ತುಮಕೂರು :
ಪುಣೆಯಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಕನ್‍ಸ್ಟ್ರಕ್ಷನ್ ಮ್ಯಾನೇಜ್‍ಮೆಂಟ್ ಅಂಡ್ ರಿಸರ್ಚ್ ವಿಶ್ವವಿದ್ಯಾಲಯದಲ್ಲಿ ಅ.6 ರಂದು ನಡೆದ ಘಟಿಕೋತ್ಸವದಲ್ಲಿ ತುಮಕೂರು ನಗರದ ಹನುಮಂತ ಪುರದ ಡಯಟ್‍ನ ಹಿರಿಯ ಉಪನ್ಯಾಸಕ ವೈ.ಎನ್. ರಾಮಕೃಷ್ಣಯ್ಯ ಹಾಗೂ ಶ್ರೀಮತಿ ನಿರ್ಮಲ ರವರ ಸುಪುತ್ರಿಯಾದ ಕು.ಶ್ವೇತಾ ವೈ.ಆರ್. ರವರು ಪ್ರಾಜೆಕ್ಟ್ ಎಂಜಿನಿಯರಿಂಗ್ ಮತ್ತು ನಿರ್ವಹಣೆಯ ಸ್ನಾತಕೋತ್ತರ ವಿಭಾಗದಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಪದಕ ಮತ್ತು ಪದವಿ ಪ್ರಮಾಣಪತ್ರವನ್ನು ಎನ್‍ಐಸಿಎಂಎಆರ್ ಅಧ್ಯಕ್ಷ ಮತ್ತು ಹಿಂದೂಸ್ತಾನ್ ನಿರ್ಮಾಣ ಮಂಡಳಿಯ ಅಧ್ಯಕ್ಷ ಅಜಿತ್ ಗುಲಾಬ್‍ಚಂದ್ ಅವರು ನೀಡಿ ಗೌರವಿಸಿದ್ದಾರೆ.