ಜ್ಞಾನಭಾರತಿಯಲ್ಲಿ ಐತಿಹಾಸಿಕ ಅಂಬೇಡ್ಕರ್ ಜಯಂತಿ ಆಚರಣೆ

ಬೆಂಗಳೂರು

   ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.”ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‌ರವರು ಅರ್ಥಶಾಸ್ತ್ರದ ಕುರಿತು ಸಾಕಷ್ಟು ಆಸಕ್ತಿ ಹೊಂದಿದ್ದರು,ಅಲ್ಲದೇ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿ.ಹೆಚ್.ಡಿ ಕೂಡ ಪಡೆದಿದ್ದರು.

    ಭಾರತದ ಆರ್ಥಿಕತೆಯನ್ನು ಎಲ್ಲಾ ಹಂತದಲ್ಲೂ ಸೂಕ್ಷ್ಮವಾಗಿ ಗಮನಿಸಿ ಸಾಕಷ್ಟು ಅಧ್ಯಯನ ನಡೆಸಿದ್ದರು.ಆದ್ದರಿಂದ ಎಲ್ಲರನ್ನೂ ಒಳಗೊಂಡ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಜಾತಿಭೇದಗಳನ್ನು ತೊಡಕಿಸಿ ಸಮ‌ ಸಮಾಜ ನಿರ್ಮಾಣದಲ್ಲಿ‌ ನಗರಗಳ ಪಾತ್ರ ದೊಡ್ಡದು ಎಂದು ಅರಿತಿದ್ದ ಅಂಬೇಡ್ಕರ್‌ರವರು ನಗರೀಕರಣದ ಪರಿಕಲ್ಪನೆಯನ್ನು ಮೊದಲೇ ನೀಡಿದ್ದರು.ಇಂದು ಭಾರತ 1990 ರ ದಶಕದ ಆರ್ಥಿಕ ನೀತಿಗಳಿಂದ ವಿಶ್ವಕ್ಕೆ ತೆರೆದುಕೊಂಡಿದೆ.

   ಭಾರತ ಬೆಳೆಯುತ್ತಿದ್ದರೂ ಎಲ್ಲ ವರ್ಗಗಳನ್ನು ಒಟ್ಟಾಗಿ ಕೊಂಡೊಯ್ಯುವಲ್ಲಿ‌ ಇನ್ನೂ ಯಶಸ್ವಿಯಾಗಿಲ್ಲ.ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗದಿದ್ದರೆ ಶ್ರೀಮಂತರು ಬೆಳವಣಿಗೆಯಾಗುತ್ತದೆ ಹೊರತು ಬಡವರ ಭಾರತವಾಗುವುದಿಲ್ಲ,ಆ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಆಶಯದಂತೆ ಭಾರತ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು’ ಎಂದು ಸಲಹೆ ನೀಡಿದರು.ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.

   ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಜಯಕರ ಎಸ್.ಎಂ,ಕುಲಸಚಿವ ಶೇಕ್ ಲತೀಫ್,ಕುಲಸಚಿವರು ಮೌಲ್ಯಮಾಪನ ಶ್ರೀನಿವಾಸ್ ಸಿ,ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕರು ಪ್ರೊ.ನಾಗೇಶ್ ಸೇರಿದಂತೆ ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link