ನೀವು ಮನೆ ಕಟ್ಟುವ ಯೋಚನೆಯಲ್ಲಿದ್ದರೆ : ಈ ಲೇಖನದ ಕಡೆ ಒಮ್ಮೆ ಕಣ್ಣಾಡಿಸಿ….!

ತುಮಕೂರು :

    ಒಂದು ಮನೆ ಇದ್ದುಬಿಟ್ಟರೆ ಸಾಕು ಜೀವನ ಹೇಗೋ ಸಾಗಿಬಿಡುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.. ಆದ್ರೆ, ಎಲ್ಲೆಂದರಲ್ಲಿ ಮನೆ ಕಟ್ಟಿದ್ರೆ ನಮಗೆ ಸಂಕಷ್ಟ ಮನೆ ಮಾಡೋದು ಗ್ಯಾರೆಂಟಿ.. ಹೀಗಂತ ಚಾಣಕ್ಯ ನೀತಿ ಹೇಳುತ್ತೆ.. ಚಾಣಕ್ಯ ಐದು ಸ್ಥಳಗಳಲ್ಲಿ ಮನೆ ಕಟ್ಟಿದರೆ ವೇಸ್ಟ್, ಇದರಿಂದ ನಿಮ್ಮ ಸಂಕಷ್ಟ ಇನ್ನು ಹೆಚ್ಚಾಗುತ್ತೆ ಅಂತ ಹೇಳ್ತಾರೆ.ಹೀಗಾಗಿ ಚಾಣಕ್ಯ ಸೂಚಿಸಿದ ಸ್ಥಳಗಳಲ್ಲಿ ಮನೆ ಕಟ್ಟೋಕು ಮುಂಚೆ ಯೋಚನೆ ಮಾಡುವುದು ಒಳ್ಳೆಯದು.ಹಾಗಾದರೆ ಚಾಣಕ್ಯ ಹೇಳಿದ ಆ ಐದು ಸ್ಥಳಗಳು ಯಾವುವು ನೋಡೋಣ ಬನ್ನಿ..

1. ಜೀವನೋಪಾಯಕ್ಕೆ ಅವಕಾಶವಿಲ್ಲದ ಸ್ಥಳ;

ನಾವು ಎಲ್ಲಿ ಮನೆ ಕಟ್ಟುತ್ತೇವೋ ಸುತ್ತಮುತ್ತಲ ಪ್ರದೇಶದಲ್ಲೇ ನಮ್ಮ ಸಂಪಾದನೆಯ ಸ್ಥಳ ಇರಬೇಕು.. ಮನೆ ಇರುವ ಸ್ಥಳದಲ್ಲಿ ದುಡಿಯಲು ಕೆಲಸವೇ ಇಲ್ಲದಿದ್ದರೆ ಬದುಕೋದು ಕಷ್ಟವಾಗುತ್ತದೆ.. ಆಗ ಕೆಲಸ ಅರಸಿ ದೂರದ ಪ್ರದೇಶಕ್ಕೆ ಹೋಗಬೇಕಾಗುತ್ತದೆ.. ಇದರಿಂದ ಮನೆ ಕಟ್ಟಿಯೂ ಉಪಯೋಗವಿಲ್ಲ..

2. ಕಾನೂನು, ಸುವ್ಯವಸ್ಥೆ ಕಾಪಾಡದ ಜನರಿರುವ ಸ್ಥಳ;

ನಾನು ವಾಸಿಸುವ ಸ್ಥಳದಲ್ಲಿ ಶಾಂತಿ ನೆಲೆಸಿರಬೇಕು.. ನಮ್ಮ ಸುತ್ತಮುತ್ತಲಿನ ಜನ ನಮ್ಮ ಕಾನೂನಿಗೆ ಗೌರವ ಕೊಡುವಂತವರಾಗಿರಬೇಕು.. ಆದ್ರೆ ಕೆಲಸ ಪ್ರದೇಶದಲ್ಲಿ ಜನ ಕಾನೂನಿಗೆ ಹೆದರುವುದಿಲ್ಲ.. ಅಲ್ಲಿ ಅನಾಚಾರಗಳು, ಕೊಲೆ, ಜಗಳಾಗಳೇ ಹೆಚ್ಚಾಗಿ ನಡೆಯುತ್ತಿರುತ್ತವೆ.. ಅಂತಹ ಸ್ಥಳದಲ್ಲಿ ಮನೆ ಕಟ್ಟಿದರೆ ಬದುಕೋದು ಕಷ್ಟ.. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜನರ ಮಧ್ಯೆ ಬದುಕಲು ಕಲಿಯಿರಿ.

3. ಮುಂಬರುವ ಪರಿಸ್ಥಿತಿ ಬಗ್ಗೆ ಅರಿವಿರಲಿ;

ನಾವು ಮನೆ ಕಟ್ಟಬೇಕೆಂದಿರುವ ಜಾಗ ಸದ್ಯಕ್ಕೆ ಚೆನ್ನಾಗೆ ಇರುತ್ತೆ.. ಮುಂದೆ ಅಕ್ಕಪಕ್ಕ ಏನು ಬರುತ್ತೆ, ಅದರಿಂದ ಏನಾದರು ಯೊಂದರೆ ಆಗುತ್ತದ ಎಂದು ಗಮನಿಸಿ. ಇನ್ನು ಮನೆ ಕಟ್ಟಲು ಪ್ರಾರಂಭಿಸುವ ಮೊದಲು ನಿಮ್ಮ ಪರಿಸ್ಥಿತಿ ಏನು ಅನ್ನೋದು ಅರ್ಥ ಮಾಡಿಕೊಳ್ಳಿ.. ಮನೆ ಕಟ್ಟಲು ನನಗೆ ಈಗ ಶಕ್ತಿ ಇದೆಯೇ, ಬರುವ ಸವಾಲುಗಳನ್ನು ಎಲ್ಲವು ನಿಭಾಯಿಸಬಲ್ಲನೆ ಎಂಬುದನ್ನು ನೋಡಿಕೊಳ್ಳಿ.

4. ದಯೆ ಮತ್ತು ಆಧ್ಯಾತ್ಮಿಕ ಚಿಂತನೆ;

ಮೊದಲೇ ಹೇಳಿದಂತೆ ನಮ್ಮ ಸುತ್ತಮುತ್ತ ಉತ್ತಮ ವ್ಯಕ್ತಿಗಳು ವಾಸಿಸುತ್ತಿರಬೇಕು.. ಅವರಲ್ಲಿ ದಯೆ, ಧರ್ಮ ಮನೆ ಮಾಡಿರಬೇಕು.. ಅಂತಹ ಜನರಿರುವ ಸ್ಥಳದಲ್ಲಿ ವಾಸಿಸಿದರೆ ನಿಮ್ಮಲ್ಲೂ ಉತ್ತಮ ನಡವಳಿಕೆ ಬರುತ್ತದೆ..

5. ಪ್ರಾಮಾಣಿಕತೆ ಮತ್ತು ನೈತಿಕತೆ;

ನಾವು ನೈತಿಕವಾಗಿ ಜೀವನ ಮಾಡಬೇಕು.. ಎಷ್ಟೇ ಕಷ್ಟಗಳು ಬಂದರೂ ಪ್ರಾಮಾಣಿಕವಾಗಿರಬೇಕು. ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡರೆ ನಮ್ಮ ಜೀವನಮಟ್ಟ ಸುಧಾರಿಸುತ್ತದೆ ಎಂದು ಚಾಣಕ್ಯ ಹೇಳುತ್ತಾನೆ..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap