ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

0
13708

Related image

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ. 

     ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಸಹಾಯ ಹಸ್ತ ಚಾಚಿ ಮೆಚ್ಚುಗೆಗೆ ಪಾತ್ರರಾಗಿದ್ದ     ದರ್ಶನ್ ಇದೀಗ ಮಲೆ ಮಹದೇಶ್ವರ ಕಾಡನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವಿಷಯವನ್ನು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

 

      ದುಬಾರಿ ಕ್ಯಾಮರಾ ಒಂದನ್ನು ಖರೀದಿಸಿರುವ ದರ್ಶನ್, ಸ್ವತಃ ಅವರೇ ಕ್ಲಿಕ್ಕಿಸಿರುವ ಪೋಟೋಗಳಿಗೆ ಫ್ರೇಮ್ ಹಾಕಿಸಿ, ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಕಾಡಿನ ಅಭಿವೃದ್ಧಿ ಹಾಗೂ ರಕ್ಷಣಾ ಸಿಬ್ಬಂದಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.

      ಸುಮಾರು ಐದು ವರ್ಷಗಳಿಂದ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ದರ್ಶನ್ ಇದುವರೆಗೂ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೇ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here