ಚಿಕ್ಕಮಗಳೂರು:

ಶಾಲೆಯ ಜೊತೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ ತರುಣ್ ಗೌಡ ಮೃತ ವಿದ್ಯಾರ್ಥಿ. ಶಾಲೆಯಿಂದ ಸುಮಾರು 60 ವಿದ್ಯಾರ್ಥಿಗಳು ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮಕ್ಕಳು ಸ್ನಾನಕ್ಕೆ ಬಂದಾಗ ಶೌಚಗೃಹದವರು ಒಬ್ಬರಿಗೆ 20 ರೂಪಾಯಿ ಕೇಳಿದ್ದಾರೆ. ಹಣ ಜಾಸ್ತಿಯಾಯಿತೆಂದು ಎಲ್ಲರೂ ತುಂಗಾ ನದಿಗೆ ಸ್ನಾನಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಸ್ಥಳಿಯರು ಹಾಗೂ ಪೊಲೀಸರ ಸಹಕಾರದಿಂದ ಸುಮಾರು ಒಂದು ಗಂಟೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನ ನೀರಿನಿಂದ ಮೇಲೆತ್ತಿದ್ದಾರೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








