ರಾಣಿಬೆನ್ನೂರು:
ಇಲ್ಲಿನ ರಂಗನಾಥ ನಗರದ ಭಾವನಾರಾಯಣಸ್ವಾಮಿ ಮತ್ತು ಶ್ರೀಭದ್ರಾವತಿದೇವಿ ದೇವಸ್ಥಾನದಲ್ಲಿ ನಗರದ ಪದ್ಮಶಾಲಿ ಸಮಾಜದ ವತಿಯಿಂದ 40ನೇ ವರ್ಷದ ನೂಲು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಭಾವನಾರಾಯಣಸ್ವಾಮಿ ಮತ್ತು ಶ್ರೀಭದ್ರಾವತಿದೇವಿ ಭಾವಚಿತ್ರದ ಮೆರವಣಿಗೆಯು 105 ಮಹಿಳೆಯರಿಂದ ಮಹಾಕುಂಬಮೇಳ ಶದ್ಧಾಭಕ್ತಿಯಿಂದ ಜರುಗಿತು.
ಮೆರವಣಿಗೆಯ ಭಾಜಾ ಭಜಂತ್ರಿ ಸಮಾಳ, ಮಂಗಳವಾದ್ಯದೊಂದಿಗೆ ಇಲ್ಲಿನ ರಂಗನಾಥ ನಗರದ ಭಾವನಾರಾಯಣಸ್ವಾಮಿ ಮತ್ತು ಶ್ರೀಭದ್ರಾವತಿದೇವಿ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನಕ್ಕೆ ಬಂದು ತಲುಪಿತು.
ಪಾಂಡಪ್ಪ ವಗ್ಗಾ, ಮಾರುತೆಪ್ಪ ಕೊಟ್ಟುರು, ಹನುಮಂತಪ್ಪ ಮುಕ್ತೇನಹಳ್ಳಿ, ಮಲ್ಲಿಕಾರ್ಜುನ ಮಾಗೇನಹಳ್ಳಿ. ಮಂಜುನಾಥ ರಂಗನವರು, ಪರಶುರಾಮ ಅಗಡಿ, ನಿಂಗಣ್ಣ ರಂಗನವರು, ಮಾಲಿಂಗಪ್ಪ ಕುಮಾರಪ್ಪನವರ, ಭೀಮಣ್ಣ ಕೊಟ್ಟುರು, ಮಂಜಪ್ಪ ಪೆನಗೊಂಡಲ, ಅನುರಾಜ ಕೊಟ್ಟುರು, ಲಕ್ಷ್ಮಣ ತಮ್ಮಾನವರ ಇದ್ದರು.
ಇದಕ್ಕೂ ಮುನ್ನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಭಾವನಾರಾಯಣಸ್ವಾಮಿ ಮತ್ತು ಶ್ರೀಭದ್ರಾವತಿದೇವಿ ಮೂರ್ತಿಗೆ ಅಭಿಷೇಕ ಹೋಮ ಹವನಗಳ ಪೂಜಾ ಕಾರ್ಯಕ್ರಮಗಳ ವಿಧಿ ವಿಧಾನಗಳು ನಡೆದು ನಂತರ ಅನ್ನಸಂತರ್ಪಣೆ ಜರುಗಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
