ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ನಡೆಯುವ ಚುನಾವಣೆಗೆ ವಿವಿಧ ವಾರ್ಡ್‍ಗಳಿಂದ ಈ ಕೆಳಕಂಡವರಿಗೆ ಬಿಜೆಪಿಯಿಂದ ಬಿ ಫಾರಂ ನೀಡಲಾಗಿದೆ.
1 ನೇ ವಾರ್ಡ್- ನಳಿನಾ ಎಲ್.ಆರ್., 2 – ಎಸ್. ಮಂಜುನಾಥ್, 3 – ಬಿ.ಎಸ್.ನಾಗೇಶ್, 4 – ದೀಪಶ್ರೀ ಎಚ್.ಎಂ., 5-ಜಿ.ಎಸ್.ಶೇಷಾಚಲಂ, 6- ಬಿ.ಜಿ.ವೀಣಾ, 7- ವಿನಯ್ ಟಿ.ಡಿ., 8 – ಎನ್.ಮಂಜುನಾಥ್, 11 – ಎಂ.ಪಿ.ರಮೇಶ್, 14 – ಪಿ.ಎಂ.ರತ್ನಮಾಲಾ, 15 – ಗಿರಿಜಾ ವಿ.ಎಸ್., 16- ಶಿವಕುಮಾರ್ ಟಿ.ಜಿ., 17- ಮೋಹನ್‍ಕುಮಾರ್, 18- ಎಸ್.ಮಂಜುಳಾ, 19- ಮಧುವನಿತಾ, 21- ಭಾಗ್ಯ ರಾಜೇಂದ್ರ, 22- ಸಂದೀಪ್ ಕೆ., 23- ಟಿ.ಎನ್.ಶ್ರೀನಿವಾಸಮೂರ್ತಿ, 25- ಕೆ.ಎಸ್.ಮಂಜುಳಾ ಆದರ್ಶ, 26- ಎಚ್.ಮಲ್ಲಿಕಾರ್ಜುನಯ್ಯ, 27-ಚಂದ್ರಕಲಾ, 28-ರವಿಕುಮಾರ್ ಎಂ.ಎಲ್., 29- ಪಿ.ಕೋಕಿಲಾ, 30- ಎಂ.ವೈ.ರುದ್ರೇಶ್, 31- ಸಿ.ಎನ್.ರಮೇಶ್, 32- ಬಿ.ಜಿ.ಕೃಷ್ಣಪ್ಪ, 33- ಪ್ರಮೀಳಾ ಎಂ.ಎಸ್., 35- ಎಚ್.ಎಸ್.ನಿರ್ಮಲಾ. ಉಳಿದವರಿಗೆ ಇಂದು ಬಿ ಫಾರಂ ವಿತರಿಸಲಾಗುವುದು ಎಂದು ಬಿಜೆಪಿ ಅಧಿಕೃತ ಪ್ರಕಟಣೆ ತಿಳಿಸಿದೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ವಾರ್ಡ್‍ಗಳಿದ್ದು, ಮೇಲ್ಕಂಡ ವಾರ್ಡ್‍ಗಳಿಗಷ್ಟೆ ಅಭ್ಯರ್ಥಿಗಳನ್ನು ಆಖೈರುಗೊಳಿಸಲಾಗಿದೆ. ಉಳಿದ ವಾರ್ಡ್‍ಗಳಿಗೂ ಇಂದು ಅಂತಿಮ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದ್ದು, ಕೆಲವು ಕಡೆ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಬಿ ಫಾರಂ ವಿತರಣೆ ತಲೆನೋವಾಗಿ ಪರಿಣಮಿಸಿದೆ. ಮತ್ತೆ ಕೆಲವು ಕಡೆ ಈವರೆಗೆ ಚಾಲ್ತಿಯಲ್ಲಿದ್ದ ಹೆಸರುಗಳು ಮಾಯವಾಗಿ ಹೊಸ ಹೆಸರುಗಳು ಹುಟ್ಟಿಕೊಂಡಿವೆ. ಅಭ್ಯರ್ಥಿಗಳ ಹೆಸರು ಬಹಿರಂಗವಾಗುತ್ತಿದ್ದಂತೆಯೇ ಅಲ್ಲಲ್ಲಿ ಅಸಮಾಧಾನಗಳು ಸಹ ಕಂಡುಬಂದಿವೆ. ನನಗೆ ಟಿಕೆಟ್ ಸಿಗಬೇಕಿತ್ತು ಎನ್ನುವವರು ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
