ಹಾನಗಲ್ಲ :
ಪ್ರಸಕ್ತ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಅಬ್ಬರದ ನಡುವೆಯು ಮಣ್ಣಿಂದ ಕಾಯ.. ಮಣ್ಣಿಂದ, ಮಣ್ಣಿಂದ ಸಕಲ….. ಎಂಬ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನುಡಿಯಂತೆ. ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಕುಟುಂಬವೊಂದು ಮಣ್ಣಿನಿಂದಲೆ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಜೀವನ ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
ಹಾನಗಲ್ಲ ತಾಲೂಕ ಅಜಗುಂಡಿಕೊಪ್ಪ ಗ್ರಾಮದಲ್ಲಿ ಮೂಕಪ್ಪ ಚಕ್ರಸಾಲಿ ಕುಟುಂಬ,
ಸುಮಾರು 50 ವರ್ಷಗಳಿಂದ ಮಣ್ಣಿನಿಂದ ಆಕರ್ಷಕ ಗಣಪತಿಯನ್ನು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ, ಮಣ್ಣೆತ್ತಿನ ಅಮವಾಸ್ಯೆಗೆ ಮಣ್ಣಿನಿಂದ ಮಾಡಿದ ಎತ್ತಿನ ಮೂರ್ತಿಗಳನ್ನು, ನಾಗರಪಂಚಮಿಗೆ ನಾಗರ ಮೂರ್ತಿಯನ್ನು ಹಾಗೂ ಗಣೇಶ ಚತುರ್ಥಿಗೆ ಯಾವುದೆ ಅಚ್ಚುಗಳನ್ನು ಬಳಸದೆ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದಾರೆ. ಇವರ ಜೊತೆಗೆ ಇವರ ಮಕ್ಕಳಾದ ಚನ್ನಬಸಪ್ಪ, ಪುಟ್ಟಪ್ಪ, ಹಾಗೂ ತಮ್ಮ ನಿತ್ಯದ ಮನೆ ಕೆಲಸ ಮುಗಿಸಿ ಪತ್ನಿ ಶಾಂತವ್ವ ಇವರ ಸೊಸೆ ಪುಷ್ಪಾ ಇವರುಗಳು ಕೈಜೊಡಿಸುತ್ತಾರೆ. ಕೆರೆಯಲ್ಲಿ ಸಿಗುವ ಮಣ್ಣನ್ನು ಸೋಸಿ ಹದಮಾಡಿ ಮೂರ್ತಿಯನ್ನು ಮಾಡಲು ಸಿದ್ದಗೊಳಿಸುತ್ತಾರೆ,
ಮೂಕಪ್ಪನವರ ಕೈಚಳಕದಿಂದ ಅಚ್ಚನ್ನು ಉಪಯೋಗಿಸದೆ ಒಂದು ಮೂರ್ತಿಯನ್ನು ತಯಾರಿಸಲು 2 ದಿನಗಳಾದರು ಬೇಕಾಗುತ್ತದೆ ಎನ್ನುತ್ತಾರೆ. ಇವರ ಕೈಚಳಕದ ಕಲೆಗೆ ಸುರಳಿ ಆಕಾರದ ಹಾವಿನ ಮೇಲೆ ಸುತ್ತಿಕೊಂಡು ಹಾವಿನ ಮೇಲೆ ಕುಳಿತಿರುವ ಗಣೇಶ, ಇಡಗುಂಜಿ ಗಣೇಶ, ಕೊಳಲನ್ನು ಉದುತ್ತಿರುವ ಗಣೇಶ, ಮಹರಾಜ ಅವತಾರ ಗಣೇಶ, ಈಶ್ವರನನ್ನು ಅಪ್ಪಿಕೊಂಡಿರುವ ಗಣೇಶ, ಸಿಂಹದ ಮೇಲೆ ಕುಳಿತಿರುವ ಗಣೇಶ, ಹೀಗೆ ಹಲವಾರು ವಿಭಿನ್ನ ರೀತಿಯ 70 ರಿಂದ 80 ಮೂರ್ತಿಗಳನ್ನು ಸಿದ್ದಪಡಿಸಿ ಕನಿಷ್ಠ 200 ರೂ,ದಿಂದ 3000 ರೂ,ಗಳ ವರೆಗೆ ಮೂರ್ತಿಗಳು ಮಾರಾಟಮಾಡುತ್ತಾರೆ.
ಇವರ ಕೈಯಿಂದ ಬಳಸುವ ಗಣೇಶನನ್ನು ಸೂತ್ತಮೂತ್ತಲಿನ ಗ್ರಾಮಗಳಾದ ಮೂಡೂರು, ಗೊಂದಿ ಮಕರವಳ್ಳಿ, ಹಿರೇಕಾಂಶಿ, ಜಂಗಿನಕೊಪ್ಪ, ಕೊಂಡೋಜಿ, ಆನವಟ್ಟಿಯಿಂದ ಖರಿದಿಸಲು ಮುಗಿಬಿಳುತ್ತಾರೆ. ಅನೇಕ ಸಂಘ ಸಂಸ್ಥೆಗಳ ಗಣೇಶ ವಿಗ್ರಹಕ್ಕೆ ಮೂಕಪ್ಪನವರ ಕೈಚಳಕ ಇಲ್ಲದಿದ್ದರೆ ಅದಕ್ಕೆ ಕಳೆಬರುವುದಿಲ್ಲ್ಲವೆಂಬುದಂತು ಸತ್ಯ.
ಒಟ್ಟಿನಲ್ಲಿ ಪಿಒಪಿ ಗಣಪತಿಯಿಂದ ಬೇಸತ್ತು ಹೋಗಿದ್ದ ಗಣೇಶ ಮಣ್ಣಿನ ಮೂರ್ತಿ ತಯಾರಕರು ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.