ಹಗರಿಬೊಮ್ಮನಹಳ್ಳಿ:
ಪ್ರತಿ ವರ್ಷದಂತೆ ನೂಲು ಹುಣ್ಣಿಮೆಯ ದಿನದಂದೇ ಮಾರ್ಕಂಡೇಶ್ವರ ಜಯಂತಿಯನ್ನು ಆಚರಿಸುತ್ತಾ ಬಂದಿದ್ದು ಇಂದು ಸಮುದಾಯ ಭಾಂಧವರಿಗೆಲ್ಲಾ ಸಾಮೂಹಿಕ ಜಾನಿವಾರಧಾರಣೆಯನ್ನು ಮಾಡಲಾಗುವುದು ಎಂದು ಪದ್ಮಾಶಾಲಿ ಸಮಾಜದ ಅಧ್ಯಕ್ಷ ಜಾಣಾ ಶಿವಾನಂದ ಹೇಳಿದರು.
ಪಟ್ಟಣದ ಹಾಲಸ್ವಾಮಿ ಮಠದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಪದ್ಮಶಾಲಿ ಸಮಾಜ ಹಮ್ಮಿಕೊಂಡಿದ್ದ ಮಾರ್ಕಂಡೇಶ್ವರ ಜಯಂತಿ ಹಾಗೂ ಸಾಮೂಹಿಕ ಜನಿವಾರಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಕುಲದೈವವಾದ ಮಾರ್ಕಂಡೇಯ ಮುನಿಗಳು ಭಕ್ತಿ ಪರಕಾಷ್ಠೆಯಲ್ಲಿ ಅಗ್ರಮಾನ್ಯರಾಗಿದ್ದರು ಹಾಗಾಗೀಯೇ ಅವರು ಇಂದಿಗೂ ಚಿರಂಜೀವಿಗಳಾಗಿಯೇ ಉಳಿದಿದ್ದಾರೆ. ಅಂತಹ ದೈವವನ್ನು ಪಡೆದ ನಾವುಗಳೇ ಧನ್ಯರು ಎಂದರು.
ಇದಕ್ಕೂ ಮೊದಲು ಪದ್ಮಾಶಾಲಿ ಸಮಾಜದ ನಿವೇಶನದಲ್ಲಿ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಬಳಿಕ ಹಾಲಸ್ವಾಮಿ ಮಠದಲ್ಲಿ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಪುರೋಹಿತರ ಮಂತ್ರಘೋಷಗಳ ನಡುವೆ ಸಮುದಾಯದವರು ಸಾಮೂಹಿಕ ಜನಿವಾರಧಾರಣೆಯನ್ನು ಮಾಡಿಕೊಂಡರು.
ಈ ಸಂಧರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಜೆ.ಸೋಮಶೇಖರ್, ಖಜಾಂಚಿ ನಾಗರಾಜ, ಹಿರಿಯ ಮುಖಂಡರಾದ ಲಕ್ಷ್ಮಣ, ಈರಣ್ಣ, ಕರಿಯಪ್ಪ, ವೆಂಕಟೇಶ್, ಗುರುನಾಥಪ್ಪ, ಸುರೇಶ್ ಪೂಜಾರ, ಗೋವಿಂದ, ಹನುಮಂತ, ಪದ್ಮಾಶಾಲಿ ಸಮಾಜದ ಮಾರ್ಕಂಡೇಶ್ವರ ಮಹಿಳಾ ಸ್ವಸಹಾಯ ಸಂಘದ ಸುಧಾ, ಪುಷ್ಪಾ, ಲಕ್ಷ್ಮಮ್ಮ, ಶಾಂತಮ್ಮ, ಕೊಟ್ರಮ್ಮ, ಮಂಜುಳಾ, ಮಾಧುರಿ, ಶೋಭಾ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ