ಹರಪನಹಳ್ಳಿ :
ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸಿನಲ್ಲೂ ಅದೇ ವಿಷಯ ಅದೇ ಗುಂಗು ಓದಿದ್ದು ತಲೆಗೆ ಹೋಗುವುದಿಲ್ಲ, ಓದುತಿದ್ದರೆ ನಿದ್ರೆ ಬರುವುದು ಒತ್ತಡ, ಖಿನ್ನತೆ ಆರೋಗ್ಯ ಕೆಟ್ಟು ಪರೀಕ್ಷಾ ಜ್ವರ ಕಾಡುತ್ತದೆ ಸ್ಪರ್ಧಾ ಯುಗದಲ್ಲಿ ಕಡಿಮೆ ಅಂಕ ಬಂದರೆ ಭವಿಷ್ಯವಿಲ್ಲ ಎಂಬ ಚಿಂತೆ ಕಾಡುತ್ತದೆ. ಪರೀಕ್ಷಾ ಭಯ ಹೊಡೆದೋಡಿಸಲು ಆತ್ಮವಿಶ್ವಾಸವೇ ಅಸ್ತ್ರ, ಆತ್ಮವಿಶ್ವಾಸ ಎಲ್ಲಾ ಜಯದ ಮೂಲ ಎಂದು ಎಸ್.ಯು.ಜೆ.ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ “ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ” ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ನೆನಪಿಗೆ ವಿಧಾನ ಅನುಸರಿಸಿ, ಸತತ ಅಭ್ಯಾಸದಿಂದ ಏಕಾಗ್ರತೆಯ ಸಿದ್ಧಿ ಸಾಧ್ಯ. ಮಾದರಿ ವೇಳಾಪಟ್ಟಿ ರಚಿಸಿಕೊಳ್ಳಿ, ಹಾಳು ಹರಟೆ, ಅನವಶ್ಯಕ ತಿರುಗುವುದು, ಅತಿಯಾದ ಮೊಬೈಲ್ ಬಳಕೆ, ಟಿವಿ ನೋಡುವುದು, ಅತಿ ನಿದ್ರೆ ಮಾಡುವುದು ಇವುಗಳಿಂದ ಸಮಯ ಉಳಿಸಿ ಓದಿಗೆ ಮೀಸಲಿಟ್ಟರೆ ಸಮಯ ಪಾಲನೆಯಾಗುತ್ತದೆ .
ಪರೀಕ್ಷೆಯಲ್ಲಿ ರ್ಯಾಂಕ್ ಬರಲು ಚನ್ನಾಗಿ ಓದಿದರೆ ಸಾಲದು ಕೆಲವು ಟೆಕ್ನಿಕ್ ತಿಳಿದಿರಬೇಕು. ಸ್ಪಷ್ಟವಾದ, ನಿಕರವಾದ ಗುರಿ ಹೊಂದಿರಬೇಕು. ಜಗತ್ತಿನಲ್ಲಿ ಅತ್ಯಂತ ಸುಲಭವಾದ ಕೆಲಸ ಓದು ಯಾವುದೆ ವಿಷಯ ಓದುವಾಗ ನಿರಂತರವಾಗಿ ಓದಬೇಡಿ ದಿನಕ್ಕೆ ಆರು ವಿಷಯ ಆರು ತಾಸು ಕಡ್ಡಾಯವಾಗಿ ಅಭ್ಯಾಸ ಮಾಡಿ ನೆನಪಿಗೆ ಡ್ರಿಲ್ಲಿಂಗ್ ಪದ್ಧತಿ, ಮತ್ತು ಲಿಂಕಿಂಗ್ ಪದ್ದತಿ ಅನುಸರಿಸಿ ಇಷ್ಟಪಟ್ಟು ಓದಿದರೆ ಏಕಾಗ್ರತೆ ಹೆಚ್ಚು.
ಬರೀಪುಟ ತುಂಬಿಸಬೇಡಿ ಚಿತ್ತು ಕಾಟು ಇಲ್ಲದಂತೆ ಬರೆಯಿರಿ ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳು ಬಿಡಿಸಿ ಅಭ್ಯಾಸ ಮಾಡಿ, ನಕಲು ಮಾಡಬೇಡಿ ಮತ್ತು ಪಕ್ಕದವರಿಗೆ ತೋರಿಸಬೇಡಿ, ಎಲ್ಲಾ ಪ್ರಶ್ನೆಗಳಿಗೆ ತಪ್ಪದೆ ಉತ್ತರಿಸಿ. ಒಂದು ಪರೀಕ್ಷೆ ಮುಗಿದ ನಂತರ ಆ ಪರೀಕ್ಷೆಯ ಉತ್ತರಗಳ ಬಗ್ಗೆ ಚರ್ಚಿಸಬೇಡಿ. ಪರೀಕ್ಷೆಗೆ ಹೋಗುವಾಗ ಹೊಸ ಬಟ್ಟೆ, ಸುಗಂಧ ದ್ರವ್ಯ ಬೇಡ, ಕ್ಲಿಷ್ಠ ವಿಷಯಗಳನ್ನು ಗುಂಪು ಚರ್ಚೆ ಮಾಡಿ ಆರೋಗ್ಯದ ಕಡೆಗೆ ಗಮನವನ್ನು ಕೊಡಿ ನಾನು ಮಾಡಬಲ್ಲೆ ನನ್ನಿಂದ ಸಾಧ್ಯ ಎಂದುಕೊಳ್ಳಿ ಎಂದರು.
ಕನ್ನಡ ಶಿಕ್ಷಕ ಎಸ್ ಮಕ್ಬುಲ್ ಭಾಷ ಮಾತನಾಡಿ ಪ್ರಶ್ನೆ ಪತ್ರಿಕೆ ಚನ್ನಾಗಿ ಓದಿ, ಪ್ರತಿ ಪಾಠದ ಅಂಕಗಳನ್ನು ಆದರಿಸಿ ಓದಿ, ತಡ ರಾತ್ರಿ ಓದಬೇಡಿ 3 ವರ್ಷದ ಪ್ರಶ್ನೆ ಪತ್ರಿಕೆ ಓದಿ ಒಂದೇ ಪ್ರಶ್ನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳಬೇಡಿ ಎಂದರು.ಕ್ಷೆತ್ರ ಶಿಕ್ಷಣಾಧಿಕಾರಿಗಳ ಇಸಿಒ ಉದಯಶಂಕರ್ ಮಾತನಾಡಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಲು ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದರು. ಬಾಲಕಿಯರ ಪ್ರೌಧಶಾಲೆಯ ಶಿಕ್ಷಕರಾದ ಉಮಾಪತಿ, ಬಾಗಳಿ ರಾಜಶೇಖರ್, ಶಶಿಕಲಾ ಇದ್ದರು.