ರಾಣಿಬೆನ್ನೂರು:
ಕರಾಟೆ ಕಲೆ ಇತ್ತೀಚಿನ ದಿನಗಳಲ್ಲಿ ಅತಿಮುಖ್ಯವಾದ ಆತ್ಮರಕ್ಷಣೆ ಕಲೆಯಾಗಿದ್ದು, ಪ್ರತಿಯೊಬ್ಬರು ಇದನ್ನು ಕಲಿಯಬೇಕು, ವಿಷೇಶವಾಗಿ ಹೆಣ್ಣು ಮಕ್ಕಳಿಗೆ ಇದೊಂದು ವರದಾನವಾಗಿದ್ದು ಇತ್ತೀಚಿನ ಕೆಲವೊಂದು ಕಹಿ ಘಟನೆಗಳನ್ನು ಅವಲೋಚಿಸಿದಾಗ ಕರಾಟೆ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ನಗರಸಭಾ ಪೌರಾಯುಕ್ತ ಡಾ|| ಎನ್. ಮಹಾಂತೇಶ ಹೇಳಿದರು.
ಇಲ್ಲಿನ ನಗರ ಸಭೆಯ ಕಲಾಭವನದಲ್ಲಿ ಇತ್ತೀಚೆ ವಿಜಯ್ ಅಗಡಿ ಮಾರ್ಷಲ್ ಆಟ್ರ್ಸ ಶಾಲೆಯ ಕರಾಟೆ ಪಟುಗಳು, ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಾಂಪಿಯನ್‍ಶಿಪ್ ಪಡೆದ ಪಟುಗಳಿಗೆ ನಗರಸಭೆಯ ವತಿಯಿಂದ ಏರ್ಪಡಿಸಿದ್ದ ಅಭಿನಂದನೆ ಪದಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ರವರು, ತರಬೇತುದಾರ ವಿಜಯ್ ಅಗಡಿ ಹಾಗೂ ಸಂಗಡಿಗರ ಸಾಧನೆ ಅರ್ಥಪೂರ್ಣವಾಗಿದೆ ಎಂದರು.
ಅವರ ಸಾರಥ್ಯದಲ್ಲಿ ಈ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುs ಭಾಗವಹಿಸಿ, ಒಟ್ಟು 13 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕಗಳನ್ನು ಗೆದ್ದು ನಮ್ಮ ಊರಿಗೆ ಅಷ್ಟೇ ಅಲ್ಲದೆ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳು ಕರಾಟೆಯ ಕಲೆಗಳನ್ನು ಪ್ರದರ್ಶನ ಮಾಡಿ ಜನಮನ ರಂಜಿಸಿದರು. ಓಂ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸಮರೇಂದ್ರ ಪಾಣೀಗರಿ, ನಗರಸಭೆಯ ಪರಿಸರ ಅಭಿಯಂತರರಾದ ಮಂಜುಳಾ ಮುಂಡಾಸದ, ಆರೋಗ್ಯ ಅಧಿಕಾರಿ ಜಗದೀಶ, ಆರೋಗ್ಯ ನಿರ್ದೇಶಕ ರಾಘವೇಂದ್ರ ಕಟ್ಟಿಮನಿ. ಕರಾಟೆ ಶಿಕ್ಷಕ ನಾಗರಾಜ ಸುಣಗಾರ, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು. ಕಲಾವಿದ ಪ್ರಕಾಶ ಗಚ್ಚಿನಮಠ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ