ತಿರುವನಂತಪುರ:
ಕೇರಳ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ, ಇಲ್ಲಿಯವರೆಗೆ ಕನಿಷ್ಠ 483 ಜನ ಮೃತಪಟ್ಟಿದ್ದಾರೆ. 15 ಜನ ಇನ್ನೂ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಒಂದು ದಿನದ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಮುಂಚೆಯೇ ಹವಾಮಾನ ಇಲಾಖೆಯು ಮಳೆ ಬಗ್ಗೆ ಎಚ್ಚರಿಕೆ ನೀಡಿತ್ತು. ಆದರೂ ನಿರಂತರ ವರ್ಷಧಾರೆ ಸುರಿದದ್ದು ಪ್ರವಾಹಕ್ಕೆ ಕಾರಣವಾಯಿತು. ಆಗಸ್ಟ್ 9ರಿಂದ 15ರವರೆಗೆ 98.5 ಮಿ.ಮೀ. ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಅವಧಿಯಲ್ಲಿ 352.2 ಮಿ.ಮೀ. ಮಳೆಯಾಗಿದೆ ಎಂದರು.
‘ಇತ್ತೀಚಿನ ಅಂಕಿಅಂಶಗಳ ಪ್ರಕಾರ 305 ಪರಿಹಾರ ಶಿಬಿರಗಳಲ್ಲಿ 59,296 ಜನ ಇದ್ದಾರೆ. ಒಟ್ಟು 57 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ರಾಜ್ಯದ ಒಟ್ಟು ವಾರ್ಷಿಕ ಹೂಡಿಕೆ ಪ್ರಮಾಣಕ್ಕಿಂತಲೂ ಹೆಚ್ಚು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ’ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ