ನಾಳೆ ತೆರೆಗೆ ‘ಅನಂತು v/s ನುಸ್ರತ್’

     ಮಾಣಿಕ್ಯ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಅನಂತು v/s ನುಸ್ರತ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

      ವಿನಯ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಸುಧೀರ್ ಶಾನುಭೋಗ್ ನಿರ್ದೇಶಿಸಿದ್ದಾರೆ. ಸುಧೀರ್ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಧನು, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ರಾಘು ಮೈಸೂರು ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿ ಪರಾಕ್ ಹಾಗೂ ವರುಣದೇವ ಕೊಲಪು ಸಂಭಾಷಣೆ ಬರೆದಿದ್ದಾರೆ.

      ವಿನಯ್ ರಾಜಕುಮಾರ್, ಲತಾ ಹೆಗ್ಡೆ, ರವಿಶಂಕರ್, ಬಿ.ಸುರೇಶ್, ದತ್ತಣ್ಣ, ಹರಿಣಿ, ಸ್ವಾತಿ, ಗುರುಪ್ರಸಾದ್, ವಿಶ್ವವಿಜೇತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link