ಏಷಿಯನ್ ಗೇಮ್ಸ್ 2018 : ಪುರುಷರ ಬಾಕ್ಸಿಂಗ್‍ನಲ್ಲಿ ಭಾರತಕ್ಕೆ ಚಿನ್ನ

 ಜಕಾರ್ತ:Related image

      ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್‍ಗೇಮ್ಸ್‍ನ ಬಾಕ್ಸಿಂಗ್‍ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ದೊರೆತಿದೆ. ಪುರುಷರ 49 ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್ ಪಂಗಲ್ ಅವರು ಉಜ್ಬೇಕಿಸ್ತಾನದೊಂದಿಗೆ ಸ್ಪರ್ಧೆಯೊಡ್ಡಿ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

      ಅಮಿತ್ ಸೆಮಿಫೈನಲ್​ನಲ್ಲಿ 3-2ರಿಂದ ಫಿಲಿಪ್ಪಿನ್ಸ್​ನ ಕಾರ್ಲೆ ಪಾಲಮ್ನು ಅವರನ್ನು ಸೋಲಿಸಿದ್ದರು. ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನ ಬೆಳ್ಳಿ ಪದಕ ವಿಜೇತರಾಗಿದ್ದರು. ಈ ಮೂಲಕ ಏಷ್ಯನ್​ ಗೇಮ್ಸ್​ ಬಾಕ್ಸಿಂಗ್​ನಲ್ಲಿ ಫೈನಲ್​ಗೇರಿದ ಏಕೈಕ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ಅಮಿತ್​ ಇಂದು ಸ್ವರ್ಣ ಪದಕ ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.

      ಭಾರತ ಇದುವರೆಗೆ 66 ಪದಕಗಳನ್ನು ಪಡೆದಿದ್ದು, ಇದರಲ್ಲಿ 14-ಚಿನ್ನ, 23-ಬೆಳ್ಳಿ, 29-ಕಂಚುಗಳ ಪದಕಗಳನ್ನು ಪಡೆದಿರುವ ಭಾರತವು 8ನೇ ಸ್ಥಾನದಲ್ಲಿದೆ. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap