ತಣ್ಣನೆಯ ಗಾಳಿಯ ಜೊತೆಗೆ,
ಸಣ್ಣ ಮಳೆಹನಿ ತರುತ್ತಿದ್ದ ಸಂದೇಶವನು,
ಅರಿಯದೆ ಹೋದೆರು ಮನುಜರು ಬಹಳ ದಿನ,
ಬಾರಿ ಬಾರಿ ಬೋಧನೆಗೆ ಬಂದು,
ಚಿಕ್ಕ ಪುಟ್ಟ ಅವಾಂತರವ ತಂದು,
ಮುಂದಿನ ಅನಾಹುತದ ಎಚ್ಚರಿಕೆ ಕೊಟ್ಟರೂ,
ಅದನರಿಯದೆ ಹೋದರು ನಮ್ಮ ಜನ,
ಕಡಿದರು ಕಾಡನು,
ಒಡೆದರು ಭೂತಾಯಿಯ ಒಡಲನು,
ಮುಚ್ಚಿದರು ನೀರು ಸಾಗುವ ಕಾಲುವೆಯನು,
ಬರಡು ಮಾಡಿದರು ವನವನು,
ಬಗಿದರು ನೆಲವನು,
ಕಟ್ಟಿದರು ಅಲ್ಲೇ ಕಟ್ಟಡವನ್ನು,
ಹಿಡಿದಿಟ್ಟ ನೋವನು ತಾಡಿಯಲಾರದೆ,
ಕಣ್ಣೀರಿಟ್ಟಳು ನಿಸರ್ಗ ದೇವತೆ,
ಆ ಕಣ್ಣೀರಿನ ಹೊಡೆತಕ್ಕೆ,
ಪ್ರವಾಹವೆ ಎದ್ದಿತು ಧರೆಯಲಿ,
ಎಲ್ಲಾ ತೇಲಿ ಹೋಯಿತು ಅದರಲಿ,
ನಾವು ಬರುವೇವು ಧರೆಗೆ,
ಹೋಗುವೆವು ಕೊನೆಗೆ,
ಶಾಶ್ವತವಲ್ಲ ಈ ಜೀವನ,
ಕಾಡು ಬೆಳೆಸಿ,
ನಾಡು ಉಳಿಸಿ,
ಬದುಕಲಿ ಮುಂದಿನ ಪೀಳಿಗೆಯು,
ಚಂದ ಪರಿಸರದ ನಡುವಲಿ ಜೀವನ.
ಪರಿಸರ ನಾಶವೇ, ಪ್ರಕೃತಿ ವಿಕೋಪಕ್ಕೆ ಕಾರಣ.
ಗಿಡ ಮರಗಳ ನೆಡೋಣ,
ಒಳ್ಳೇ ಗಾಳಿ ನೀರು ಕುಡಿಯೋಣ,
ಸುಂದರ ಪರಿಸರದಲ್ಲಿ
ಖುಷಿ ಖುಷಿಯಾಗಿ ಬಾಳೋಣ.
– ಪವನ್ ಕಶ್ಯಪ್.ಹೆಚ್.ಬಿ., ಹೊದಿಗೆರೆ.
ಜಂಗಮವಾಣಿ :+91 88927 18021