ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ ಗೆ ರಾಮಕೃಷ್ಣ ಆಯ್ಕೆ

ಬೆಂಗಳೂರು:

             ಮೈಸೂರಿನ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿಗೆ ಚಿತ್ರ ಕಲಾವಿದ ಬಿ.ಪಿ. ರಾಮಕೃಷ್ಣ ಭಾಜನರಾಗಿದ್ದಾರೆ.
ತುಮಕೂರಿನಲ್ಲಿ ಸೆ.24 ರಿಂದ 26 ರ ತನಕ ನಡೆಯುವ ಪಿ.ಆರ್. ತಿಪ್ಪೇಸ್ವಾಮಿ ಕಲಾ ಮಹೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
             ರಾಮಕೃಷ್ಣ ಅವರು 1940 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾವಿದರು. ಅವರು ರಚನೆ ಮಾಡಿರುವ ನೂರಾರು ಕಲಾಕೃತಿಗಳು ಗಣ್ಯರು ಹಾಗೂ ಕಲಾಗ್ಯಾಲರಿಗಳಲ್ಲಿ ಇವೆ. ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ತಿಪ್ಪೇಸ್ವಾಮಿ ಪ್ರಶಸ್ತಿಯು ಐವತ್ತು ಸಾವಿರ ನಗದು ಒಳಗೊಂಡಿದೆ. ಒಂದು ವರ್ಷ ಚಿತ್ರಕಲೆಗೆ, ಮತ್ತೊಂದು ವರ್ಷ ಜಾನಪದಕ್ಕೆ ನೀಡಲಾಗುತ್ತಿದೆ.
            ತುಮಕೂರಿನಲ್ಲಿ ಕಲಾ ಶಿಬಿರ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಹಾಗೂ ಕೋಶಾಧ್ಯಕ್ಷ ಪೆÇ್ರ.ಪರಮೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

Recent Articles

spot_img

Related Stories

Share via
Copy link