ಹಾವೇರಿ :
ಬಾರಿ ವಿಲಕ್ಷಣ ಗುಣಗಳನ್ನು ತೊರ್ಪಡಿಸಿ ರಾಜಕೀಯ ರಂಗದಲ್ಲಿ ನಗರದ ಜನತೆ ಎಂದೂ ಕಂಡರಿಯದ ಚದುರಂಗದಾಟ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಕಾಣಬಹುದಾಗಿತ್ತು. ನಗರಸಭೆಯಲ್ಲಿ 31 ವಾರ್ಡ ಹೊಂದಿದ್ದು, ಈ ಸಾರಿ 145 ಸ್ಪರ್ಧಾಳುಗಳು ತಮ್ಮ ಸದಸ್ಯರಾಗಲು ಅಗ್ನಿ ಪರೀಕ್ಷೆಗೆ ಒಳಗಾಗಿದ್ದರು.ಬಿಜೆಪಿ,ಕಾಂಗ್ರೇಸ್,ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಎಲ್ಲ ಸಾಮಥ್ರ್ಯ ಸಾಹಸವನ್ನು ಈ ಚುನಾವಣೆಯಲ್ಲಿ ಪ್ರದರ್ಶನ ಮಾಡಿದ್ದಾರೆ.ಸುಮಾರು ಇಪ್ಪತ್ತು ವರ್ಗಗಳು ಕಳೆದರೂ ಅಭಿವೃದ್ಧಿ ಕಾಣದ ಈ ನಗರವನ್ನು ಯಾವ ಮಾರಾಯಾ ಏನು ಮಾಡ್ಯಾನು ಎಂಬ ಪ್ರಶ್ನೆ ನಗರದ ಸಾರ್ವಜನಿಕ ವಲಯದಲ್ಲಿ ಅಚ್ಚಳಿಯದೇ ಉಳಿದು ಹೋಗಿದೆ.
ಆದರೆ ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಮತ ಹಾಕಿದರೇನು ? ಇಲ್ಲದಿದ್ದರೇನು ? ಪರಾಭವಗೊಳ್ಳುವವನಗಿಂತ 1 ಮತ ಜಾಸ್ತಿ ಬಂದರೆ ಸಾಕು ಅವರು ಗೆಲವು ನಿಶ್ಚಿತ. ನಗರಸಭೆಗೆ ಆಡಳಿತದ ಚುಕ್ಕಣೆಯು ಯಾವ ಪಕ್ಷದ ಪಾಲು ಎಂಬೆಲ್ಲ ಲೆಕ್ಕಚಾರ ಹಾಕುವ ಜನರೆ ಹೆಚ್ಚಾಗಿದ್ದಾರೆ. ಆದರೆ ಅಭ್ಯರ್ಥಿಗಳ ಮನಸ್ಸು ಮಾತ್ರ ತಳಮಳ ಅಲ್ಲದೇ ಇರುವುದಿಲ್ಲಾ. ಅದರ ಮರ್ಮ ಅವರಿಗೆ ಮಾತ್ರ ಗೊತ್ತು. ದುಬಾರಿ ದುನಿಯಾದಲ್ಲಿ ಚುನಾವಣೆ ದಮ್ಮ ಹೆಚ್ಚಾಗುತ್ತಾ ಹೋಗುತ್ತಿದೆ. ಸದಸ್ಯರಾದವರೇ ನಗರ ಸುಧಾರಿಸಿ: ಯಾಲಕ್ಕಿನ ಕಂಪಿನ ನಾಡು ಹೆಗ್ಗಳಿಕೆಗೆ ಹೆಸರಾದ ಜಿಲ್ಲಾ ಕೇಂದ್ರ ಎಲ್ಲಿ ನೋಡಿದರೂ ಗಬ್ಬು ನಾರುವ ದುಸ್ಥಿತಿಗೆ ಬಂದಿದೆ. ನಾಮ ಮಾತ್ರ ಗಟಾರು ನಿರ್ಮಾಣವಾಗುವಂತಾಗಿ, ಸರಿಯಾಗಿ ರಸ್ತೆ ಇಲ್ಲದಂತೆ ಪ್ರತಿ ಹೆಜ್ಜೆ ಹಾಕಿದರೂ ಜನರು ಹಿಡಿ ಶಾಪ ಹಾಕುವ ಪರಸ್ಥಿತಿ ಉಂಟಾಗಿದೆ. ಯಾವುದೇ ಸರ್ಕಾರ ಬಂದರೂ ನಗರದ ಅಭಿವೃದ್ಧಿಗೆ ಕೋಟ್ಯಾನುಗಂಟಲೇ ಹಣ ಬರುತ್ತಿದ್ದರೂ ಯಾಕೆ ಇನ್ನೂ ಅಭಿವೃದ್ಧಿ ಕಾಣಲಿಲ್ಲಾ ಎಂಬ ಅಗೋಚರ ಪ್ರಶ್ನೆ ಕಾಡತೊಡಗಿದೆ. ನಿರೀಕ್ಷೆಯ್ಲಲಿದ್ದಾರೇ ನಿಮ್ಮ ವಾರ್ಡ ಮತ ಬಾಂದವರು : ಚುನಾವಣೆಯ ಪೂರ್ವದಲ್ಲಿ ಪಕ್ಷದ ಪ್ರತಿನಿಧಿಯಾಗುವುದು ಸಹಜ ಆದರೆ ಗೆದ್ದ ಮೇಲೆ ಯಾವುದೇ ಪಕ್ಷ ಬೇದಭಾವ ಬಿಟ್ಟು ಕೆಲಸ ಮಾಡುವಂತಾಗಬೇಕು.ಮತ ಹಾಕಿದ ಜನರಿಗೆ ಉತ್ತಮ ಸ್ಪಂದನೆಯ ಮೂಲಕ ಅವರ ಸಮಸ್ಯೆಗಳನ್ನು ನ್ಯಾಯಯುತವಾಗಿ ಬಗೆಹರಿಸಬೇಕಾಗುತ್ತದೆ. ಮತ್ತೊಬ್ಬರಿಗಿಂತ ನಿಮಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ ಎಂಬ ನಂಬಿಕೆಯಿಂದ ವಾರ್ಡಿನ ಸರ್ವಾಂಗಿಣ ಅಭಿವೃದ್ಧಿ ಆಗಲಿ ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಪ್ರಶ್ನೆಗಳೇ ಅಭಿವೃದ್ಧಿಗೆ ನಾಂದಿ : ಕೇವಲ ಮತ ಹಾಕಿ ಗೆಲ್ಲಿಸಿದರೆ ಸಾಲದು ಅವರ ಕಾರ್ಯಚಟುವಟಿಕೆಗಳನ್ನು ಸದಾ ಕಾಲ ಸಾರ್ವಜನಿಕರು ಗಮನಿಸಬೇಕಾಗಿರುವುದು ಮತದಾರರ ಕರ್ತವ್ಯವೇ ಆಗಿರಬೇಕು. ಇಲ್ಲಿ ಕೇಲದೇ ಏನು ದೊರೆಯದು ಎಂಬಂತೆ ಜನಪ್ರತಿನಿಧಿಗಳನ್ನು ಅಭಿವೃದ್ಧಿಗೆ ಪೂರಕವಾಗುವ ಸಲಹೆ ಸೂಚನೆ ಮಾರ್ಗದರ್ಶನ ಹಾಗೂ ತಪ್ಪ ಕಂಡು ಬಂದರೆ ಅವರನ್ನು ಪ್ರಶ್ನೆ ಮಾಡುವ ಗುಣ ಹೆಚ್ಚಾದಾಗ ಮಾತ್ರ ಪ್ರಗತಿಯಾಗಲು ಸಾಧ್ಯ. ಸದಸ್ಯರಾದವರು ಗೆಲುವಿನ ಕೃತಜ್ಞತೆ ಭಾವದಿಂದ 5 ವರ್ಷಗಳ ಕಾಲ ಕೆಲಸ ಮಾಡುವಂತೆ ವಾರ್ಡಿನ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮವಹಿಸಿ ಮಾದರಿ ವಾರ್ಡ ಮಾಡುತ್ತೇನೆ ಎಂಬ ಶಪಥವನ್ನು ಇಂದೇ ಆತ್ಮಸಾಕ್ಷಿಯಾಗಿ ಮಾಡಿ ಕಾರ್ಯ ಚಟುವಟಿಕೆ ಮಾಡುವಂತಾಗಲಿ,,,,,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








