ಬಾಲ ಕಾರ್ಮಿಕರು ಮತ್ತು ಬಾಲ್ಯವಿವಾಹ ಕಂಡು ಬಂದಲ್ಲಿ 1098ಗೆ ಕರೆ ಮಾಡಿ

ಸಿರಿಗೇರಿ 

      ಬಾಲ ಕಾರ್ಮಿಕರು ಮತ್ತು ಬಾಲ್ಯವಿವಾಹ ಕಂಡು ಬಂದಲ್ಲಿ 1098ಗೆ ಕರೆ ಮಾಡಿ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್‍ಬಿ ಹಂದ್ರಾಳ್ ರವರು ಮಂಗಳವಾರ ಸಿರಿಗೇರಿ ಬಾಲಕರ ಪ್ರೌಢ ಶಾಲೆ ಅವರಣದಲ್ಲಿ. ಮಕ್ಕಳ ಸಹಾಯವಾಣಿ ಸಹಯೋಗ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರರಾಧಿಕಾರಿಗಳ ಸಂಘ ಬಳ್ಳಾರಿ ಸಹಯೋಗಲ್ಲಿ ಹಮ್ಮಿಕೊಂಡ ಮುಕ್ತ ಸಂವಾದ ಸಮುದಾಯ ಸಭೆ ಉದ್ಘಾಟಿಸಿ ಮಾತನಾಡಿದರು.

      ಜೀತ ದೇವದಾಸಿ ಪದ್ಧತಿಗೆ ಒಳಗಾದಮಕ್ಕಳು ಶೋಷಣೆ ದೌರ್ಜನ್ಯ ಕೊಳ್ಳಗಾದಮಕ್ಕಳು ಹಾಗೂ ಇತರೆ ಸಮಸ್ಯೆಗೊಳಗಾದ ಹುಟ್ಟಿನಿಂದ ಹಿಡಿದು 18 ವರ್ಷದೊಳಗಿನ ಯಾವುದೇ ಮಕ್ಕಳಿಗೆ ನೆರವು ನೀಡಲು ಈ ಕೇಂದ್ರವು ದಿನದ 24 ಗಂಟೆಗಳಕಾಲ ಕಾರ್ಯನಿರ್ವಹಿಸುತ್ತದೆ ಎಂದರು.

      ನಂತರ ಮುಕ್ತ ನೇರ ಸಂವಾದ: ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಸಮಸ್ಯಗಳನ್ನು ನೇರವಾಗಿ ಅಧಿಕಾರಿಗಳ ಬಳಿ ತೊಡಿಕೊಂಡರು
ನರಸಮ್ಮ,ಸಿಂದು,ಲಕ್ಷ್ಮಿ ಬಾಲಕಿಯರ ಪ್ರೌಢ ಶಾಲೆ ವಿದ್ಯಾಥಿನಿಯರು ತಮ್ಮಶಾಲೆಗೆ ಸಮತಟ್ಟವಾದ ಅವರಣ ಮತ್ತು ತಡೆಗೋಡೆ ನೀರ್ಮಿಸಿ ಮತ್ತು ವರ್ಷದ ಸಮವಸ್ತ್ರಗಳು ಕೊಟ್ಟಿಲ್ಲಾ ಹಾಗೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದುರು.

      ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿಯರಾದ ಕಿರ್ತಿ,ಶಾರದ ಮಾತನಾಡಿ ಕಾಲೇಜಿನ ಅವರಣದಲ್ಲಿ ಮದ್ಯಪಾನ ಮಾಡಿ ಬಾಟಲ್‍ಗಳನ್ನು ಬಿಸಾಡಿರುತ್ತಾರೆ. ಮತ್ತು ಗ್ರಾಮದ ಯಾವುಉದೇ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇಲ್ಲ ಎಂದು ದೂರಿದರು.

       ಮನೋಜ ಕುಮಾರ,ಮೃತುಂಜಯ,ರಾಜಶೇಖರ ಪ್ರಶ್ನೆ ಕೇಳಿ ಸೈಕಲ್ ಮತ್ತು ದೈಹಿಕ ಶಿಕ್ಷಕರನ್ನು ನೇಮಿಸಿ ಎಂದರು
ಅಧಿಕಾರಿಗಳು ಸಮಸ್ಯೆಗಳನ್ನು ತಿಳಿದುಕೊಂಡು ಮಾತನಾಡಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಕ್ಷಣವೆ ಪರಿಹಾರ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ಕೊಟ್ಟರು.

      ಇದೆವೇಳೆ ವಿದ್ಯಾರ್ಥಿಗಳು ಬಾಲ್ಯವಿವಾಹದ ಕುರಿತು ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಸಭೆಯ ಚೌರಪ್ಪ ನಿರ್ದೇಶಕರು ಮಕ್ಕಳ ಸಹಾಯವಾಣಿ ಸಹಯೋಗ.ಅಧ್ಯಕ್ಷತೆ ವಹಿಸಿದ್ದರು.

     ಈ ಸಂದರ್ಭದಲ್ಲಿ ಮಂಜುನಾಥ ಮಕ್ಕಳ ಕಲ್ಯಾಣ ಸಮಿತಿ,ಲಲಿತಮ್ಮ ವಿಶೇಷ ಪೊಲೀಸ್‍ಘಟಕ,ಚಾಗಪ್ಪ ಬಿಅರ್‍ಪಿ, ಗ್ರಾಪಂ ಅಧ್ಯಕ್ಷೆ ಕೊಳ್ಳಿದ್ಯಾವಮ್ಮ ಪಾವಡಿನಾಯಕ,ಜಿಪಂ ಸದಸ್ಯೆ ರತ್ನಮ್ಮ ಅಡಿವೆಯ್ಯಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಸಂಪತ್‍ಕುಮಾರ್, ವಿಶ್ವನಾಥ ಗೌಡ ಪ್ರಾಂಶುಪಾಲರು, ಮುಖ್ಯಗುರುಗಳಾದ ಕೆ ವೀರಪ್ಪ,ಶ್ರೀದರಮೂರ್ತಿ, ಶಿಕ್ಷಕರ ವೃಂದ,ಅಂಗನಾಡಿ ಹಾಗೂ ಆಶಾ ಕಾರ್ಯಕರ್ತರು.

      ಪೊಲೀಸ್ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ನಾನ ಶಾಲೆಯ ವಿದ್ಯಾರ್ಥಿಗಳು ಬಾಗವಹಿಸಿದ್ದರು. ಕಾರ್ಯಕ್ರಮ ವಿದ್ಯಾರ್ಥಿನಿ ಶಂಕರಮ್ಮ ನಿರೂಪಿಸಿ ಶಿವಮೂರ್ತಿ ವಂದಿಸಿದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link