ಹಾನಗಲ್ಲ :
ಪಠ್ಯಗಳ ಮೂಲಕ ಮಹಾತ್ಮರನ್ನು ಬಾಲ್ಯದಲ್ಲೇ ಪರಿಚಯಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದ ದೇಶಾಭಿಮಾನವನ್ನು ಜಾಗೃತಗೊಳಿಸುವ ನಿಜವಾದ ದೇಶ ಸೇವೆ ಆರಂಭವಾಗಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಕರೆ ನೀಡಿದರು.
ಮಂಗಳವಾರ ಹಾನಗಲ್ಲಿನ ಸದಾಶಿವ ಮಂಗಲಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಉತ್ಸವ ಉದ್ಘಾಟಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಪರತಂತ್ರದಲ್ಲಿದ್ದಾಗ ನಮ್ಮಲ್ಲಿ ಯುದ್ಧ ಸಾಧನಗಳು ಇಲ್ಲದಿದ್ದರೂ ಸಾಧನೆ ಮಾಡಿದ್ದಾರೆ. ಕನ್ನಡದ ಶ್ರೇಷ್ಟ ವೀರ ರಾಣಿ ಕಿತ್ತೂರ ಚನ್ನಮ್ಮ ನಮಗೆಲ್ಲ ಆದರ್ಶ. ಅವಳ ಮಾನವೀಯ ಮೌಲ್ಯಗಳನ್ನು ಅನುಸರಿಸಿ ಆಚರಸಬೇಕಾಗಿದೆ. ನಮ್ಮ ದೇಶದ ಚರಿತ್ರೆಯನ್ನು ತಿಳಿದರೆ ಮಾತ್ರ ನಮಗೆ ಸ್ವಾಭಿಮಾನ ಮೂಡಬಲ್ಲದು. ಆದರೆ ಸ್ವಾತಂತ್ರ್ಯ ಸ್ವೆಚ್ಛಾಚಾರವಾಗಬಾರದು ಎಂದರು.
ಉಪನ್ಯಾಸ ನೀಡಿದ ಶಿಗ್ಗಾಂವಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಸುಜಾತಾ ದೇವರಮನಿ, ಮಹಾಪುರುಷರನ್ನು ಜಾತಿಯ ಚೌಕಟ್ಟಿಗೆ ಕಟ್ಟುವುದು ಬೇಡ. ಸ್ವಾತಂತ್ರ್ಯ ಸ್ವಾಭಿಮಾನದ ಸಂಕೇತವಾಗಿದ್ದ ಕಿತ್ತೂರು ವೀರರಾಣಿ ಚನ್ನಮ್ಮ ಒಂದು ಆದರ್ಶ. ಅಗ್ರ ಪಂಕ್ತಿ. ಕೇವಲ 51 ವರ್ಷಗಳ ಜೀವಿತಾವಧಿಯಲ್ಲಿ ಪತಿಯನ್ನು ಕಳೆದುಕೊಂಡೂ ತನ್ನ ರಾಜ್ಯವನ್ನು ಗಂಡುಮೆಟ್ಟೆನ ಧೈರ್ಯದೊಂದಿಗೆ ಕಾಪಾಡಿದ ವೀರ ಮಹಿಳೆ. ಆದರೆ ಕೊಂಡಿ ಮಂಚಣ್ಣ, ಮಲ್ಲಪ್ಪ ಶೆಟ್ಟಿಯಂತಹ ಧೂರ್ತ ದುಷ್ಟರ ಸ್ವಾರ್ಥಕ್ಕೆ ದೇಶ ಬಲಿಯಾಗಿರುವುದು ಇತಿಹಾಸ ಎಂದರು.
ತಾಲೂಕು ತಹಶೀಲ್ದಾರ ಸಿ.ಎಸ್.ಭಂಗಿ ಮಾತನಾಡಿ, ಮಹಾತ್ಮರ ಆದರ್ಶ ಪಾಲನೆ ಮೂಲಕ ನಮ್ಮ ಮಲೀನಗೊಂಡ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕು. ನಾವು ನಾಡಿಗಾಗಿ ಈಗ ಏನೂ ಮಾಡಬೇಕಾಗಿಲ್ಲ. ನಮಗಾಗಿ, ನಮ್ಮ ಉಳಿವಿಗಾಗಿ ಹೋರಾಡಬೇಕಾಗಿದೆ. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಸದಸ್ಯ ಬಸವರಾಜ ಬೂದಿಹಾಳ, ಎ.ಎಸ್.ಬಳ್ಳಾರಿ, ನಿಜಲಿಂಗಪ್ಪ ಮುದಿಯಪ್ಪನವರ, ಸೋಮಶೇಖರ ಕೋತಂಬರಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ಶೇಖಣ್ಣ ಮಹಾರಾಜಪೇಟ, ಬಸವಣ್ಣೆಪ್ಪ ಬೆಂಚಿಹಳ್ಳಿ, ಕುಳೇನೂರ, ಚಂದ್ರಣ್ಣ ಕಳ್ಳಿ, ನಾಗಣ್ಣ ಶಿವಣ್ಣನವರ ಇದ್ದರು.=
ಪ್ರತಿಭಾ ಪುರಸ್ಕಾರ :
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರೇಮಾ ಸೈದಣ್ಣನವರ, ಶಿವಾನಿ ಅಗಸನಹಳ್ಳಿ, ಶುಭಲಕ್ಷ್ಮೀ ಪಾಟೀಲ, ವಿಜಯಲಕ್ಷ್ಮೀ ದೇವಿಹೊಸೂರ, ಸಹನಾ ಯಲಿಗಾರ, ಯಶವಂತ ನರೆಗಲ್ಲ, ಗೌರಮ್ಮ ಚನ್ನಗೌಡರ, ಚೇತನ್ ಓಣಿಮನಿ, ಮಲ್ಲಿಕಾರ್ಜುನ ಕ್ಷೌರದ, ಭಾಗ್ಯಾ ಕೊಪ್ಪದ, ಶುಷ್ಮಾ ನರೇಗಲ್ಲ, ಸಂಜೀವಕುಮಾರ ಸಂಕಣ್ಣನವರ, ಚೈತ್ರಾ ನೆಲೋಗಲ್, ಸುಮಾ ನಲೋಗಲ್ಲ, ಮಂಜುನಾಥ ವಿಜಾಪುರ ಅವರುಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆರ್.ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ