ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೀಮೋಫೀಲಿಯಾ ಕಾರ್ಯಾಗಾರ

 ಬಳ್ಳಾರಿ:

      ನಗರದ ಜಿಲ್ಲಾಸ್ಪತ್ರೆಯಲ್ಲಿ ಹೀಮೋಫೀಲಿಯಾ ಯುತ್ ಫೋರಂ,ನೊವೊ ನೋರ್ಡಿಸ್ಕ್ ಪಾರ್ಮಸಿಟಿಕಲ್ ಕಂಪನಿ, ಹೀಮೋಫೀಲಿಯಾ ಸೊಸೈಟಿ ಗಂಗಾವತಿ ಚಾಪ್ಟರ್ ಸಹಯೋಗದಲ್ಲಿ ಹಿಮೋಫೀಲಿಯಾ ಕುರಿತು ಒಂದು ದಿನದ ಕಾರ್ಯಗಾರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

      ವೈದ್ಯರು ಹಾಗೂ ಹೀಮೋಫೀಲಿಯಾದಿಂದ ಬಳಲುತ್ತಿರುವ ರೋಗಿಗಳಿಗೆ ಏರ್ಪಡಿಸಿದ್ದ ಈ ಕಾರ್ಯಾಗಾರದಲ್ಲಿ ಹೀಮೋಫೀಲಿಯಾದ ಚಿಕಿತ್ಸೆಯನ್ನು ಯಾವ ರೀತಿ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಮಹಾವಿದ್ಯಾಲಯದ ಹೆಮಟೋಲಾಜಿ ವಿಭಾಗದ ಮುಖ್ಯಸ್ಥ ಡಾ.ಸೆಸಿಲ್ ರಾಸ್ ಅವರು ವಿವರಿಸಿದರು.

      ಪ್ರ್ರಾಯೋಗಿಕವಾಗಿ ನಾವು ಕ್ಷೇತ್ರಮಟ್ಟದಲ್ಲಿ ಎದುರಿಸಬಹುದಾದ ಸಮಸ್ಯೆಗಳನ್ನು (ಹೀಮೋಫೀಲಿಯಾ ಕುರಿತಾದ) ಯಾವ ರೀತಿ ನಿರ್ವಹಿಸಬಹುದು ಎಂಬದರ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಟ್ಟರು.

      ಅದೇ ರೀತಿ ಹೀಮೋಫೀಲಿಯಾದ ಪ್ರಯೋಗಶಾಲಾ ಪತ್ತೆವಿಧಾನಗಳು ಮತ್ತು ಕ್ಲಿಷ್ಟಕರ ಪ್ರಕರಣಗಳ ನಿರ್ವಹಣೆಯ ಕುರಿತು ದಾವಣಗೆರೆ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಪ್ಯಾಥಲಜಿ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ಅವರು ತಿಳಿಸಿದರು.

      ಡಾ.ಸುರೇಶ್ ಹನಗವಾಡಿ ಅವರು, ಸ್ವತಃ ಹೀಮೋಫೀಲಿಯಾದ ರೋಗಿಯಾಗಿದ್ದು, ಎಲ್ಲಾ ವಿಷಯಗಳನ್ನು ಸ್ವಂತ ಅನುಭವ ಮತ್ತು ಈ ಗುಂಪಿನ ರೋಗಿಗಳು ಎದುರಿಸಬೇಕಾದ ಕಷ್ಟಗಳು ಮತ್ತು ಅವುಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಬಗ್ಗೆ ಸ್ಪೂರ್ತಿಯ ಮಾತುಗಳನ್ನು ಈ ಸಂದರ್ಭದಲ್ಲಿ ಹೇಳಿದರು.

      ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಬಳ್ಳಾರಿ ಮತ್ತು ಸುತ್ತಮುತ್ತಲಿನ ಹೀಮೋಫೀಲಿಯಾದ ರೋಗಿಗಳ ಫಿಜಿಯೋಥೆರಪಿ ಅಂಶಗಳನ್ನು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಮಹಾವಿದ್ಯಾಲಯದ ಫಿಜಿಯೋಥೆರಪಿ ವಿಭಾಗದ ಡಾ.ಸಿಜು ಪಾಲ್ ರವರು ಪ್ರಾತ್ಯಕ್ಷಿಕೆಯ ಮೂಲಕ ಕೀಲುಗಳ ನ್ಯೂನ್ಯತೆಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

      ಈ ಕಾರ್ಯಾಗಾರದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಹೆಚ್.ನಿಜಾಮುದ್ದಿನ್, ಡಿಟಿಸಿ ಪ್ರಾಂಶುಪಾಲರಾದ ಡಾ. ಗುರುನಾಥ ಜೌಹಾಣ್, ಸ್ಥಾನಿಕ ವೈದ್ಯಾಧಿಕಾರಿ ಡಾ ಎನ್.ಸೌಭಾಗ್ಯವತಿ ಸೇರಿದಂತೆ ತಜ್ಞವೈದ್ಯರು, ವಿಮ್ಸ್‍ನ ಹಿರಿಯ ವೈದ್ಯರು & ಇತರೆ ಸಿಬ್ಬಂದಿ ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link