ಪಪಂ ಚುನಾವಣೆ: 2ನೇ ವಾರ್ಡ್‍ನಿಂದ ನಾಮಪತ್ರ ಸಲ್ಲಿಕೆ

ಗುಬ್ಬಿ

              ಪಟ್ಟಣ ಪಂಚಾಯತಿ ಚುನಾವಣೆಗೆ ಎರಡನೆ ವಾರ್ಡ್‍ನಿಂದ ಕೆ.ಎನ್.ಸವಿತಾಸುರೇಶ್‍ಗೌಡ ಜೆಡಿಎಸ್ ಪಕ್ಷದಿಂದ ಸಾಮಾನ್ಯ ಮಹಿಳೆಯಾಗಿ ನಾಮಪತ್ರ ಸಲ್ಲಿಸಿದರು.

               ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ನಾನು ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿಯಾಗಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಿದ್ದೇನೆ. ತಾಲ್ಲೂಕಿನಲ್ಲಿ ಜನಪರವಾದ ಕೆಲಸ ಮಾಡಿದ್ದು ಸ್ನಾತಕೋತ್ತರ ಪದವಿ ಪಡೆದಿರುವ ನಾನು ಹಲವು ಸಮಾಜಮುಖಿ ಸೇವಾ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ. ಸಚಿವರಾದ ಎಸ್.ಆರ್.ಶ್ರೀನಿವಾಸ್ ರವರು ತಾಲ್ಲೂಕಿನಲ್ಲಿ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಪ್ರಸಕ್ತ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ ಎಂದು ತಿಳಿಸಿದ ಅವರು, ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮಹದಾಸೆ ಹೊಂದಿದ್ದು ವಾರ್ಡ್‍ನ ಮತದಾರರು ಪೂರ್ಣ ಪ್ರಮಾಣದ ಸಹಕಾರ ನೀಡಿದರೆ ವಾರ್ಡ್‍ನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

                ನನ್ನ ಪತಿಯವರು ಸಹ ಕಳೆದ ಬಾರಿ ಇದೆ ವಾರ್ಡ್‍ನಲ್ಲಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ನೀವು ನನ್ನನ್ನು ಆಯ್ಕೆ ಮಾಡಿದರೆ ಖಂಡಿತವಾಗಿ ಈ ವಾರ್ಡ್‍ಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

 

Recent Articles

spot_img

Related Stories

Share via
Copy link