ತಿಪಟೂರು :
ತಾಲ್ಲೂಕಿನಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊನ್ನವಳ್ಳಿಯಲ್ಲಿ ಶನಿವಾರ ರಾತ್ರಿ ಹಸುಗಳ ಷೆಡ್ ಮುರಿದು ಬಿದ್ದು ಹಸುವೊಂದು ಸತ್ತಿದೆ.
ಹೊನ್ನವಳ್ಳಿ ಗ್ರಾಮದ ಅಶ್ವತ್ಥ್ ನಾರಾಯಣ್ ಅವರಿಗೆ ಸೇರಿದ ದನಗಳ ಷೆಡ್ ಮುರಿದು ಬಿದ್ದಿದ್ದು, ಒಂದು ಹಸು ಸ್ಥಳದಲ್ಲೇ ಸತ್ತಿದೆ. ಷೆಡ್ ಅಡಿ ಸಿಲುಗಿದ್ದ ಇನ್ನೊಂದು ಹಸು ಹಾಗೂ ಎರಡು ಕರುಗಳಿಗೆ ಗಾಯಗಳಾಗಿದ್ದು ಉಪಚರಿಸಲಾಗುತ್ತಿದೆ. ಹಸುಗಳನ್ನು ಕಳೆದಕೊಂಡಿರುವ ಮಾಲೀಕ ತನ್ನ ಜೀವನಕ್ಕೆ ಆಧಾರಸ್ತಂಭವಾಗಿದ್ದ ಹಸು ಮರಣ ಹೊಂದಿದ್ದು, ತನಗೆ ದಿಕ್ಕೆ ತೋಚದಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ