತಿ ನಿಲಯಗಳ ಸೇರ್ಪಡೆ, ಶಾಲೆ ಕಾಲೇಜು ಪ್ರವೇಶಾತಿ, ವಿದ್ಯಾರ್ಥಿ ವೇತನಗಳ ಮಾಹಿತಿ, ಕೌಶಲ್ಯ ಪರೀಕ್ಷೆಗಳ ತರಬೇತಿ ಕಾರ್ಯಾಗಾರ, ಕಲಿಕಾ ಸಾಧನಗಳ ವಿತರಣೆ, ಸಮುದಾಯಗಳ ಅಭಿವೃದ್ದಿಗೆ ಆರ್ಥಿಕ ನೆರವು, ಮೂಲಭೂತ ಸೌಕರ್ಯಗಳ ಪಡೆಯುವಿಕೆ, ಅಲ್ಪಸಂಖ್ಯಾತರ ಅನಾಥಾಲಯಗಳಿಗೆ ಅನುದಾನ ಅನುಷ್ಟಾನಕ್ಕೆ ತರುವ ಯೋಜನೆಗಳ ಬಗ್ಗೆ ಅರಿವು ಮೂಡಿಸು ಸಲುವಾಗಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ.
ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು, ಯೋಜನೆಗಳನ್ನು ಪಡೆಯುವುದು ಹೇಗೆ, ಯೋಜನೆಗಳ ಪ್ರಯೋಜನ ಕುರಿತಂತೆ ಸಮಗ್ರ ಮಾಹಿತಿಗಾಗಿ ಕಾರ್ಯಾಗಾರ ಏರ್ಪಡಿಸಿದ್ದು, ಸಕಲ ಅಲ್ಪಸಂಖ್ಯಾತ ಬಂಧುಗಳು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ವಿಚಾರ ಸಂಕೀರ್ಣವನ್ನು ಏರ್ಪಡಿಸಿದ್ದು ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ದಾದಾ ಖಲಂದರ್, ಉಪಾಧ್ಯಕ್ಷ ಕೆ.ಉಸ್ಮಾನ್ ಸಾಬ್, ಕಾರ್ಯದರ್ಶಿ ಮಕ್ರಬ್ಬಿ ಷರೀಫ್, ಸಹ ಸಂಚಾಲಕ ಮನ್ಸೂರ್ ಆಹ್ಮದ್, ಖಜಾಂಚಿ ಹೆಚ್.ಸಲೀಂ ಸಾಬ್, ಕ್ರೀಡಾ ಕಾರ್ಯದರ್ಶಿ ಎಸ್,ಮುಸ್ತಫಾ ನಿರ್ವಹಿಸಲಿದ್ದಾರೆ ಎಂದರು.