ನೆಲೆಯಿಲ್ಲದ ದೊಂಬಿದಾಸರಿಗೆ ಸಿ.ಎ.ಸೈಟ್: ಕೆ.ದೊರೈರಾಜ್

ತುಮಕೂರು:

              ಸುಮಾರು 40 ವರ್ಷಗಳ ನನ್ನ ಸಂಘಟನಾ ಹೋರಾಟದ ಬದುಕಿನಲ್ಲಿ ಅನೇಕ ಅಲೆಮಾರಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದ್ದೇವೆ. ಆದರೆ ದೊಂಬಿದಾಸರ ಸಂಘಟನೆಯಷ್ಟು ಗಟ್ಟಿಯಾದ ಸಂಘಟನೆ ಬೇರೆ ಯಾವುದೂ ಕಂಡುಬರುವುದಿಲ್ಲ ಎಂದು ಪ್ರೊ.ಕೆ.ದೊರೈರಾಜು ಅಭಿಪ್ರಾಯಪಟ್ಟರು.

             ನಗರದ ಕೊಳಗೇರಿ ನಿವಾಸಿಗಳ ಭವನದಲ್ಲಿ ನಡೆದ ದೊಂಬಿದಾಸರ ಬದುಕಿನ ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು 10 ವರ್ಷಗಳಿಂದ ದೊಂಬಿದಾಸರ ಬದುಕನ್ನು ಕುರಿತು ಗಮನಿಸುತ್ತಿದ್ದೇನೆ. ಸರಿಯಾದ ನೆಲೆಯಿಲ್ಲದ ದೊಂಬಿದಾಸರು ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಸಭೆ, ಸಮಾರಂಭಗಳನ್ನು ನಡೆಸಲು ಮರದ ನೆರಳೋ, ಪಾಳು ಬಿದ್ದ ಕಟ್ಟಡಗಳಲ್ಲಿ ಆಶ್ರಯಿಸುವುದನ್ನು ಕಂಡಾಗ ನನ್ನ ಮನಸ್ಸಿಗೆ ಬೇಸರವಾಯಿತು. ಕೊನೆಗೆ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ಅವರ ಬಳಿ ಮನವಿ ಮಾಡಿದಾಗ ಅವರು ಸಂತೋಷದಿಂದ ಮಂಜೂರು ಮಾಡಿಕೊಟ್ಟರು. ಸಮುದಾಯ ಇದರ ಸದ್ಬಳಕೆ ಮಾಡಿಕೊಳ್ಳಲಿ ಎಂದು ತಿಳಿಸಿದರು.

              ಕುಲಗುರುಗಳಾದ ಶ್ರೀ ಕರುಣಾಕರ ಸ್ವಾಮೀಜಿ ಮಾತನಾಡಿ ಈ ಸಮುದಾಯ ಅಭಿವೃದ್ಧಿಯಾಗಬೇ ಕಾದರೆ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಯಾವ ಕುಟುಂಬದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತದೆಯೋ ಆ ಕುಟುಂಬಕ್ಕೆ ಶಾಶ್ವತ ಬೆಳಕು ಮೂಡುತ್ತದೆ. ಆದ್ದರಿಂದ ಸಮುದಾಯದ ಜನ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ತಾವು ಕಷ್ಟಪಟ್ಟು ದುಡಿದ ಹಣವನ್ನು ವಿನಾಕಾರಣ ಹಾಳು ಮಾಡದೆ ಭವಿಷ್ಯದ ದೃಷ್ಟಿಯಿಂದ ಜೋಪಾನ ಮಾಡಬೇಕು. ಈಗ ಮಂಜೂರಾಗಿರುವ ನಿವೇಶನದಲ್ಲಿ ಸಾಮಾಜಿಕ, ಸಾಂಸ್ಕøತಿಕ ಕಟ್ಟಡ ನಿರ್ಮಿಸಿ ಸಮುದಾಯದ ಪ್ರಗತಿಗೆ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಲಿ ಎಂದು ಆಶಿಸಿದರು.

               ತುಮಕೂರು ಜಿಲ್ಲಾ ಅಂಚೆ ಅಧೀಕ್ಷಕರಾದ ವೆಂಕಟರಮಣಸ್ವಾಮಿ, ಜಿಲ್ಲಾಧ್ಯಕ್ಷ ಸಾಧನ ರವಿಕುಮಾರ್, ಕಾರ್ಯಾಧ್ಯಕ್ಷ ಎಸ್.ಕೆ.ನಾಗರಾಜ್, ಖಜಾಂಚಿ ಸಿದ್ದರಾಜು, ಕಾರ್ಯದರ್ಶಿ ವೇದಮೂರ್ತಿ, ರಂಗನಾಥ್, ಕುಮಾರ್, ರಾಜ್ಯಾಧ್ಯಕ್ಷ ರಂಗಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಅವರುಗಳು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link