ಹಾವೇರಿ
ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ. ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚಂದಾಪುರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆದೆ. ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿ ಇದೆ. ಹುದ್ದೆಯ ಗೌರವ ನಿಮಗೆ ಸಲುತ್ತದೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ಇದೆ ಎಂದರು.
ನಾನು ಸಿಎಂ ಆದ ಕೂಡಲೇ ವಿದ್ಯಾನಿಧಿ ಯೋಜನೆ ಮಾಡಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಲಾಭ ದೊರೆತಿದೆ. ಶಿಗ್ಗಾಂವಿಯಲ್ಲಿ ಸುಮಾರು 8 ಸಾವಿರ ಮಕ್ಕಳಿಗೆ ಇದರ ಲಾಭ ದೊರೆತಿದೆ. ರೈತರ ಮಕ್ಕಳೂ ಡಾಕ್ಟರ್, ಎಂಜನೀಯರ್ ಆಗಬೇಕು. ನಾವು ಮತ್ತೆ ಯಶಸ್ವಿನಿ ಯೋಜನೆ ಮರು ಜಾರಿ ಮಾಡಿದ್ದೇವೆ. ಎಸ್ಸಿ ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಿದ್ದೇವೆ ಎಂದರು. ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಶಿಗ್ಗಾಂವಿ- ಸವಣೂರು ತಾಲೂಕಿನ 32 ಸಾವಿರ ರೈತರಿಗೆ ಅನುಕೂಲ ದೊರೆತಿದೆ. ಕೊರೋನಾ ಸಮಯದಲ್ಲಿ ನಮ್ಮ ಪ್ರಧಾನಿ ವ್ಯಾಕ್ಸಿನ್ ಕೊಡಿಸಿದ್ದರಿಂದ ನಾವೆಲ್ಲರೂ ಮುಕ್ತವಾಗಿ ಅರಾಮ್ ಇದ್ದೇವೆ.
ಮನೆ ಮನೆಗಂಗೆ ಯೋಜನೆ ಯಡಿ 136 ಗ್ರಾಮಗಳಿಗೆ 438 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದೇವೆ. ತುಂಗಭದ್ರಾ ನದಿಯಿಂದ ನೀರು ತರುತ್ತಿದ್ದೇವೆ ಎಂದರು. ರಾಜ್ಯಾದ್ಯಂತ ಬಿಜೆಪಿ ಅಲೆ ಇದೆ. ಮೈಸೂರು ವರುಣಾದಲ್ಲಿ ಬಿಜೆಪಿ ಅಲೆ ಇದೆ. ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಿಮ್ಮ ಆಶೀರ್ವಾದ ನೀಡಿ ಬಹುಮತದಿಂದ ಆರಿಸಿ ಕಳುಹಿಸಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








