ನಾಳೆ ಹಿಂದೂ-ಮುಸಲ್ಮಾನ್ ಭಾವೈಕ್ಯತೆ ಸಾರುವ ಮೊಹರಂ ಆಚರಣೆ

ಹಾವೇರಿ

      ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬವು ಹಿಂದೂ ಮತ್ತು ಮುಸಲ್ಮಾನ್‍ ಸಹೋದರರು ಭಾವೈಕ್ಯತೆಯಿಂದ ಪ್ರತಿವರ್ಷವೂ ಆಚರಿಸುತ್ತಾ ಬಂದಿರುತ್ತಾರೆ .ದಿನಾಂಕ: 20-09-2018 ರಂದು ಗುರುವಾರ ರಾತ್ರಿ 10-00 ಗಂಟೆಗೆ (ಜುಲುಸ್) ಮೆರವಣಿಗೆ ಪ್ರಮುಖ ಬೀದಿಯಿಂದ ಹೊರಡುತ್ತದೆ .ನಂತರ ಬೆಳಿಗ್ಗೆ 7 ಗಂಟೆಗೆ ಅಗ್ನಿಕೊಂಡ ಹಾಯುವುದು. ದಿನಾಂಕ:24-09-2018 ರ ಸೋಮವಾರ ಶಾಹದತ್ . ದಿನಾಂಕ : 26-09-2018 ನೇ ಬುಧವಾ ರಜಿಯಾರತ್‍ ರಾತ್ರಿ 7-00 ಗಂಟೆಗೆ ಹಜರತ್ ಮಹಬೂಬ್ ಸುಬ್ಹಾನಿ ದರ್ಗಾಗಲ್ಲಿಯಲ್ಲಿ ಫಾತೆಖ್ವಾನಿ ಮತ್ತು ಗಂಜಿ ಪ್ರಸಾದ ವಿತರಣೆ ಇರುತ್ತದೆ.ಮಕಾನಗಲ್ಲಿಯ ಮೊಹರಂ ಕಮೀಟಿಯವರಾದ ಜನಾಬ ಫಜಲು ರಹಿಮಾನ ಮುಲ್ಲಾ , ಜನಾಬ ನಜೀರಸಾಬ ಹು.ನದಾಫ, ಜನಾಬ ಮಹ್ಮದಸಾಬ (ಬಾಬುಸಾಬ) ಮುಂಡರಗಿ, ಜನಾದ ಸತ್ತಾರಸಾಬ ಕಬ್ಬೂರ ಹಾಗೂ ಜನಾಬ ಜಾಫರಸಾಬ ಬೇಫಾರಿಯವರು ತಿಳಿಸಿರುತ್ತಾರೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link