ಕರಾಳ ದಿನ
ವಂದಿಸುವೆವು ನಿಮಗೆ ಶಿರಬಾಗಿ
ದೇಶಕ್ಕಾಗಿ ತ್ಯಾಗ ಬಲಿದಾನದ ಗೈದ
ಭರತ ಮಾತೆಯ ಅಮರ ಸೇನಾನಿಗಳೆ
ಹೇಗೆ ಮರೆಯುವೇವು ನಾವು
ಉಗ್ರರ ದಾಳಿಗೆ ಪ್ರಾಣಾರ್ಪಣೆ ಮಾಡಿದ
ಕರಾಳ ದಿನವ ವೀರ ಸೇನಾನಿಗಳೆ
ಜಮ್ಮು ಕಾಶ್ಮೀರ ದೇಶದ ಮುಕುಟ ಮಣಿ
ಪುಲ್ವಾಮಾ ಆ ನೆಲದ ಭೂ ಲೋಕ ಸ್ವರ್ಗ
ಮುಕ್ತಿ ಪಡೆದಿರಿ ಇಲ್ಲಿ ಧೀರ ಸೇನಾನಿಗಳೆ
ಮಿತಿ ಮೀರಿದ ಭಯೋತ್ಪಾದನೆ ಚಟುವಟಿಕೆ
ನೆರೆಯ ಮಿತ್ರ ದ್ರೋಹಿ ರಾಷ್ಟ್ರದ ಕುಮ್ಮಕ್ಕು
ಬಗ್ಗು ಬಡಿದವರು ತಾವು ಶೂರ ಸೇನಾನಿಗಳೆ
ಭಾರತ ಮಾತೆಯ ಇತಿಹಾಸ ಪುಟಗಳಲ್ಲಿ
ಹಚ್ಚಳಿಯದೆ ದಾಖಲಾಗಿದೆ ತಮ್ಮ ಹೆಸರು
ಧನ್ಯರಾದಿರಿ ತಾವು ಅಮರ ಸೇನಾನಿಗಳೆ
ಪವಿತ್ರ ಮಣ್ಣಲ್ಲಿ ಲೀನವಾಗಿ ಹುತಾತ್ಮರಾದಿರಿ
ರಕ್ತದ ನೈವೇದ್ಯವನ್ನು ಅರ್ಪಿಸಿ
ಅಮರರಾದಿರಿ
ತಮಗೆ ನಮನ ಅಭಿಮಾನದ ಸೇನಾನಿಗಳೆ. ||
ವೆನ್ನಲಕೃಷ್ಣ ತುಮಕೂರು.
