ನಾಳೆ ಮುಂಜಾನೆ 3.30ರಿಂದಲೇ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ

ಬೆಂಗಳೂರು: 

ಟಿಸಿಎಸ್‌ ವರ್ಲ್ಡ್ 10K ರನ್ ಪ್ರಯುಕ್ತ ಏಪ್ರಿಲ್‌ 27ರಂದು ಮುಂಜಾನೆ 3:30ರಿಂದಲೇ ಮೆಟ್ರೋ ರೈಲು ಸೇವೆ (Namma Metro) ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಅನುಕೂಲವಾಗಲು ಸಾಮಾನ್ಯ ಸಮಯಕ್ಕಿಂತ ಮೂರೂವರೆ ಗಂಟೆಗಳ ಮುಂಚೆಯೇ ಮೆಟ್ರೋ ರೈಲು ಸೇವೆ ಪ್ರಾರಂಭವಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಟಿಸಿಎಸ್ ವರ್ಲ್ಡ್ 10ಕೆ – 2025 ಮ್ಯಾರಥಾನ್‌ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗಲು ಏಪ್ರಿಲ್ 27 ರ ಭಾನುವಾರ ಬೆಳಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ. ಇದು ಸಾಮಾನ್ಯ ಸಮಯಕ್ಕಿಂತ ಮೂರೂವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತ್ತದೆ. ಈ ವಿಸ್ತೃತ ಅವಧಿಯಲ್ಲಿ ನಾಲ್ಕು ಮೆಟ್ರೋ ಟರ್ಮಿನಲ್‌ಗಳು ಮತ್ತು ನಾಡಪ್ರಭು ಕೆಂಪೇಗೌಡ ನಿಲ್ಯಾಣ ಮೆಜೆಸ್ಟಿಕ್ ನಿಲ್ದಾಣದಿಂದ ರೈಲುಗಳು 12 ನಿಮಿಷಗಳ ಆವರ್ತನದಲ್ಲಿ ಚಲಿಸುತ್ತವೆ.

ಇದೊಂದು ಸುಗಮ ಸಾರಿಗೆಯಾಗಿದ್ದು, ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ವರ್ಲ್ಡ್ ಪ್ರೀಮಿಯರ್ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್‌ ಕೋರಿದೆ.

Recent Articles

spot_img

Related Stories

Share via
Copy link