ಪೆರಮಸಂದ್ರಕೆರೆಗೆ ಶಾಶ್ವತ ನೀರಾವರಿ ಯೋಜನೆಗೆ ಪ್ರಾಮಾಣಿಕ ಪ್ರಯತ್ನ : ಸಚಿವ ಎಸ್.ಆರ್.ಶ್ರೀನಿವಾಸ್

ಗುಬ್ಬಿ:

      ತಾಲ್ಲೂಕಿನ ಪೆರಮಸಂದ್ರಕೆರೆಗೆ ಶಾಶ್ವತ ನೀರಾವರಿ ಯೋಜನೆ ಮಾಡುವಂತಹ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಬಳಿ ಮಾತುಕತೆ ನಡೆಸಲಾಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ಕರೆಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ತಾಲೂಕಿನ ಪೆರಮಸಂದ್ರ ಗ್ರಾಮದಲ್ಲಿ ಹೇಮಾವತಿ ನಾಲೆಯಿಂದ ಪೆರಮಸಂದ್ರ ಕೆರೆಗೆ ಕುಡಿಯುವ ನೀರು ಹರಿಸುವ ಬಗ್ಗೆ ಸಮಾಲೊಚನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಹೇಮಾವತಿ ನಾಲೆಯ ಪಕ್ಕದಲ್ಲೆ ಇರುವಂತಹ ಕೆರೆಗೆ ನೀರು ಹರಿಸಬೇಕಾಗಿರುವುದು ನನ್ನ ಕರ್ತವ್ಯವಾಗಿದೆ ಇಲ್ಲಿಗೆ ಮುಂಜೂರಾಗಿದ್ದ ಯೋಜನೆ ಪಕ್ಕದ ಗ್ರಾಮಕ್ಕೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಇಲ್ಲಿ ಸಮಸ್ಯೆ ಉದ್ಬವಿಸಿದ್ದು ಮತ್ತೆ ಈ ಯೋಜನೆಗೆ ಮರುಜೀವ ನೀಡಬೇಕಾಗಿದೆ ಇದನ್ನು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಮಾಡಿ ಇಲ್ಲಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನೂರಕ್ಕೆ ನೂರರಷ್ಟು ಮಾಡಿಸುವೆ ಅದಕ್ಕೆ ಒಂದಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

      ಈ ಗ್ರಾಮದ ಕೆರೆಗೆ ನೀರು ಹರಿಸಿದಲ್ಲಿ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ ಅಧಿಕಾರಿಗಳೊಟ್ಟಿಗೆ ಮಾತುಕತೆ ಮಾಡಿ ನೀರು ಹರಿಸುವ ಕೆಲಸ ಮಾಡಿಸಲಾಗುತ್ತದೆ ಹಾಗೂ ಗ್ರಾಮಗಳಿಗೆ ಬೇಕಾದಂತಹ ಮೂಲಭೂತ ಸೌಲಭ್ಯಗಳನ್ನು ಎನ್.ಆರ್.ಇ.ಜಿ ಯೋಜನೆಯಲ್ಲಿ ಮಾಡಿಸಬಹುದು ಅದನ್ನು ತಾವೆಲ್ಲ ಸರಿಯಾಗಿ ಬಳಕೆ ಮಾಡಿಕೊಳ್ಳಿ ಅದು ನಿಮಗಾಗಿ ಇರುವಂತಹ ಯೋಜನೆಯಾಗಿದೆ ಎಂದ ಅವರು ಈ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯನ್ನು ಈ ಭಾರಿ ಹಾಕಿ ಇಲ್ಲಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ ನಗರ ಪ್ರದೇಶದಿಂದ ಗ್ರಾಮವು ಸಾಕಷ್ಟು ದೂರವಿರುವುದರಿಂದ ಸರಕಾರಿ ಬಸ್ ವ್ಯವಸ್ಥೆ ಇಲ್ಲ ಎಂಬ ಮನವಿಗೆ ಸ್ಪಂದಿಸಿದ ಅವರು ನಾಳೆಯೆ ಇದರ ಬಗ್ಗೆ ಅಧಿಕಾರಿಗಳೂಂದಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿಸಲಾಗುತ್ತದೆ ಎಂದು ತಿಳಿಸಿದರು.

      ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಪ್ರಸಾದ್ ಮಾತನಾಡಿ ಸಚಿವರಿಗೆ ಈ ಗ್ರಾಮವು ತವರು ಮನೆಯಾಗಿದ್ದು ಇಲ್ಲಿಗೆ ಅಗತ್ಯವಾಗಿ ಕುಡಿಯುವ ನೀರಿನ ಸೌಲಭ್ಯ ಮಾಡಬೇಕಾಗಿದೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಭಾಗದಲ್ಲಿ 1200 ಅಡಿ ಕೊಳವೆಬಾವಿ ಕೊರೆದರು ನೀರು ಬರುತ್ತಿಲ್ಲ. ಅಂತರ್ಜಲ ಈ ಭಾಗದಲ್ಲಿ ಸಂಪೂರ್ಣವಾಗಿ ಕುಸಿದಿದೆ ಆದರೂ ಪೆರಮಸಂದ್ರ ಕೆರೆಯ ಒಳಭಾಗದಲ್ಲಿ ಗ್ರಾಮ ಪಂಚಾಯತಿಗೆ ಸಂಬಂದ ಪಟ್ಟ 10 ಕ್ಕೂ ಹೆಚ್ಚು ಹಳ್ಳಿಗಳಿಗೆ ಕೊಳವೆಬಾವಿ ಕೊರೆಸಿ ನೀರು ಸರ¨ರಾಜು ಮಾಡಿಸಲಾಗುತ್ತಿದೆ ಹಾಗಾಗಿ ಇಲ್ಲಿನ ಕೆರೆ ತುಂಬಿದರೆ ಸಾಕಷ್ಟು ಅನುಕೂಲವಾಗುತ್ತದೆ ಸಚಿವರು ಇದನ್ನು ಮಾಡಿಕೊಡಲೆ ಬೇಕು ಎಂದು ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕವಿತಾಬಸವರಾಜು, ಸದಸ್ಯರಾದ ನಳಿನನರಸಿಂಹರಾಜು, ದೇವರಾಜಮ್ಮಬಸವರಾಜು, ವಿಜಿಯಣ್ಣ, ಜಾನಕಮ್ಮ, ಪ್ರಕಾಶ್ ಮುಖಂಡರಾದ ಗೊವಿಂದರಾಜು, ಲಕ್ಕಣ್ಣಗೌಡರು, ವೆಂಕಟೇಶ್, ಪೆರೆಮಸಂದ್ರ, ನೇರಳೆಕೆರೆ, ದಿಂಡಗದಹಳ್ಳಿ, ಸೀಗೆಹಳ್ಳಿ, ತಗ್ಗಿಹಳ್ಳಿ, ಚಿಕ್ಕಹಳ್ಳಿ, ಗಿರಿಯನಹಳ್ಳ, ಬಾಡೇನಹಳ್ಳಿ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap