ಪಾಲಿಕೆಗೆ ಆಡಳಿತಾಧಿಕಾರಿ ನೇಮಕ

ತುಮಕೂರು

            ಮಹಾನಗರ ಪಾಲಿಕೆಯಲ್ಲಿ ಮೇಯರ್/ಉಪಮೇಯರ್ ಸ್ಥಾನಗಳ ಚುನಾವಣಾ ಪ್ರಕ್ರಿಯೆ ನಡೆದು, ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೆ ದೈನಂದಿನ ಕಾರ್ಯನಿರ್ವಹಣೆಗಾಗಿ ಸಂಬಂಧಿಸಿದ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಸೆ. 5 ರಂದು ಆದೇಶಿಸಿದೆ.
              ಈ ಬಗೆಗಿನ ‘ಅಧಿಸೂಚನೆ’ (ಸಂಖ್ಯೆ:ನಅಇ:93; ಎಂ ಎಲ್ ಆರ್: 2018, ದಿನಾಂಕ 05-09-2018) ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಂಪನಗೌಡ ಮೇಲ್ಸೀಮೆ ಅವರು ಸಹಿ ಹಾಕಿದ್ದಾರೆ.
            ‘‘ರಾಜ್ಯದ 3 ಮಹಾನಗರ ಪಾಲಿಕೆಗಳಿಗೆ ದಿನಾಂಕ 31-08-2018 ರಂದು ವಾರ್ಡ್‌ವಾರು ಚುನಾವಣೆ ಜರುಗಿಸಿದ್ದು, ದಿನಾಂಕ 03-09-2018 ರಂದು ಲಿತಾಂಶ ಪ್ರಕಟವಾಗಿರುತ್ತದೆ. ಅದರಂತೆ ಪ್ರಸ್ತುತ ಚುನಾವಣೆ ನಡೆದಿರುವ ಮಹಾನಗರ ಪಾಲಿಕೆಗಳಲ್ಲಿನ ಆಡಳಿತಾತ್ಮಕ ವ್ಯವಸ್ಥೆಯು ಮುಂದಿನ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಅಂದರೆ ಮೇಯರ್-ಉಪಮೇಯರ್ ಚುನಾವಣೆ ನಡೆದು, ಸಂಬಂ‘ಪಟ್ಟ ಮಹಾನಗರ ಪಾಲಿಕೆಯ ದೈನಂದಿನ ಕಾರ್ಯನಿರ್ವಹಣೆಗಾಗಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಕಾರ್ಯನಿರ್ವಹಣೆಗಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕಾಗಿರುತ್ತದೆ’’ ಎಂದು ‘ಅಧಿಸೂಚನೆ’ಯಲ್ಲಿ ವಿವರಿಸಲಾಗಿದೆ.

 

Recent Articles

spot_img

Related Stories

Share via
Copy link
Powered by Social Snap