ನಿವೃತ್ತಿ ನೌಕರರಿಂದ ಕೊಡಗು ನಿರಾಶ್ರಿತರಿಗೆ ಪರಿಹಾರ ಚೆಕ್

 

ಕಂಪ್ಲಿ

   ಇಲ್ಲಿನ ಕರ್ನಾಟಕ ರಾಜ್ಯ ನಿವೃತ್ತಿ ನೌಕರರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಕೊಡಗು ಸಂತ್ರಸ್ಥರಿಗೆ ಪರಿಹಾರದ ಚೆಕ್‍ನ್ನು ತಹಶೀಲ್ದಾರರಾದ ಎಂ.ರೇಣುಕಾ ಅವರಿಗೆ ನೀಡಿದರು.

  ಕೊಡಗಿನ ಸಂತ್ರಸ್ಥರು ಮನೆ ಮಠಗಳನ್ನು ಕಳೆದುಕೊಂಡಿದ್ದು ಅವರ ಪುನರ್ ಚೇತನಕ್ಕಾಗಿ ಸರ್ವರೂ ಮಾನವೀಯತೆಯ ನೆರವಿನ ಹಸ್ತ ಚಾಚಬೇಕು. ಈ ದಿಸೆಯಲ್ಲಿ ನಿವೃತ್ತಿ ನೌಕರರ ಸಂಘದಿಂದ 7700ರೂ.ಗಳ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಅರ್ಪಿಸಿದ್ದೇವೆ ಎಂದು ರಾಜ್ಯ ನಿವೃತ್ತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಹೇಳಿದರು.

   ಚೆಕ್ ಅರ್ಪಿಸುವಲ್ಲಿ ನಿವೃತ್ತಿ ನೌಕರರ ಸಂಘದ ಗೌರವಾಧ್ಯಕ್ಷ ಟಿ.ನಾಗರಾಜರೆಡ್ಡಿ, ಕೆ.ಎಂ.ರುದ್ರಮುನಿ, ಟಿ.ಶಶಿಧರ, ವಿ.ನಾರಾಯಣರೆಡ್ಡಿ, ಎಸ್.ಎಚ್.ಎಂ.ಚನ್ನಬಸವಯ್ಯ, ಬಿ.ಈರಣ್ಣ, ಎ.ಬಸವರಾಜ, ಸೋಮಪ್ಪ, ಎಸ್.ಎಂ.ಮಹಾಬಲೇಶ್ವರಸ್ವಾಮಿ, ಫಣಿ ಸೇರಿ ಅನೇಕರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link