ಪುರಸಭೆ ಪ್ರಚಾರಕ್ಕೆ ಸಂಸದ ಶಿವಕುಮಾರ ಉದಾಸಿ.

ಹಾನಗಲ್ಲ:

            ಮಂಗಳವಾರ ಹಾನಗಲ್ಲಿನಲ್ಲಿ ಪುರಸಭೆ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪರಚಾರದ ಅಂಗವಾಗಿ ಮನೆಮನೆಗಳಿಗೆ ತೆರಳಿ ಮತಯಾಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರಕಾರ 14 ನೇ ಹಣಕಾಸು ಯೋಜನೆಯಲ್ಲಿ ಹಾನಗಲ್ಲ ಪುರಸಭೆಗೆ 3.5 ಕೋಟಿ ಹಣ ನೀಡಿದೆ. ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ 50 ಲಕ್ಷ ರೂ ನೀಡಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಗರ ಹಾಗೂ ಪುರಸಭೆಗಳಿಗೆ ಹೆಚ್ಚು ಅನುದಾನ ನೀಡಿದೆ. ಅನುದಾನದ ಸದುಪಯೋಗ ಆಗಬೇಕೆಂದರೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಪಂಚಾಯತ್ ರಾಜ್ ವ್ಯವಸ್ಥೆಗೆ ಅತಿ ಹೆಚ್ಚು ಅನುದಾನ ನೀಡಿದ ಸರಕಾರ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವಾಗಿದೆ.

              ನಾಲ್ಕು ವರ್ಷಗಳ ಅವಧಿಯಲ್ಲಿ 84 ಸಾವಿರ ಕೋಟಿ ಅನುದಾನ ನೀಡಿದೆ. ಇಷ್ಟಾದರು ಕಾಂಗ್ರೇಸ್ಸಿಗರು ಕೇಂದ್ರ ಸರಕಾರ ಅನುದಾನ ನೀಡಿಲ್ಲ ಎಂದು ಬೊಬ್ಬೆ ಹಾಕುತ್ತಿರುವುದೇ ವಿಚಿತ್ರವಾಗಿದೆ. ಕಾಂಗ್ರೇಸ್ ನೇತೃತ್ವದ ಯಪಿಎ ಸರಕಾರ ತಮ್ಮ ಅವಧಿಯಲ್ಲಿ ರಾಜ್ಯಕ್ಕೆ ನೀಡಿದ ಅನುದಾನದ ವಿವರ ನೋಡಲಿ. ಕೇಂದ್ರ ಕೊಟ್ಟ ಅನುದಾನವನ್ನೇ ಬಳಸಿಕೊಳ್ಳಲಾಗದ ಕಾಂಗ್ರೆಸ್ಸಿಗೆ ಟೀಕೆ ಬಿಟ್ಟರೆ ಬೇರೆ ಕೆಲಸವೇ ಇಲ್ಲ ಎಂದು ಕಿಡಿ ಕಾರಿದರು. ಬಿಜೆಪಿ ರಾಜ್ಯಕ್ಕೆ ನೀಡಿದ ಅನುದಾನದ ವಿವರ ಬೇಕಿದ್ದರೆ ಮಾಹಿತಿ ಹಕ್ಕಿನಲ್ಲಿ ತಿಳಿದುಕೊಳ್ಳಲಿ. ರಾಜ್ಯ ಸರಕಾರ ವಾಪಸ್ಸ ಮಾಡಿದ ಅನುದಾನದ ವಿವರವನ್ನು ತಿಳಿದುಕೊಳ್ಳಲಿ ಎಂದ ಅವರು, ಕಾಂಗ್ರೇಸ್ಸಿಗೆ ಅಭಿವೃದ್ಧಿ ಕೆಲಸ ಮಾಡುವುದಕ್ಕಿಂತ ಆರೋಪ ಮಾಡುವುದೇ ರುಚಿ ಎನಿಸಿದೆ ಎಂದರು.

                 ಕೊಡಗಿನ ನೆರೆ ಹಾವಳಿಗೆ ಕೇಂದ್ರ ಸರಕಾರ ಸ್ಪಂಧಿಸಿಲ್ಲ ಎನ್ನುವ ರಾಜ್ಯದ ಸಮ್ಮಿಶ್ರ ಸರಕಾರದ ನಾಯಕರು ಇನ್ನೂ ಇಲ್ಲಿನ ನಷ್ಟದ ಮಾಹಿತಿಯನ್ನೇ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಸ್ತುನಿಷ್ಠ ವರದಿಯನ್ನು ಪರಿಶೀಲಿಸಿ ಅನುದಾನ ನೀಡಬೇಕಾಗುತ್ತದೆ. ಕೊಡಗಿನ ನಿರಾಶ್ರಿತರಿಗೆ ಬೆಂಬಲಿಸುವ ಹಾಗೂ ಪುನರ್‍ವಸತಿ ಕಲ್ಪಿಸುವ, ಹಾನಿ ಸರಿಪಡಿಸುವ ವಿಷಯದಲ್ಲಿ ರಾಜ್ಯ ಸರಕಾರ ಕೂಡಲೇ ವರದಿ ನೀಡಲಿ. ಕೇಂದ್ರ ಸರಕಾರ ಯಾವುದೆ ಮೀನ ಮೇಷ ಎಣಿಸದೇ ತನ್ನ ಪಾಲಿನ ಅನುದಾನ ನೀಡಲು ಸಿದ್ಧ ಎಂದರು.

                 ಈಗ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ದೇಶದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಬಿಜೆಪಿಯನ್ನು ಬೆಂಬಲಿಸಿ. ದೇಶದಲ್ಲಿ ಪ್ರಧಾನ ನರೇಂದ್ರ ಮೋದಿ ಅವರು ಜಗತ್ತಿಗೆ ಮಾದರಿಯಾಗುವ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾನಗಲ್ಲ ಕ್ಷೇತ್ರದಲ್ಲಿ ಸಂಸದನಾಗಿ ನನ್ನನ್ನು, ವಿಧಾನಸಭಾ ಸದಸ್ಯರಾಗಿ ಸಿ.ಎಂ.ಉದಾಸಿಯವರನ್ನು ಆಯ್ಕೆ ಮಾಡಿರುವಿರಿ, ಪುರಸಭೆಯಲ್ಲಿಯೂ ಬಿಜೆಪಿ ಆಡಳಿತಕ್ಕೆ ಬೆಂಬಲಿಸಲು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎಂ.ಉದಾಸಿ, ಗಣೇಶ ಮೂಡ್ಲಿಯವರ, ದೇವಿಂದ್ರಪ್ಪ ಮೂಡ್ಲಿ ಸೇರಿದಂತೆ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link