ಪಂಚತಂತ್ರ, ಪ್ರಜಾಧ್ವನಿ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ : ಸಚಿವ

ತುಮಕೂರು

    ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಪ್ರಜಾಧ್ವನಿ, ಪ್ರಜಾತಂತ್ರದ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಿವೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

    ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಬಿಜೆಪಿ ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ದೇಶವನ್ನು ಹಿಂದೂ, ಮಸ್ಲೀಂ ಎಂದು ವಿಭಾಗ ಮಾಡಿದ ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಹಾಗು ಪ್ರಜಾದ್ವನಿ ಕಾರ್ಯಕ್ರಮ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಎರಡು ಬಾರಿ ಮುಖ್ಯಯಾದರು ಜನರಿಗೆ ಸ್ಪಂದಿಸಿ ಕೆಲಸ ಮಾಡದೆ ಪಂಚತಂತ್ರ ಯಾತ್ರೆ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಹೊರಟಿದ್ದಾರೆ.ಆದರೆ ದೇಶದ ಜನರಿಗೆ ಗೊತ್ತಿದೆ.ಹಾಗಾಗಿ ಜನರ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿರುವ ಬಿಜೆಪಿಯನ್ನು ರಾಜ್ಯದಲ್ಲಿ ಜನರು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ 09 ವರ್ಷಗಳಲ್ಲಿ ಅತ್ಯಂತ ನಿಕೃಷ್ಟಕ್ಕೆ ಒಳಗಾದ ಸಮುದಾಯಗ ಳಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಿದೆ. ಜಿಲ್ಲೆಯ ಡಾ.ಸೂಲಗಿತ್ತಿ ನರಸಮ್ಮ, ಕೋಲಾರ ಜಿಲ್ಲೆ ತಮಟೆ ಮುನಿವೆಂಕಟಪ್ಪ ಇಂತಹರು ನಾಡಿಗೆ ಪರಿಚಯವಾಗಿದ್ದು ಬಿಜೆಪಿ ಕಾಲದಲ್ಲಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಅವರಿಗೆ ಭಾರತ ರತ್ನ ನೀಡಿದ್ದು ಸಹ ಬಿಜೆಪಿಯೇ ,ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಕೇವಲ ಮೊಸಳೆ ಕಣ್ಣೀರು ಎಂದು ಕೆಂದ್ರ ಸಚಿವ ಎ.ನಾರಾಯಣಸ್ವಾಮಿ ಹರಿಹಾಯ್ದರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ಅವರು ಕ್ಷೇತ್ರದ ಅಭಿವೃದ್ದಿಗೆ ನಿರಂತರ ಹೋರಾಟ ನಡೆಸಿದ್ದಾರೆ.

   ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಅವರನ್ನು ಮತ್ತೊಂದು ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು

    ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಬಿಜೆಪಿ ಪಕ್ಷ ನೀಡಿದ ಕೊಡುಗೆ ಅಪಾರ/ ಸುರೇಶಗೌಡ ಅನುಭವವುಳ್ಳ ರಾಜಕಾರಣಿ ಅವರ ಸೇವೆ ನಿಮಗೆ ದಕ್ಕಬೇಕೆಂದರೆ ತಾವೆಲ್ಲರೂ ಮತ್ತೊಂದು ಬಾರಿ ಅವರಿಗೆ ಶಾಸಕರಾಗಲು ಮತ ನೀಡುವಂತೆ ಕೋರಿದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಹೆಬ್ಬಾಕ ರವಿಶಂಕರ್,ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಸಮಾವೇಶ ನಡೆಸುತ್ತಿದೆ.,ಎಲ್ಲಾ ವರ್ಗಗಳಿಗೆ ಪ್ರಾದ್ಯಾನತೆ ನೀಡಿದೆ ಎಂದರು.

    ವೇದಿಕೆಯಲ್ಲಿ, ಶಾಸಕ ಜಿ.ಬಿ.ಜೋತಿ ಗಣೇಶ್, ಚಲವಾದಿ ಮಹಾ ಸಭಾ ರಾಜ್ಯಾಧ್ಯಕ್ಷ ಕೆ.ಶಿವರಾಂ, ಶಾರದ,ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಹೆಚ್.ವಿ.ವೆಂಕಟೇಶ, ವೈ.ಹೆಚ್. ಹುಚ್ಚಯ್ಯ, ಗೂಳೂರು ಶಿವಕುಮಾರ್,ಮಾಸ್ತಿಗೌಡ, ಗಂಗಾಂಜನೇಯ್ಯ ಶದೊಡ್ಡೇರಿ ವೆಂಕಟೇಶ್, ರಾಜುಗೌಡ, ಉಮೇಶ್ ಗೌಡ, ರಘುನಾಥ್,ಅರೆಕೆರೆ ರವಿ, ರಾಮಚಂದ್ರ ಪ್ಪ, ವೈ.ಟಿ.ನಾಗರಾಜು.ಅನಿತಾ ಸಿದ್ದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link