ವಿಜಯಪುರ :
ಯುವಕನೊಬ್ಬ ಚಿಪ್ಸ್ ತಿನ್ನಲು ಹೋಗಿ ನಾಲಗೆಯನ್ನೇ ಸುಟ್ಟುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.
ವಿನೋದ ಹದಗಲ್ (22) ನಾಲಿಗೆ ಸುಟ್ಟುಕೊಂಡಿರುವ ಯುವಕ. ಈತ ನಗರದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ 60 ರೂಪಾಯಿಗೆ ಪೋಟ್ಯಾಟೋ ಚಿಪ್ಸ್ ಖರೀದಿಸಿದ್ದ ಯುವಕ ವಿನೋದನಿಗೆ ಚಿಪ್ಸ್ ತಿಂದ ತಕ್ಷಣವೇ ನಾಲಿಗೆ ಉರಿಯಲು ಪ್ರಾರಂಭಿಸಿದೆ. ಕೆಲವೇ ಕ್ಷಣಗಳಲ್ಲಿ ನಾಲಗೆ ಮೇಲೆ ಸುಟ್ಟ ಗಾಯಗಳು ಕಾಣಿಸಿಕೊಂಡಿವೆ.
ಚಿಪ್ಸ್ ತಯಾರಿಕೆಯಲ್ಲಿ ಬಳಸಲಾಗಿದ್ದ ಅತಿಯಾದ ರಾಸಾಯನಿಕದಿಂದಲೇ ಹೀಗೆ ಆಗಿರುವುದು ಎನ್ನಲಾಗಿದೆ. ಈ ಚಿಪ್ಸ್ ಕೊಟ್ಟ ಗೋಲ್ಡನ್ ಬೇಕರಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ