ಬಸವಮಠ ಅನುಭವ ಮಂಟಪವಾಗಿ ರೂಪುಗೊಳ್ಳಬೇಕು

ತೋವಿನಕೆರೆ:

             ಸುಮಾರು ಮುನ್ನೂರೈವತ್ತು ವರ್ಷ ಇತಿಹಾಸವಿರುವ ಹೊಲತಾಳಿನ ಬಸವಮಠವನ್ನು 12ನೇ ಶತಮಾನದ ಬಸವ ಚಿಂತನೆಯ ಆಶಯದಂತೆ ಜಾತ್ಯತೀತ, ಲಿಂಗಬೇದವಾಗಿ ಸಮಾನತೆಯ ನೆಲೆಗಟ್ಟಿಹಲ್ಲಿ ಅನುಭವ ಮಂಟಪವಾಗಿ ರೂಪುಗೊಳಿಸಲಾಗುವುದು ಎಂದು ಆದರ್ಶ ಪರಿಸರ ಟ್ರಸ್ಟ್‍ನ ಅಧ್ಯಕ್ಷ ಡಾ.ಸಿದ್ಧಲಿಂಗ ಹೊಲತಾಳ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಮಠದ ಪುನಶ್ಚೇತನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುವ ಮೂಲಕ ಮಾತನಾಡುತ್ತಿದ್ದರು.

              ವಿಶೇಷ ಉಪನ್ಯಾಸ ನೀಡಿದ ಸಂಶೋಧಕ ಮತ್ತು ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎನ್.ಯೋಗೀಶ್ವರಪ್ಪ ಮಠವು ಒಂದು ಶತಮಾನ ಕಾಲ ಪಾಳು ಬಿದ್ದಿದೆ. ಈ ಮಠ 350 ವರ್ಷದ ವಿರಕ್ತ ಮಠ. ಸಿದ್ಧಲಿಂಗೇಶ್ವರರ ಶಿಷ್ಯರು ಇಲ್ಲಿ ಧರ್ಮ ಪ್ರಚಾರ ಮಾಡಿರಬಹುದೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಬಿ.ನಂಜುಂಡಸ್ವಾಮಿ ಮಾತನಾಡುತ್ತಾ ಭವ್ಯವಾದ ಕಲ್ಯಾಣಿ ಮತ್ತಿತರ ವಿನ್ಯಾಸಗಳನ್ನು, ಅವುಗಳ ಭವ್ಯತೆಯನ್ನು, ಕಲೆಯ ಚಿತ್ರಗಳನ್ನು ಗುರುತಿಸಿ ಸಾರ್ವಜನಿಕರ ಗಮನಕ್ಕೆ ತಂದರು.
             ದಿವ್ಯ ಸಾನಿಧ್ಯವನ್ನು ಸಿದ್ದರಬೆಟ್ಟ ಸುಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡುತ್ತಾ ಈ ಮಠದ ವಿನ್ಯಾಸವು ಇಂಜಿನಿಯರ್ ಮಾರ್ಗದರ್ಶನದಲ್ಲಿ ಮರು ರೂಪ ಪಡೆದುಕೊಳ್ಳಬೇಕು. ಸಾರ್ವಜನಿಕರು ಪುನರ್ ನಿರ್ಮಾಣಕ್ಕೆ ಉದಾರ ಧನ ಸಹಾಯ ನೀಡಬೇಕೆಂದು ಕರೆ ನೀಡಿದರು. ಸಭೆಯಲ್ಲಿ ಎಂ.ಜಿ.ಸಿದ್ದರಾಮಯ್ಯ, ಮಂಜುಳಾರಾಧ್ಯ, ಪರ್ವತಯ್ಯ, ಬಾಪೂಜಿ, ಬಸವ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ದೊಡ್ಡಸಿದ್ದಯ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿದ್ದರಾಜು ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link
Powered by Social Snap