ಚಿಕ್ಕಮಗಳೂರು :
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ವರ್ಷಪೂರ್ತಿ ಪ್ರವಾಸಿಗರು ಆಗಮಿಸುತ್ತಲೇ ಇರ್ತಾರೆ. ಹೀಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಪ್ರವಾಸಿಗರ ನಿರ್ಲಕ್ಷ್ಯದಿಂದ ಈ ಪ್ರಕೃತಿ ತಾಣಗಳಲ್ಲಿ ಸ್ವಚ್ಚತೆ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಒಗ್ಗೂಡಿ ಪ್ರವಾಸಿ ತಾಣಗಳ ಸ್ವಚ್ಚತೆಗೆ ಮುಂದಾಗಿದ್ದಾರೆ.
ಹೌದು, ಕಳೆದ ಮೂರು ತಿಂಗಳ ಮಳೆಯಿಂದ ಮಲೆನಾಡು ಸೇರಿದಂತೆ ಕೇರಳ, ಕೊಡಗು, ಕರಾವಳಿ ಕಂಗಾಲಾಗಿದ್ರೆ, ಇಲ್ಲಿನ ಪ್ರವಾಸಿ ತಾಣಗಳಲ್ಲಿ ವಿಧವಾ ಪ್ರಜ್ಞೆ ಕಾಡ್ತಿದೆ. ಹಾಗಾಗಿ, ಕಾಫಿನಾಡಿಗೆ ಬರ್ತಿರೋ ಪ್ರವಾಸಿಗರ ಸಂಖ್ಯೆ ಅಗಣಿತ. ಬಂದೋರು ಇಲ್ಲಿನ ಸೌಂದರ್ಯವನ್ನ ಸವಿದು ಹೋದ್ರೆ ನೋ ಪ್ರಾಬ್ಲಂ. ಆದ್ರೆ, ಹಾಗಾಗ್ತಿಲ್ಲ. ಮದ್ಯ ಹಾಗೂ ನೀರಿನ ಬಾಟಲಿ, ಪ್ಲಾಸ್ಟಿಕ್ಗಳನ್ನ ಅಲ್ಲೇ ಹಾಕ್ತಿದ್ದಾರೆ.
ಇದರಿಂದ ಇಲ್ಲಿನ ಸೌಂದರ್ಯವೂ ನಶಿಸ್ತಿದೆ. ಪ್ರವಾಸಿಗ್ರು ಕಾಫಿನಾಡಿಗೆ ಅತಿಥಿಯಷ್ಟೆ, ನಾವು ಅತಿಥೆಯರೆಂದು ಚಿಕ್ಕಮಗಳೂರಿನ ಇನ್ನರ್ ವೀಲ್, ಸ್ವಚ್ಛ ಟ್ರಸ್ಟ್, ಟೂರಿಸಂ, ಫಾರೆಸ್ಟ್ ಡಿಪಾರ್ಟ್ಮೆಂಟ್ ಹಾಗೂ ಬ್ರಹ್ಮಕುಮಾರಿ ಸಂಘ,ಹಾಗೂ ಪರ್ತಕರ್ತರ ಸಂಘದವರು ಗಿರಿಯಲ್ಲಿ ಪ್ರವಾಸಿಗರ ಪಾಪವನ್ನ ತೊಳೆದಿದ್ದಾರೆ.
ಹತ್ತರಿಂದ ಹದಿನೈದು ಚೀಲದಷ್ಟು ಮದ್ಯ ಹಾಗೂ ವಾಟರ್ ಬಾಟಲಿ, ಪ್ಲಾಸ್ಟಿಕ್ ಲೋಟ, ತಟ್ಟೆಯನ್ನ ಚೀಲದಲ್ಲಿ ತುಂಬಿ ಬಿಸಾಡಿದ್ದಾರೆ. ಅಲ್ಲಲ್ಲೆ ಬೋರ್ಡ್ಗಳಿವೆ ಸಾಲದಕ್ಕೆ ನಿಸರ್ಗವೂ ಒಂದು ದೈವ, ಎಜುಕೇಟೆಡ್ಗಳೇ ಇಲ್ಲಿನ ಸೌಂದರ್ಯವನ್ನ ಹಾಳು ಮಾಡ್ತಿದ್ದಾರೆಂದು ಪ್ರವಾಸಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿರಿಗೆ ಹೋಗುವ ಮಾರ್ಗ ಮಧ್ಯೆಯ ಹ್ಯಾಂಡ್ಪೋಸ್ಟ್ ಬಳಿ ಸಂಘದವರು ಹಾಗೂ ಅಧಿಕಾರಿಗಳೇ ವಾಹನಗಳನ್ನ ತಪಾಸಣೆ ನಡೆಸಿ, ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಭೂಕುಸಿತ ಉಂಟಾಗಿರೋ ಕಡೆ ದುರಸ್ಥಿ ಮಾಡದೆ ಪ್ರವಾಸಿಗರನ್ನ ಬಿಡ್ತಿದ್ದಾರೆಂದು ಜಿಲ್ಲಾಡಳಿತದ ವಿರುದ್ಧವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರನ್ನ ಕೊಂಡೊಯ್ಯೊ ಜೀಪ್ಗಳು ಮನಸ್ಸೋ-ಇಚ್ಛೆ ಓಡಾಡ್ತಿವೆ. ಅವುಗಳ ವೇಗಕ್ಕೂ ಅಂಕುಶ ಹಾಕಬೇಕು. ಗಿರಿಯಲ್ಲಿ ಸಾಕಷ್ಟು ಅಂಗಡಿ-ಹೋಟೆಲ್ಗಳು ತಲೆ ಎತ್ತಿವೆ. ಅವರು ವ್ಯಾಪಾರಕ್ಕಾಗಿ ಪ್ಲಾಸ್ಟಿಕ್ ಬಳಸುತ್ತಿದ್ದು, ಅವರ ಕಣ್ಣಿಗೆ ಇಲ್ಲಿನ ಸೌಂದರ್ಯ ಕಾಣ್ತಿಲ್ಲ. ಜಿಲ್ಲಾಡಳಿತ ಇಲ್ಲಿನ ಸೌಂದರ್ಯ ಉಳಿವಿಗಾಗಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ತಪ್ಪು ಮಾಡಿದವರಿಗೆ ಫೈನ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ, ನೆಂಟರಂತೆ ಬೆಳಗ್ಗೆ ಬಂದು ಸಂಜೆ ಹೋಗ್ತಿರೋ ಪ್ರವಾಸಿಗ್ರು ಇಲ್ಲಿನ ಸೌಂದರ್ಯವನ್ನ ಹಾಳು ಮಾಡೋದಕ್ಕೆ ಎಷ್ಟು ಬೇಕೋ ಅಷ್ಟು ಮಾಡ್ತಿದ್ದಾರೆ. ಪ್ರಕೃತಿಯೂ ಒಂದು ದೈವವಿದ್ದಂತೆ.
ದೈವದತ್ತವಾಗಿ ಬಂದಿರೋ ಇಂತಹಾ ಸೌಂದರ್ಯವನ್ನ ನಾವೇ ಹಾಳು ಮಾಡ್ತಿದ್ದೇವೆ. ಇಲ್ಲಿನ ಪ್ರಕೃತಿಯನ್ನ ಸವಿದು, ಉಳಿಸಿ ಬೆಳೆಸಿದ್ರೆ ಮುಂದಿನ ಪೀಳಿಗೆಯ ಜನ ಕೂಡ ಇದನ್ನ ನೋಡಿ ಸಂಭ್ರಮಿಸ್ತಾರೆ. ಇಲ್ಲವಾದ್ರೆ, ನಮ್ಮ ಕಾಲಕ್ಕೆ ಈ ತಾಣ ಹಾಳಾದ್ರು ಆಶ್ಚರ್ಯವಿಲ್ಲ. ಇನ್ನಾದ್ರು ಪ್ರವಾಸಿಗ್ರು ಇಲ್ಲಿನ ಸೌಂದರ್ಯವನ್ನ ಉಳಿಸಿ-ಬೆಳೆಸಲಿ ಅನ್ನೋದು ಕಾಫಿನಾಡಿಗರ ಮನವಿ…….. ಪ್ರವೀಣ್ ಚಿಕ್ಕಮಗಳೂರು…..








