ಹರಪನಹಳ್ಳಿ:
ಅಗತ್ಯ ಬೆಲೆ ನಿಯಂತ್ರಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕರೆನೀಡಿರುವ ಭಾರತ ಬಂದ್ ತಾಲೂಕಿನ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಪ್ರೇರಣೆಯಿಂದ ಬಂದ್‍ಗೆ ಬೆಂಬಲಿಸಿ ಯಶಸ್ವಿಗೊಳಿಸಬೇಕಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ಹೆಚ್.ಎಂ.ವಿರೂಪಾಕ್ಷಯ್ಯ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಕರೆ ನೀಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ನೋಟು ಅಮಾನ್ಯೀಕರಣದಿಂದ ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿದು ಆರ್ಥಿಕಮಟ್ಟ ಅಧೋಗತಿಗೆ ಬಂದಿದೆ. ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆಢಳೀತಾರೂಢ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕೈಗೊಂಡಲ್ಲಿ ಮಾತ್ರ ಸಮತೋಲನೆ ಕಾಪಾಡಲು ಸಾದ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಫಲತೆ ಖಂಡಿಸಿ ಭಾರತ್ ಬಂದ್‍ಗೆ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. ಬಿಜೆಪಿ ಪಕ್ಷ ವಿರೋಧಿ ಪಕ್ಷಗಳು ಬಂದ್‍ನಲ್ಲಿ ಸಹಕರಿಸಲು ಮನವಿ ಮಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿ, ಜನತೆಯ ಅಸಹಾಕಾರಕ್ಕೆ ಅವಕಾಶ ನೀಡದಿರಲು ಕೇಂದ್ರಕ್ಕೆ ಬಂದ್ ಮೂಲಕ ಶಾಂತಿಯುತ ಆಚರಣೆ ಮಾಡಿ ಎಚ್ಚರಿಕೆ ನೀಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ತಾಪಂ ಸದಸ್ಯರಾದ ಓ.ರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ವಕೀಲರಾದ ವೆಂಕಟೇಶ್, ಡಿ.ರೆಹಮಾನ್ ಸಾಬ್, ಮುಖಂಡರಾದ ಹಲಗೇರಿ ಮಂಜುನಾಥ್, ಕುಂಚೂರು ಇಬ್ರಾಹೀಂಸಾಬ್, ಇರ್ಷಾದ್, ಸರ್ಕಾವಸ್ ಜಾಕೀರ್, ಅರುಣ್, ಕುಂಚೂರು ವಿಶ್ವನಾಥ್ ಹಾಗೂ ಇತರರು ಇದ್ದರು.