ರಾಣಿಬೆನ್ನೂರ:
ಇಲ್ಲಿನ ಎಪಿಎಂಸಿ ಯಾರ್ಡ್‍ನಲ್ಲಿರುವ ಪ್ರಾರ್ಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‍ಡಿ) ನಿಯಮಿತ ವತಿಯಿಂದ ಇತ್ತೀಚಗೆ ಸಂಭವಿಸಿದ ಕೊಡಗು ವಿಪತ್ತು ಸಂತ್ರಸ್ಥರ ಪರಿಹಾರ ನಿಧಿಗಾಗಿ ನಿರ್ದೇಶಕ ಮಂಡಳಿಯು 25 ಸಾವಿರ ರೂಪಾಯಿಗಳ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಿದರು.
ಜಿಲ್ಲಾ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಕ್ರಮ್ ಕುಲಕರ್ಣಿ ಅವರು ಆಡಳಿತ ಮಂಡಳಿ ಕೊಡಮಾಡಿದ ಚೆಕ್‍ನ್ನು ಸ್ವೀಕರಿಸದರು. ಈ ಸಂದರ್ಭದಲ್ಲಿ ಪ್ರಭಾರಿ ಅಧ್ಯಕ್ಷ ಲಲಿತವ್ವ ಕನ್ನಗೌಡ್ರ, ವ್ಯವಸ್ಥಾಪಕ ಆರ್.ಎಸ್.ರಾಜನಹಳ್ಳಿ, ನಿರ್ದೇಶಕರಾದ ರಾಮಪ್ಪ ನಾಯಕ, ಶಂಕರ್‍ಗೌಡ ಗಂಗನಗೌಡ್ರ, ಹರೀಶಗೌಡ ರಾಮಲಿಂಗಣ್ಣನವರ, ಅನಸೂಯಾ ಕನ್ನಪ್ಪಳವರ, ವೀರಪ್ಪ ಬಜ್ಜಿ, ಹನುಮಂತಪ್ಪ ಪೂಜಾರ, ಕರೇಗೌಡ ಬಾಗೂರ, ವೀರನಗೌಡ ಪೋಲೀಸ್‍ಗೌಡ್ರ, ಚನ್ನಬಸಪ್ಪ ಪಾರ್ವತಿ, ಸಿದ್ಧಪ್ಪ ಹುಗ್ಗಿ, ನಾಗಪ್ಪ ಅಂಗಡಿ ಮತ್ತಿತರರು ಇದ್ದರು