ಪ್ರಾಶಸ್ತ್ಯ ಮತ ಹಾಕುವಾಗ ಇರಲಿ ಎಚ್ಚರ !

ತುಮಕೂರು:

ಅಂಕಿಗಳಲ್ಲಷ್ಟೇ ಪ್ರಾಶಸ್ತ್ಯ ಮತ ದಾಖಲಿಸುವ ಅವಕಾಶ | ನೋಟಾ ಇಲ್ಲ , ಶಾಹಿ ಹಾಕೋಲ್ಲ

ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿ.10ರಂದು ಪ್ರಾಶಸ್ತ್ಯ ಮತದಾನದ ಆಧಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಾಶಸ್ತ್ಯಮತ ಹಾಕುವ ಸಂದರ್ಭದಲ್ಲಿ ಅಂಕಿಗಳಲ್ಲಷ್ಟೇ ತಮ್ಮ ಪ್ರಾಶಸ್ತ್ಯವನ್ನು ದಾಖಲಿಸಬೇಕಿದೆ. ಪದಗಳಲ್ಲಿ ಅಥವಾ ಇನ್ಯಾವುದೇ ಮಾದರಿಯಲ್ಲಿ ಪ್ರಾಶಸ್ತ್ಯ ಮತ ಚಲಾಯಿಸಿದರೆ ಆ ಮತ ನಿಮ್ಮ ಇಚ್ಚೆಯ ಅಭ್ಯರ್ಥಿಗೆ ಧಕ್ಕುವುದಿಲ್ಲ ಎಂಬುದನ್ನು ಎಲ್ಲಾ ಮತದಾರರು ಅರಿಯಬೇಕಿದೆ.

ಸದ್ಯ ಜಿಲ್ಲೆಯಲ್ಲಿರುವ 5559 ಮತದಾರರಲ್ಲಿ ಶೇ.95ರಷ್ಟಿರುವ ಗ್ರಾಪಂ ಸದಸ್ಯರಲ್ಲಿ ಹಿರಿಯ ಸದಸ್ಯರು ಹಾಗೂ ಮಹಿಳಾ ಸದಸ್ಯರುಗಳಲ್ಲಿ ಅನೇಕರು ಅನಕ್ಷರಸ್ಥರು, ತಮ್ಮ ಪತಿರಾಯರು ನೀಡುವ ಸೂಚನೆಗನುಸಾರ ಮತಹಾಕುವ ಪದ್ದತಿ ಇಂದಿಗೂ ಚಾಲ್ತಿಯಲ್ಲಿದ್ದು, ಕೆಲವು ವಿದ್ಯಾವಂತ ಸದಸ್ಯರು ಮಾಡುವ ಎಡವಟ್ಟುಗಳು ಸಹ ಅವರ ಮತವನ್ನು ಕುಲಗೆಟ್ಟ ಮತಗಳಾಗಿಸಿ, ಚಲಾಯಿಸುವ ಮತಕ್ಕೆ ಯಾವುದೇ ಮಾನ್ಯತೆ ಇಲ್ಲದಂತೆ ಮಾಡುತ್ತವೆ.

  ಈ ರೀತಿ ದಾಖಲಿಸಿದರಷ್ಟೇ ಪುರಸ್ಕøತ:

ಪ್ರಾಶಸ್ತ್ಯ ಮತಗಳನ್ನು ಕನ್ನಡ, ಇಂಗ್ಲೀಷ್, ರೋಮನ್ ಅಂಕಿಗಳಲ್ಲಿ   ಮಾತ್ರ ದಾಖಲಿಸಲು ಅವಕಾಶವಿದ್ದು, ಇಂಗ್ಲೀಷ್‍ನಲ್ಲಾದರೆ 1,2,3,4…, ರೋಮನ್‍ನಲ್ಲಾದರೆ I, II, III, Iಗಿ.., ಹಾಗೂ ಕನ್ನಡದಲ್ಲಾದರೆ 1, 2,3,4…, ಹೀಗೆ ಅವರವರ ಅಭ್ಯರ್ಥಿ ಹೆಸರು ಭಾವಚಿತ್ರದ ಮುಂದಿನ ಆವರಣದೊಳಗೆ ಪ್ರಾಶಸ್ತ್ಯ ಮತಗಳನ್ನು ದಾಖಲಿಸಬೇಕಿದೆ. ಒಂದು, ಎರಡು.., oಟಿe ಣತಿo.., ಹೀಗೆಲ್ಲ ಪದಗಳಲ್ಲಿ ಬರೆಯುವಂತಿಲ್ಲ.

ಹೀಗೆ ಮಾಡದಿರಿ:

ಪ್ರಸ್ತುತ ತುಮಕೂರು ಕ್ಷೇತ್ರದ ಅಖಾಡದಲ್ಲಿ 6 ಮಂದಿ ಅಭ್ಯರ್ಥಿಗಳಿದ್ದು, ಒಬ್ಬರಿಗೆ ಕೊಟ್ಟ ಪ್ರಾಶಸ್ತ್ಯ ಮತವನ್ನು ಮತ್ತೊಬ್ಬರಿಗೆ ಕೊಟ್ಟರೆ ಅದು ತಿರಸ್ಕøತಗೊಳುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಪ್ರಥಮ ಪ್ರಾಶಸ್ತ್ಯ 1 ಎಂದು ದಾಖಲಿಸಿದರೆ ಮತ್ತೊಬ್ಬ ಅಭ್ಯರ್ಥಿಗೆ ಅದೇ 1 ಎಂದು ದಾಖಲಿಸಿ ಪ್ರಥಮ ಪ್ರಾಶಸ್ತ್ಯ ಮತ ಕೊಟ್ಟರೆ ನಿಮ್ಮಮತ ಮಾನ್ಯತೆ ಕಳೆದುಕೊಳ್ಳುತ್ತದೆ. ಬದಲಾಗಿ 2, 3,4,5,6.., ಹೀಗೆ ಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ಒಬ್ಬರಿಗೆ ಕೊಟ್ಟಿದ್ದು ಮತ್ತೊಬ್ಬರಿಗೆ ಪುನರಾವರ್ತನೆಯಾಗದಂತೆ ಪ್ರಾಶಸ್ತ್ಯ ಮತ ದಾಖಲಿಸಿದರೆ ಮಾತ್ರ ನಿಮ್ಮ ಮತ ಪುರಸ್ಕøತಗೊಳ್ಳುತ್ತದೆ.

ಬೇರೆ ಪೆನ್ನಲ್ಲಿ ಮತದಾಖಲಿಸಿದರೂ ತಿರಸ್ಕøತ:

ಸದಸ್ಯ ಮತದಾರರು ನಿಗದಿತ ಬ್ಯಾಲೆಟ್‍ಪೇಪರ್‍ನಲ್ಲಿ ಚುನಾವಣಾ ಸಿಬ್ಬಂದಿ ನೀಡುವ ನೇರಳೆ ಬಣ್ಣದ ಪೆನ್ನಿನಲ್ಲೇ ಪ್ರಾಶಸ್ತ್ಯ ಮತವನ್ನು ದಾಖಲಿಸಬೇಕು. ಅವರು ಕೊಟ್ಟ ಪೆನ್ ಹೊರತಾಗಿ ಬೇರೆ ಪೆನ್, ಪೆನ್ಸಿಲ್ ಬಳಸುವುದು, ಅಭ್ಯರ್ಥಿ ಹೆಸರಿನ ಮುಂದಿನ ಬಾಕ್ಸ್‍ನೊಳಗೆ ಸರಿಯಾಗಿ ದಾಖಲಿಸದೆ, ಬಾಕ್ಸ್ ಗೆರೆಯ ಮೇಲೆ, ಅಡ್ಡವಾಗಿ ತಮಗೆ ತೋಚಿದಂತೆ ಬರೆದರೆ ಆ ಮತ ಪತ್ರ ತಿರಸ್ಕøತ ಪಟ್ಟಿಗೆ ಸೇರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

ಚಿಹ್ನೆ, ಸಹಿ, ಚುಕ್ಕೆ ಬರೆಯುವಂತಿಲ್ಲ:

ಇನ್ನೂ ಬ್ಯಾಲೆಟ್‍ಪೇಪರ್‍ನಲ್ಲಿ ಪ್ರಾಶಸ್ತ್ಯದ ಮತದಾಖಲಿಸಿ ಕೆಳಗಡೆ ಸಹಿ ಮಾಡಿದರೂ ಆ ಮತ ತಿರಸ್ಕøತಗೊಳ್ಳುತ್ತದೆ. ಅಂಕಿಗಳ ಹೊರತಾಗಿ ನಕ್ಷತ್ರ, ತ್ರಿಕೋನ, ಈರೀತಿ ಯಾವುದೇ ಚಿಹ್ನೆ ಬರೆಯುವುದು, ಚುಕ್ಕೆಗಳನ್ನು ಇಟ್ಟರೆ, ರೈಟ್ ಮಾರ್ಕ್ ಹಾಕಿದರೆ ನಿಮ್ಮ ಮತ ತಿರಸ್ಕರಿಸಲ್ಪಡುತ್ತದೆ.

338 ಮತಗಟ್ಟೆ: ಪರಿಷತ್ ಚುನಾವಣೆಗೆ ಪ್ರತೀ ಗ್ರಾಮಪಂಚಾಯಿತಿ, ನಗರಸ್ಥಳೀಯಸಂಸ್ಥೆಗೆ ಒಂದು ಮತಗಟ್ಟೆಯಂತೆ ಜಿಲ್ಲೆಯಾದ್ಯಂತ 338 ಮತಗಟ್ಟೆ ಸ್ಥಾಪಿಸಿದ್ದು, ಪ್ರಾಶಸ್ತ್ಯ ಮತದಾನಕ್ಕಷ್ಟೇ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶವಿದೆ. ನೋಟಾ ಮತದಾನಕ್ಕೆ ಅವಕಾಶವಿಲ್ಲ. ಅಂತೆಯೇ ಯಾವುದೇ ಶಾಹಿ ಗುರುತನ್ನು ಬೆರಳಿಗೆ ಹಚ್ಚುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಜಾಪ್ರಗತಿಗೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಪ್ರಾಶಸ್ತ್ಯ ಮತದಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಗ್ರಾಮಪಂಚಾಯಿತಿ, ನಗರಸ್ಥಳೀಯ ಸಂಸ್ಥೆ ಸದಸ್ಯರಿಗೆ ಈಗಾಗಲೇ ಅರಿವು ಮೂಡಿಸಲಾಗಿದ್ದು, ಚುನಾವಣಾ ಸಿಬ್ಬಂದಿಗೂ ಅಗತ್ಯ ತರಬೇತಿ ನೀಡಲಾಗಿದೆ. ಪ್ರಾಶಸ್ತ್ಯ ಮತಗಳನ್ನು ನಿಗದಿತ ಅಂಕಿಯಲ್ಲಿ ದಾಖಲಿಸದೆ ತಮಗೆ ತೋಚಿದಂತೆ ಬರೆದರೆ, ಚಿಹ್ನೆ ರೈಟ್ ಮಾರ್ಕ್ ಹಾಕಿದರೆ ಅಂತಹ ಮತ ತಿರಸ್ಕøತಗೊಳ್ಳುತ್ತದೆ.
-ವೈ.ಎಸ್.ಪಾಟೀಲ್, ಜಿಲ್ಲಾ ಚುನಾವಣಾಧಿಕಾರಿ.

ಋಣ ಸಂದಾಯಕ್ಕೆ ಹೋಗಿ ಅಮೂಲ್ಯ ಮತವನ್ನೇ ಕಳೆದುಕೊಳ್ಳಬೇಡಿ: ಚುನಾವಣಾ ಅಖಾಡದಲ್ಲಿ ಕೇಳಿಬರುತ್ತಿರುವ ಹಣ, ಉಡುಗೊರೆ ಆಮಿಷಕ್ಕೆ ಒಳಗಾಗಿ, ಎಲ್ಲಾ ಅಭ್ಯರ್ಥಿಗಳನ್ನು ಒಂದೇ ಸಮಾನವಾಗಿ ಹೋಗೋಣ, ಹೇಗಿದ್ದರೂ ಎಲ್ಲರಿಗೂ ಮತಚಲಾಯಿಸುವ ಅವಕಾಶವಿದೆ. ಹಾಗಾಗಿ ಎಲ್ಲರಿಗೂ ಒಂದೇ ಪ್ರಾಶಸ್ತ್ಯ ಮತಕೊಡೋಣ ಎಂಬ ಮನೋಭಾವ ಮತದಾರರಿಲ್ಲದ್ದರೆ, ಋಣ ಸಂದಾಯಕ್ಕೆ ಹೋಗಿ ತಮ್ಮ ಅಮೂಲ್ಯ ಮತವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರವನ್ನು ಮತದಾರರು ಹೊಂದುವುದು ಅಗತ್ಯವಾಗಿದೆ ಅಲ್ಲದೇ ಮತದಾರ ಸದಸ್ಯರು ಮಾಡುವ ಎಡವಟ್ಟುಗಳು ಅಭ್ಯರ್ಥಿಗಳ ಸೋಲು-ಗೆಲುವಿನ ಮೇಲೆ ಪರಿಣಾಮ ಬೀರಲಿದೆ.

ಅಭ್ಯರ್ಥಿ ಶೇ.50ಕ್ಕಿಂತಹೆಚ್ಚು ಮತ ಪಡೆದರೆ ಮೊದಲ ಸುತ್ತಿನಲ್ಲೇ ವಿಜಯಿ
ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಚಲಾವಣೆಯಾದ ಮತಗಳ ಪೈಕಿ ಪುರಸ್ಕøತ ಮತಗಳಲ್ಲಿ ಶೇ.50ಕ್ಕಿಂತ ಹೆಚ್ಚುವರಿ ಮತಗಳನ್ನು ಯಾರು ಪಡೆಯುತ್ತಾರೋ ಆ ಅಭ್ಯರ್ಥಿಯನ್ನು ಮೊದಲಸುತ್ತಿನಲ್ಲೇ ಜಯಶಾಲಿಯೆಂದು ಘೋಷಿಸಲಾಗುತ್ತದೆ.

         ಅಷ್ಟು ಮತಗಳನ್ನು ಯಾವ ಅಭ್ಯರ್ಥಿಯೂ ಪಡೆಯದಿದ್ದರೆ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಕಡಿಮೆ ಮತಗಳಿಕೆಯ ಅಭ್ಯರ್ಥಿಗಳಿಂದ ಎಣಿಸುತ್ತಾ, ಅಂತಿಮವಾಗಿ ಮೊದಲು ಇಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಗಳಲ್ಲಿ ಹೆಚ್ಚು ಪ್ರಾಶಸ್ತ್ಯ ಮತ ಪಡೆದವರನ್ನು ವಿಜಯಿಯೆಂದು ಘೋಷಿಸಲಾಗುತ್ತದೆ. ಹಾಗಾಗಿ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಒಬ್ಬರಿಗೆ ನೀಡಬೇಕು. ಇತರರಿಗೆ ನಂತರದ ಪ್ರಾಶಸ್ತ್ಯ ಮತಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ತಿಳಿಸಿದ್ದಾರೆ.

ಪ್ರಮುಖಾಂಶಗಳು

* ಒಬ್ಬ ಅಭ್ಯರ್ಥಿಗೆ ಒಂದೇ ಪ್ರಾಶಸ್ತ್ಯ ಮತ

* ಬ್ಯಾಲೆಟ್ ಪೇಪರ್‍ನಲ್ಲಿ ಅಂಕಿಯಲ್ಲೇ ಪ್ರಾಶಸ್ತ್ಯ ಮತ ದಾಖಲಿಸಬೇಕು.ಚಿಹ್ನೆ, ಸಹಿ, ಚುಕ್ಕೆ, ರೈಟ್ ಮಾರ್ಕ್ ಹಾಕುವಂತಿಲ್ಲ.

*ಬೇರೆ ಪೆನ್ನಲ್ಲಿ ಮತದಾಖಲಿಸಿದರೂ ತಿರಸ್ಕøತ.

* ಅಭ್ಯರ್ಥಿ ಹೆಸರು, ಭಾವಚಿತ್ರ ಮುಂದಿನ ಬಾಕ್ಸ್‍ನೊಳಗೆ ಪ್ರಾಶಸ್ತ್ಯ ಮತ ದಾಖಲಿಸಬೇಕು.

                                                                                     ಎಸ್.ಹರೀಶ್ ಆಚಾರ್ಯ ತುಮಕೂರು

Recent Articles

spot_img

Related Stories

Share via
Copy link
Powered by Social Snap