ಅಲರ್ಟ್‌ ಅಲರ್ಟ್…..:‌ ಜೂನ್‌ 1 ರಿಂದ ಬದಲಾಗಲದೆ ಚಾಲನಾ ಪರವಾನಿಗೆ ನಿಯಮಗಳು

ವದೆಹಲಿ :

    ವಾಹನ ಸವಾರರೇ ಗಮನಿಸಿ ಇನ್ಮುಂದೆ ಚಾಲನಾ ಪರವಾನಿಗೆ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಿಗೆ ಖಾಸಗಿ ಸಂಸ್ಥೆಗಳಿಗೆ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಮತ್ತು ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ‌ ನೀಡಲಾಗಿದೆ.

    ಈ ಹೊಸ ನಿಯಮವು ಜೂನ್ 1ರಿಂದ ಜಾರಿಗೆ ಬರಲಿದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರ ಹೊಸ ನಿಯಮಗಳನ್ನು ತಂದಿದೆ.

    ಇದರ ಪ್ರಕಾರ ಖಾಸಗಿ ಚಾಲನಾ ತರಬೇತಿ ಕೇಂದ್ರ ನಡೆಸಲು ಕನಿಷ್ಠ 1 ಎಕರೆ ಜಮೀನು ಇರಬೇಕು. 4 ಚಕ್ರದ ಮೋಟರ್‌ ವಾಹನಗಳಿಗೆ ಡ್ರೈವಿಂಗ್ ಸೆಂಟರ್‌ನಲ್ಲಿ ಹೆಚ್ಚುವರಿ 2 ಎಕರೆ ಜಮೀನು ಬೇಕಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರ ಸೂಕ್ತವಾದ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ. ತರಬೇತುದಾರರು ಕನಿಷ್ಠ ಪ್ರೌಢಶಾಲಾ ಶಿಕ್ಷಣ ಪಡೆದಿರಬೇಕು. ಇದಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.

    ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೂಲಭೂತ ಅಂಶಗಳನ್ನು ತರಬೇತುದಾರರು ತಿಳಿದಿರಬೇಕಾಗುತ್ತದೆ. ಲಘು ವಾಹನ ತರಬೇತಿಯನ್ನು 4 ವಾರಗಳಲ್ಲಿ ಎಂದರೆ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಥಿಯರಿ ಹಾಗೂ ಪ್ರಾಯೋಗಿಕ ಎಂಬ ಕನಿಷ್ಠ ಎರಡು ವಿಭಾಗಗಳಾಗಿ ವಿಂಗಡಿಸಬೇಕು. ಇದರಲ್ಲಿ, ಥಿಯರಿ ವಿಭಾಗ 8 ಗಂಟೆಗಳಿದ್ದರೆ ಪ್ರಾಯೋಗಿಕ 21 ಗಂಟೆಗಳಿರಬೇಕು.

    ಭಾರೀ ಮೋಟಾರು ವಾಹನಗಳಿಗೆ 38 ಗಂಟೆಗಳ ತರಬೇತಿ ಇರುತ್ತದೆ. ಇದರಲ್ಲಿ 8 ಗಂಟೆ ಥಿಯರಿ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿ ಇರುತ್ತದೆ. ಈ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮಗಳ ಉದ್ದೇಶವಾಗಿದೆ. ವಿವಿಧ ರೀತಿಯ ಡ್ರೈವಿಂಗ್‌ ಲೈಸೆನ್ಸ್‌ಗಳಿಗೆ ವಿವಿಧ ಶುಲ್ಕಗಳನ್ನು ವಿಧಿಸಲಾಗಿದೆ. ಕಲಿಕಾ ಪರವಾನಗಿ 200 ರೂ., ಕಲಿಕಾ ಪರವಾನಗಿ ನವೀಕರಣಕ್ಕೆ 200 ರೂ., ಅಂತಾರಾಷ್ಟ್ರೀಯ ಪರವಾನಗಿ 1000 ರೂ. ಹಾಗೂ ಶಾಶ್ವತ ಪರವಾನಗಿ 200 ರೂ. ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap