ಭಾರತದಲ್ಲಿನ ಚಿನ್ನದ ಸಂಗ್ರಹ ಹೆಚ್ಚಳ ….!

ನವದೆಹಲಿ 

ಈ ಭೂಮಿಯಲ್ಲಿ ಇರುವ ಅತ್ಯಮೂಲ್ಯ ವಸ್ತುಗಳಲ್ಲಿ ಚಿನ್ನವೂ ಒಂದು. ಇದರ ನೈಸರ್ಗಿಕ ಲಭ್ಯತೆ ಸೀಮಿತವಾಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಬಹಳ ಹೆಚ್ಚು. ಕಷ್ಟಕಾಲಕ್ಕೆ ಚಿನ್ನ ಉಪಯೋಗಕ್ಕೆ ಬರುತ್ತದೆ ಎನ್ನುವ ಭಾವನೆ ಇದೆ.
     ಇದು ಜನರ ಭಾವನೆ ಮಾತ್ರವಲ್ಲ, ದೇಶಗಳ ಭಾವನೆಯೂ ಹೌದು. ಆರ್ಥಿಕ ತುಮುಲಗಳ  ಸಂದರ್ಭದಲ್ಲಿ ಚಿನ್ನ ರಕ್ಷಾ ಕವಚ ಆಗಬಹುದು ಎನ್ನುವ ನಂಬಿಕೆ ಇದೆ. ಅಂತೆಯೇ, ಹೆಚ್ಚಿನ ದೇಶಗಳ ಫಾರೆಕ್ಸ್ ಮೀಸಲು ನಿಧಿಯಲ್ಲಿ ಚಿನ್ನದ ಸಂಗ್ರಹವೂ ಪ್ರಮುಖವಾಗಿರುತ್ತದೆ. ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ತನ್ನ ಫಾರೆಕ್ಸ್ ರಿಸರ್ವ್ಸ್ ಬುಟ್ಟಿಗೆ ಚಿನ್ನವನ್ನೂ ಸೇರಿಸುತ್ತದೆ.
 
    ಇತ್ತೀಚೆಗೆ ಚಿನ್ನದ ಸಂಗ್ರಹ ಹೆಚ್ಚಿದೆ. ವರದಿಗಳ ಪ್ರಕಾರ 2023ರಲ್ಲಿ ಆರ್​ಬಿಐ ಖರೀದಿಸಿರುವದಕ್ಕಿಂತ ಹೆಚ್ಚು ಚಿನ್ನವನ್ನು ಕಳೆದ ನಾಲ್ಕು ತಿಂಗಳಲ್ಲಿ ಖರೀದಿಸಿದೆ.2023ರ ಇಡೀ ಕ್ಯಾಲಂಡರ್ ವರ್ಷದಲ್ಲಿ ಆರ್​ಬಿಐ 16 ಟನ್ ಚಿನ್ನವನ್ನು ಖರೀದಿಸಿತ್ತು. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್​ವರೆಗೆ 24 ಟನ್ ಚಿನ್ನವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕೊಂಡುಕೊಂಡಿದೆ. ಕಳೆದ ವರ್ಷಾಂತ್ಯದಲ್ಲಿ ಆರ್​ಬಿಐನ ಗೋಲ್ಡ್ ರಿಸರ್ವ್ಸ್ ಮೊತ್ತ 803.6 ಟನ್ ಇತ್ತು. ಎಪ್ರಿಲ್ 26ರ ದತ್ತಾಂಶದ ಪ್ರಕಾರ ಅದು 827.69 ಟನ್​ ಚಿನ್ನ ಇದೆ.
    2017ರ ಡಿಸೆಂಬರ್​ನಿಂದ ಆರ್​ಬಿಐ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಚಿನ್ನವನ್ನು ಖರೀದಿಸಲು ಆರಂಭಿಸಿದೆ. 2022ರಲ್ಲಿ ಹೆಚ್ಚು ತೀವ್ರತೆಯಲ್ಲಿ ಖರೀದಿ ನಡೆದಿದೆ. ಈಗ ಜನವರಿಂದ ಹೊಸ ಉತ್ಸಾಹದಲ್ಲಿ ಹಳದಿ ಲೋಹವನ್ನು ಆರ್​ಬಿಐ ಸಂಗ್ರಹಿಸುತ್ತಿದೆ.
   ಆರ್​ಬಿಐ ಮಾತ್ರವಲ್ಲ, ವಿಶ್ವದ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಖರೀದಿಸಿ ತಮ್ಮ ಫಾರೆಕ್ಸ್ ಮೀಸಲು ಸಂಪತ್ತಿನ ಬುಟ್ಟಿಗೆ ಸೇರಿಸುತ್ತವೆ. ಅಮೆರಿಕದ ಬಳಿ ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಇದೆ. ಕೆಳ ಮಧ್ಯಮ ಆದಾಯದ ದೇಶಗಳ ಪೈಕಿ ಅತಿಹೆಚ್ಚು ಚಿನ್ನವನ್ನು ಹಿಡಿದಿಟ್ಟುಕೊಂಡಿರುವುದು ಭಾರತವೇ. ಒಟ್ಟಾರೆ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ.  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap