ನೇಪಾಳದಲ್ಲಿ ನಡೆದ ವೆಸ್ಟ್ ಸೌತ್ ಪ್ಯಾರಾ ಒಲಂಪಿಕ್ ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಕೂಡ್ಲಿಗಿ ತಾಲ್ಲೂಕಿನ

ಕೂಡ್ಲಿಗಿ:

ವೆಸ್ಟ್ ಸೌತ್ ಏಷ್ಯ ಪ್ಯಾರ ಒಲಂಪಿಕ್‍ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಗೆಲ್ಲುವ ಮೂಲಕ ತಾಲ್ಲೂಕಿನ ಕಾಟ್ರಹಳ್ಳಿ ಗ್ರಾಮದ ಕೆ.ಎಂ. ಶರಣಯ್ಯ ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ತುಳಿಸಿ ನಾಯ್ಕ್ ನೇತೃತ್ವದ ರಾಜ್ಯದ 45 ಜನರಿದ್ದ ತಂಡದಲ್ಲಿ ಸ್ಥಾನ ಪಡೆದ ಶರಣಯ್ಯ ಆಗಸ್ಟ್ 24ರಿಂದ ನೇಪಾಳದ ಕಾಟ್ಮಂಡುವಿನಲ್ಲಿ ನಡೆದ ವೆಸ್ಟ್ ಸೌತ್ ಏಷ್ಯ ಅಂಗವಿಕಲ ಕ್ರೀಡಾ ಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ.

ಕಾಟ್ರಹಳ್ಳಿಯಂತಹ ಕುಗ್ರಾಮದ ಕೆ.ಎಂ. ಸಿದ್ದಲಿಂಗಮೂರ್ತಿ ಹಾಗೂ ಈರಮ್ಮರ ಮೂವರು ಮಕ್ಕಳಲ್ಲಿ ಹಿರಿಯನಾದ ಶರಣಯ್ಯ ಎಂ.ಎ. ಬಿಇಡಿ ಪದವಿದರ. ಪೊಲೀಯೋದಿಂದ ತನ್ನ ಎರಡು ಕಾಲುಗಳು ಊನವಾಗಿದ್ದರೂ ನಿರಂತರ ಛಲದಿಂದ ಶಾಲಾ ಕೇಲೇಜು ದಿನಗಳಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಗಳಲ್ಲಿ ಭಾಗಿಯಾಗುತ್ತಿದ್ದ. ಇದರ ಸ್ಪೋರ್ತಿಯಿಂದಲೇ ಏಷ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ಗುಂಡು ಎಸೆತದಲ್ಲಿ ಬೆಳ್ಳಿ ಹಾಗೂ ಬಲ್ಲೆ ಎಸೆತದಲ್ಲಿ ಕಂಚಿನ ಪದಕ ಗೆದಿದ್ದಾರೆ. ಈಜು ಸ್ಪರ್ಧೆಯಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಬಹಳಷ್ಟಿತ್ತು. ಆದರೆ ಅಲ್ಲಿನ ಪ್ರತಿಕೂಲ ಹವಮಾನದಿಂದ ಈಜಿನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಅಲ್ಲದೆ ಒಬ್ಬರಿಗೆ ಎರಡು ಕ್ರೀಡೆಗೆ ಮಾತ್ರ ಅವಕಾಶವಿತ್ತು. ಇಂತಹ ದೊಡ್ಡ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ನನಗೆ ಹೋಸ ಪ್ರದೇಶ, ಹೊಸ ಜನಗಳ ಮಧ್ಯ ನಮ್ಮ ವಿಭಾಗದಲ್ಲಿ ಯಾರು ಇದ್ದಾರೆ, ಎಷ್ಟು ಜನ ಇದ್ದಾರೆ ಎಂದು ತಿಳಿದುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಆದರೆ ನನ್ನ ಪಾಲಿನ ಕ್ರೀಡೆಯಲ್ಲಿ ಪದಕ ಗೆಲ್ಲುವುದೇ ನನ್ನ ಗುರಿಯಾಗಿದ್ದು, ಅದನ್ನು ಸಾಧಿಸಿದ ತೃಪ್ತಿ ಇದೆ ಎಂದು ತನ್ನ ಅನುಭವವನ್ನು ಹಂಚಿಕೊಂಡರು.

“ಕಳೆದ ಬಾರಿ ಈ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ಇತ್ತು. ಕ್ರೀಡಾ ಕೂಟದಲ್ಲಿ ಭಾಗಿಯಾಗಲು ಸ್ವಂತ ಖರ್ಚಿನಲ್ಲಿ ಹೋಗಿ ಬರಬೇಕು. ಹಣಕಾಸಿನ ತೊಂದರೆಯಿಂದ ಹೋಗಲು ಸಾಧ್ಯವಾಗಲಿಲ್ಲ. ಚಿಕ್ಕಮ್ಮ ಬಸಮ್ಮ ಶಿವಯ್ಯ, ಅತ್ತೆ ಶಾರದಮ್ಮ ವೀರಭದ್ರಯ್ಯ, ಸಹೋದರಿ ಸುಶೀಲಮ್ಮ ರೇವಯ್ಯ, ಚಿಕ್ಕಪ್ಪರಾದ ಸಣ್ಣ ಶರಣಯ್ಯ, ದೊಡ್ಡ ಶರಣಯ್ಯ ಅಣುಬೂರ್ ಶಿವಯ್ಯ ನೀಡಿದ ಕೈಸಾಲ ಹಾಗೂ ನನ್ನ ಗ್ರಾಮದ ಎಲ್ಲರ ಹಾರೈಕೆ, ಸಹಕಾರದಿಂದ ಈ ಬಾರಿ ಕ್ರೀಡಾ ಕೂಟದಲ್ಲಿ ಭಾಗಿಯಾಗಲು ಸಾಧ್ಯವಾಯಿತು” ಎನ್ನುತ್ತಾರ ಶರಣಯ್ಯ.
‘ದೇಶದ ವಿವಿಧ ಭಾಗಗಳಲ್ಲಿ ಬಾರಿ ಮಳೆ ಸುರಿಯುತ್ತಿತ್ತು. ಇದರಿಂದ ದೂರದ ನೇಪಾಳಕ್ಕೆ ಮಗ ಹೋಗುವಾಗ ಆತಂಕದಲ್ಲಿದ್ದೇವು. ಆದರೆ ಅಲ್ಲಿಗೆ ಹೋಗಿ ಮಗ ಪದಕ ಗೆದ್ದು ಬಂದಾಗ ಆತಂಕವೆಲ್ಲ ದೂರವಾಗಿ ಸಂತಷ ಇಮ್ಮಡಿಯಾಗಿದೆ’ ಎಂದು ಶರಣಯ್ಯ ಅವರ ತಂದೆ ತಾಯಿ ಬಾಹುಕರಾಗಿ ಹೇಳುತ್ತಾರೆ.

ಕ್ರೀಡಾ ಕೂಟಕ್ಕೆ ಹೋಗಿ ಬರಲು ಒಂದು ಲಕ್ಷ ರೂಪಾಯಿಗೂ ಅಧಿಕ ಖರ್ಚು ಬಂದಿದೆ. ಮೂರು ಎಕರೆ ಜಮೀನಿನಲ್ಲಿಯೇ ಕೃಷಿ ಮಾಡಿ ನನ್ನ ಕುಟುಂಬ ಜೀವನ ನಡೆಸಬೇಕು. ಈಗ ನ್ನನ್ನ ಸಂಬಂಧಿಗಳು ನೀಡಿದ ಕೈಸಾಲ ಮರಳಿ ನೀಡಬೇಕು. ಅಲ್ಲದೆ ಮುಂದೆ ದುಬೈನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ದಾನಿಗಳು ಹಣಕಾಸಿನ ನೆರವು ನೀಡಬೇಕು ಎಂದು ಶರಣಯ್ಯ ಮನವಿ ಮಾಡಿದ್ದಾರೆ. ದಾನಿಗಳು ಕೂಡ್ಲಿಗಿ ಎಸ್‍ಬಿಐ ಶಾಖೆಯ 3109173418 ಖಾತೆಗ ಹಣ ಜಮೆ ಮಾಡಬಹುದು.

Recent Articles

spot_img

Related Stories

Share via
Copy link