ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ತುರುವೇಕೆರೆ

               72ನೇ ಸ್ವಾತಂತ್ರ್ಯೋತ್ಸವ ದಿನದಂದು ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪರಿಷತ್ ಮಂತ್ರಿ ಮಂಡಲದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.

              ಮುಖ್ಯಮಂತ್ರಿಯಾಗಿ ಟಿ.ಎನ್.ಮುಕ್ತ, ಉಪ ಮುಖ್ಯಮಂತ್ರಿಯಾಗಿ ಟಿ.ಎಂ.ಮೈತ್ರಿ, ಶಿಕ್ಷಣ ಸಚಿವರಾಗಿ ಎನ್.ಸ್ಮøತಿ, ಶಿಕ್ಷಣ ಸಹಾಯಕ ಸಚಿವರಾಗಿ ಎಂ.ಎನ್.ಕನ್ನಿಕ, ಕಾನೂನು ಸಚಿವರಾಗಿ ಆರ್.ಪ್ರಿಯಾಂಕ, ಕಾನೂನು ಸಹಾಯಕ ಸಚಿವರಾಗಿ ನೂರ್ ಸಲ್ಮಾ ಖಾನಮ್, ಸಾಂಸ್ಕøತಿಕ ಸಚಿವರಾಗಿ ಸಹ್ಯಾದ್ರಿ ಜಂಗಮ್, ಸಾಂಸ್ಕøತಿಕ ಇಲಾಖಾ ಸಹಾಯಕ ಸಚಿವರಾಗಿ ರಾಹುಲ್ ಪಾಲಿವಾಲ್, ಕ್ರೀಡಾ ಸಚಿವರಾಗಿ ಹೆಚ್.ಎಂ.ತೇಜಸ್, ಸಹಾಯಕ ಸಚಿವರಾಗಿ ಸಿ.ಪಿ.ಕಿರಣ್, ಸಾರಿಗೆ ಸಚಿವರಾಗಿ ಹೆಚ್.ಎಂ.ಶರ್ಮಿತ್ ಸಹಾಯಕ ಸಚಿವರಾಗಿ ಟಿ.ಎ.ಚಿರಾಗ್, ಆರೋಗ್ಯ ಸಚಿವರಾಗಿ ಡಿ.ಆರ್.ರೋಹಿತ್ ಗೌಡ, ಸಹಾಯಕ ಸಚಿವರಾಗಿ ಡಿ.ವಿ.ಗಾನವಿ ಪ್ರಮಾಣ ವಚನ ಸ್ವೀಕರಿಸಿದರು.

               ಪ್ರಮಾಣ ವಚನವನ್ನು ಇಂಡಿಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ಬೋಧಿಸಿದರು.
ಶಿಕ್ಷಣ ಟ್ರಸ್ಟ್‍ನ ನಿರ್ದೇಶಕ ಚಿರಂಜೀವಿ ಮಾತನಾಡಿ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲರಿಗೂ ಮಾದರಿಯಾಗಿ ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.

                ಸಮಾರಂಭದಲ್ಲಿ ಆಡಿಟರ್ ತೇಜು, ಪ್ರಾಂಶುಪಾಲೆ ಪುಷ್ಪಾ ಎಸ್ ಪಾಟೀಲ್, ಮುಖ್ಯ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link