ಬಕ್ರೀದ್ ಆಚರಣೆಗೆ ದಿನಗಣನೆ ಬೆಂಗಳೂರಿನಲ್ಲಿ ಕುರಿ ಮತ್ತು ಮೇಕೆಗಳ ಮಾರಾಟದ ಭರಾಟೆ ಜೋರು

ಬೆಂಗಳೂರು:

             ಬಕ್ರೀದ್ ಆಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕುರಿ ಮತ್ತು ಮೇಕೆಗಳ ಮಾರಾಟದ ಭರಾಟೆ ಜೋರಾಗಿದೆ.

             ಚಾಮರಾಜಪೇಟೆಯ ಈದ್ಗಾ ಮೈದಾನ, ಜೆ.ಸಿ. ನಗರದ ದೂರದರ್ಶನ ಕೇಂದ್ರದ ರಸ್ತೆ, ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿ ಸೇರಿದಂತೆ ನಗರದ ವಿವಿಧೆಡೆ ತರಾವರಿ ತಳಿಗಳ ಕುರಿ ಮತ್ತು ಮೇಕೆಗಳ ಮಾರಾಟ ಭರದಿಂದ ಸಾಗಿದೆ. ಬಾಗಲಕೋಟೆ, ಜಮಖಂಡಿ, ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ, ಚಿತ್ರದುರ್ಗ ಮತ್ತು ಪಕ್ಕದ ಆಂಧ್ರಪ್ರದೇಶ ಹೀಗೆ ರಾಜ್ಯ ಮತ್ತು ಹೊರರಾಜ್ಯಗಳಿಂದ ರೈತರು ಕುರಿ ಹೆಚ್ಚು ಬೆಲೆ ದೊರೆಯಲಿದೆ ಎನ್ನುವ ಆಸೆಯಿಂದ ನಗರಕ್ಕೆ ಲಗ್ಗೆಯಿಟ್ಟಿದ್ದಾರೆ.

             ಕೆಂದಕುರಿ, ಬಿಳಿಕುರಿ, ಟಗರು, ಕರಿ ಹೋತ, ಬಿಳಿ ಹೋತ ಸೇರಿದಂತೆ ಹಲವು ಬಗೆಯ ಕುರಿಗಳು ಹಾಸನದ ಗೆಣಸಿ, ಮಂಡ್ಯದ ಕಿರುಗಾವಲು ಭಾಗಗಳ ಕುರಿಗಳು, ಹೋತ, ಮೈಲಾರಿ, ಕರಿಕುರಿ, ಟಗರು ಜಾತಿಯ ಕುರಿಗಳೂ ಮಾರಾಟಕ್ಕಿದ್ದು ಕೋಟ್ಯಾಂತರ ರೂಗಳ ವಹೀವಾಟು ನಡೆದಿದೆ..

             ವಿವಿಧ ತಳಿಯ ಕುರಿ: ರಾಜ್ಯದ ಬನ್ನೂರು, ಹಾವೇರಿ, ಚಿತ್ರದುರ್ಗ, ಮುಧೋಳ, ಮಾಗಡಿ, ನೆಲಮಂಗಲ, ಮಂಡ್ಯ, ಚನ್ನಪಟ್ಟಣ, ಆನೇಕಲ್, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಕೆಜಿಎಫ್ ಹಾಗೂ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಭಾಗಗಳಿಂದ ಮಾರಾಟಗಾರರು ಮಾರುಕಟೆಗೆ ಬಂದಿದ್ದಾರೆ.

              ಹೊರ ರಾಜ್ಯದ ಕುರಿಗಳ ಸಂಖ್ಯೆ ಕಡಿಮೆ ಇದ್ದು, ರಾಜ್ಯದ ಕುರಿಗಳೆ ಹೆಚ್ಚಿವೆ. ಅಲ್ಲದೆ, ಹೊರ ರಾಜ್ಯದವರು ಈ ಮಾರುಕಟ್ಟೆ ಯಿಂದ ಕುರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಇವುಗಳಲ್ಲಿ ಬನ್ನೂರು ಕುರಿ, ಜಮುನಾಪುರಿ ತಳಿ, ಅಮೀನ್‍ಘಡ ತಳಿಗಳಿಗೆ ಬೇಡಿಕೆ ಹೆಚ್ಚಿದೆ.

              ಅಮೀನ್‍ಘಡ ತಳಿಯ ಕುರಿಯೊಂದಕ್ಕೆ 80 ಸಾವಿರದಿಂದ 3ಲಕ್ಷ ರೂ.ವರೆಗೆ ಮಾರಾಟವಾಗುತ್ತಿರುವುದು ವಿಶೇಷ ಜೊತೆಗೆ ಕಂದುಕುರಿ 50 ಸಾವಿರ ರೂ.ಗಳಿಗೆ ಮಾರಾಟವಾದರೆ, ಬಿಳಿಕುರಿ 10 ರಿಂದ 15 ಸಾವಿರ ರೂ.ಗಳಿಗೆ ಬಿಕರಿಯಾಗುತ್ತಿವೆ. ಉಳಿದಂತೆ ನಾಟಿ ತಳಿಯ ಕುರಿ ಮತ್ತು ಮೇಕೆಗಳು ಗ್ರಾಹಕರನ್ನು ಸೆಳೆದಿವೆ.

ಬೆಲೆ ಹೆಚ್ಚಳ

           ಮಾರುಕಟ್ಟ್ಟೆಯಲ್ಲಿ ಕುರಿ ಬೆಲೆ ತುಸು ಜಾಸ್ತಿಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಮಾರಾಟವಾಗುತ್ತಿರುವ ಕುರಿಗಳ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆಕುರಿಗಳು ಸಂಖ್ಯೆಯಲ್ಲಿ ಮಾತ್ರ ಕಡಿಮೆ ಕಾಣಿಸಿಕೊಂಡಿಲ್ಲ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿರುವ ಕುರಿ ಮಾರುಕಟ್ಟೆ ಗ್ರಾಹಕರ ನಂಬಿಕೆಯ ತಾಣವಾಗಿ ರೂಪುಗೊಂಡಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಮಾರುಕಟ್ಟೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯ ಕೇಂದ್ರವಾಗಿ ಬದಲಾಗುತ್ತದೆ.

           ಕುರಿಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿರುವುದು ಮಾರಾಟಗಾರರ ನಿರಾಸೆಗೆ ಕಾರಣವಾಗಿದೆ. ಕುರಿಗಳ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರು ಹಾಗೂ ಮಾರಾಟಗಾರರಿಗೆ ಸಮಸ್ಯೆ ತಂದಿದೆ. ಬಕ್ರೀದ್ ಹಬ್ಬಕ್ಕಾಗಿಯೆ ಸಾಕುವ ಕುರಿಗಳನ್ನು 35-40 ಸಾವಿರ ರೂ.ಬೆಲೆ ನಿಗದಿ ಮಾಡಿದರೆ, ಗ್ರಾಹಕರು ಅದೇ, ಕುರಿಯನ್ನು 15-20 ಸಾವಿರ ರೂ.ಗೆ ಕೇಳುತ್ತಾರೆ ಎಂದು ಕುರಿ ವ್ಯಾಪಾರಿ ನಾಗರಾಜು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link