ಹಾವೇರಿ :
ಬಹುಜನ ಸಮಾಜ ಪಕ್ಷದ ರಾಷ್ಟೀಯ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಕ್ಕ ಮಾಯಾವತಿಯವರು ಲೋಕಸಭಾ ಚುನಾವಣೆಯ ಪ್ರಚಾರ ನಿಮಿತ್ಯ ಇಂದು(ದಿ,10) ಮೈಸೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಆಗಮಿಸಿ ರಾಜ್ಯದ ಜನರನ್ನು ಉದ್ದೇಶಿಸಿ ಪಕ್ಷದ ಪ್ರನಾಳಿಕೆ ಹಾಗೂ ಉತ್ತಮ ಯೋಜನೆಗಳ ಕುರಿತು ಮಾತನಾಡು ವವರಿದ್ದಾರೆ .
ಹಾವೇರಿ ಲೋಕ ಕ್ಷೇತ್ರದ ಗದಗ-ಹಾವೇರಿ ಜಿಲ್ಲೆಯ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕೋರಿ ಬಿಎಸ್ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರ ಬಿಎಸ್ಪಿ ಪಕ್ಷದ ಅಭ್ಯರ್ಥಿ ಎ.ಎ.ಪಠಾಣ ಜಂಟಿ ಪ್ರಕಟಣೆ ತಿಳಿಸಿದ್ದಾರೆ.