ಬಾಳೆಹಣ್ಣಿನ ಉಪಯೋಗ ಕೇಳಿದ್ರೇ ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರ

Related image      ಬೆಳಗ್ಗಿನ ಉಪಾಹಾರಕ್ಕೆ ನೀವು ಸೀರಲ್, ದೋಸೆ ಅಥವಾ ಸ್ಮೂಥಿ ಸೇವಿಸಬಹುದು. ಈ ವೇಳೆ ನಿಮಗೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುವುದು. ಇದರೊಂದಿಗೆ ನೀವು ಬಾಳೆಹಣ್ಣನ್ನು ಸೇರಿಸಿಕೊಂಡರೆ ಅದರಲ್ಲಿರುವ ಪೋಷಕಾಂಶಗಳು ನಿಮ್ಮ ದೇಹಕ್ಕೆ ಮತ್ತಷ್ಟು ಬಲ ನೀಡುವುದು. ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು ಎಂದು ಹಿಂದಿನಿಂದಲೂ ಹೇಳುತ್ತಾ ಬರಲಾಗಿದೆ. ಈ ಲೇಖನದಲ್ಲಿ ದಿನಕ್ಕೆ ಎರಡು ಬಾಳೆಹಣ್ಣುಗಳನ್ನು ತಿಂದರೆ ಅದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಬಾಳೆಹಣ್ಣು ತುಂಬಾ ರುಚಿಕರವಾದ ಹಣ್ಣು ಮತ್ತು ಇದರಿಂದ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು.

 

       ಬಾಳೆಹಣ್ಣಿನಲ್ಲಿ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6, 1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ.8ರಷ್ಟು ಮ್ಯಾಂಗನೀಸ್ ಇದೆ.

ದಿನಕ್ಕೆ ಎರಡು ಬಾಳೆಹಣ್ಣು ತಿಂದರೆ ಏನಾಗುತ್ತದೆ…?

1. ರಕ್ತದೊತ್ತಡ ಕಡಿಮೆ ಮಾಡುವುದು ನೀವು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡವು ಸಾಮಾನ್ಯಕ್ಕೆ ಬರುವುದು. ಇದರಲ್ಲಿ 420 ಗ್ರಾಂನಷ್ಟು ಪೊಟಾಶಿಯಂ ಇರುವುದೇ ಇದಕ್ಕೆ ಕಾರಣ. ಉಪ್ಪಿನ ನಕಾರಾತ್ಮಕ ಪರಿಣಾಮವನ್ನು ಪೊಟಾಶಿಯಂ ಸರಿದೂಗಿಸುವುದು. ಇದರಿಂದ ರಕ್ತದೊತ್ತಡ ಸಮತೋಲನಕ್ಕೆ ಬರುವುದು.

Image result for banana for high blood pressure

2. ಜೀರ್ಣಕ್ರಿಯೆ ಸುಧಾರಣೆ : ಬಾಳೆಹಣ್ಣು ಜೀರ್ಣಕ್ರಿಯೆ ವೃದ್ಧಿಸುವುದು. ಇದರಲ್ಲಿ ಉನ್ನತ ಮಟ್ಟದ ನಿರೋಧಕ ಪಿಷ್ಠವಿದ್ದು, ಇದು ಸುಲಭವಾಗಿ ಜೀರ್ಣವಾಗಲ್ಲ ಮತ್ತು ದೊಡ್ಡ ಕರುಳಿಗೆ ಇದು ಸಾಗಿ ಆರೋಗ್ಯಕರ ಬ್ಯಾಕ್ಟೀರಿಯಾ ಬೆಳವಣಿಗೆ ಮಾಡುವುದು. ಅಜೀರ್ಣ ಅಥವಾ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಬಾಳೆಹಣ್ಣು ಸೇವಿಸಿ. ಭೇದಿ ಬಳಿಕ ನೀವು ಬಾಳೆಹಣ್ಣು ತಿನ್ನಬಹುದು. ಯಾಕೆಂದರೆ ಇದು ದೇಹದಲ್ಲಿ ನಾಶವಾಗಿರುವ ಖನಿಜಾಂಶವನ್ನು ಮರಳಿ ನಿರ್ಮಿಸುವುದು.

Image result for banana for digestion

3. ತೂಕ ಕಳೆದುಕೊಳ್ಳಲು:

        ನೀವು ದಿನಕ್ಕೆರಡು ಸಣ್ಣ ಬಾಳೆಹಣ್ಣು ಸೇವನೆ ಮಾಡಿದರೆ ಆಗ ಅದು ತೂಕ ಕಲೆದುಕೊಳ್ಳಲು ಸಹಕಾರಿಯಾಗಲಿದೆ. ಇದರಲ್ಲಿರುವಂತಹ ಉನ್ನತ ಮಟ್ಟದ ನಾರಿನಾಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಿರೋಧಕ ಪಿಷ್ಠವು ಹಸಿವು ತಗ್ಗಿಸುವುದು ಮತ್ತು ತೂಕ ಹೆಚ್ಚಾಗದಂತೆ ತಡೆಯುವುದು. ದಿನದ ಯಾವ ಸಮಯದಲ್ಲಿ ನೀವು ಬಾಳೆಹಣ್ಣು ತಿನ್ನುತ್ತೀರಿ ಎನ್ನುವುದರ ಮೇಲೆ ತೂಕ ಕಳೆದುಕೊಳ್ಳುವುದು ನಿರ್ಧಾರವಾಗುತ್ತದೆ.

Related image

4. ರಕ್ತಹೀನತೆ ಸಮಸ್ಯೆ ಕಡಿಮೆ ಮಾಡುವುದು :

      ರಕ್ತದಲ್ಲಿ ಕಬ್ಬಿನಾಂಶ ಕೊರತೆಯಿಂದ ಆಗುವ ರಕ್ತಹೀನತೆಯಿಂದ ಬಳಲುವ ಸಮಸ್ಯೆಯನ್ನು ಬಾಳೆಹಣ್ಣು ಕಡಿಮೆ ಮಾಡುವುದು. ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ನಿಶ್ಯಕ್ತಿ ಮತ್ತು ಆಯಾಸವಾಗುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಕಬ್ಬಿನಾಂಶವು ಕೆಂಪು ರಕ್ತದ ಕಣಗಳನ್ನು ಉತ್ಪತ್ತಿ ಮಾಡಲು ಉತ್ತೇಜಿಸುವುದು.

Image result for banana for blood loss

 5. ವಿಟಮಿನ್ ಕೊರತೆ ನೀಗಿಸುವುದು:

      ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ ಮತ್ತು ಶೇ.20ರಷ್ಟು ವಿಟಮಿನ್ ಇದರಲ್ಲಿದೆ. ಇದು ಹಿಮೋಗ್ಲೋಬಿನ್, ಇನ್ಸುಲಿನ್ ಮತ್ತು ಅಮಿನೊ ಆಮ್ಲದ ಉತ್ಪತ್ತಿಗೆ ನೆರವಾಗುವುದು. ಇದರಿಂದ ಆರೋಗ್ಯಕರ ಕೋಶಗಳು ನಿರ್ಮಾಣವಾಗುವುದು. ಬಾಳೆಹಣ್ಣಿನಲ್ಲಿರುವ ಶೇ. 15ರಷ್ಟು ವಿಟಮಿನ್ ಸಿ ಹಾನಿಕಾರಕ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು.

Related image

6. ಮನಸ್ಥಿತಿ ಸುಧಾರಿಸುವುದು :

      ಬಾಳೆಹಣ್ಣು ಒತ್ತಡದ ಮಟ್ಟ ಕಡಿಮೆ ಮಾಡುವುದು ಮತ್ತು ನಿಮ್ಮ ಮನಸ್ಥಿತಿ ಸುಧಾರಿಸುವುದು. ಯಾಕೆಂದರೆ ಇರಲ್ಲಿರುವ ಟ್ರಿಪ್ಟೊಫಾನ್ ಎನ್ನುವ ಅಂಶವು ದೇಹದಲ್ಲಿ ಸಂತಸದ ಹಾರ್ಮೋನು ಸೆರೊಟೊನಿನ್ ಉತ್ಪತ್ತಿ ಮಾಡಲು ನೆರವಾಗುವುದು. ಬಾಳೆಹಣ್ಣಿನಲ್ಲಿ 27 ಮಿ.ಗ್ರಾಂ. ಮ್ಯಾಂಗನೀಶ್ ಇದ್ದು, ಇದು ನಿದ್ರೆಯ ಗುಣಮಟ್ಟ ಸುಧಾರಿಸುವುದು.

Related image

7. ಶಕ್ತಿ ನೀಡುವುದು :

      ನಿಮಗೆ ಕೆಲಸ ಮಾಡಲು ತುಂಬಾ ಉದಾಸೀನವಾಗುತ್ತಿದೆಯಾ? ಹಾಗಾದರೆ ನೀವು ಬೆಳಗ್ಗೆ ಉಪಾಹಾರಕ್ಕೆ ಎರಡು ಬಾಳೆಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮಲ್ಲಿ ಶಕ್ತಿ ಹೇಗೆ ಬರುವುದು ನೋಡಿ. ಇದರಲ್ಲಿರುವಂತಹ ಪೊಟಾಶಿಯಂ ದೇಹದಲ್ಲಿ ಶಕ್ತಿ ನಿರ್ಮಾಣ ಮಾಡಲು ನೆರವಾಗುವುದು. ಬಾಳೆಹಣ್ಣು ವ್ಯಾಯಾಮಕ್ಕೆ ಮೊದಲು ಮತ್ತು ಬಳಿಕ ಒಳ್ಳೆಯ ಆಹಾರವಾಗಿದೆ.

Related image

8. ಕೀಟಗಳು ಕಚ್ಚಿ ದದ್ದು, ತುರಿಕೆ, ಉರಿ ಉಂಟಾದಾಗ..Image result for banana for strength

      ಕೀಟಗಳು ಕಚ್ಚಿ ದದ್ದು, ತುರಿಕೆ, ಉರಿ ಉಂಟಾದಾಗ ಬಾಳೆಹಣ್ಣನ್ನು ಸವರುವುದರಿಂದ ಕೆಲವು ನಿಮಿಷಗಳಲ್ಲಿಯೇ ಶಮನವಾಗುತ್ತದೆ. ಟೈಪ್-2 ವಿಧದ ಮಧುಮೇಹವನ್ನು ನಿಯಂತ್ರಿಸುತ್ತದೆ, ತೂಕ ಕಡಿಮೆಗೊಳಿಸುವ ಯತ್ನಗಳಿಗೆ ಸಹಕಾರ ನೀಡುತ್ತದೆ ಹಾಗೂ ನರಮಂಡಲದ ಸುವ್ಯವಸ್ಥೆ ಕಾಪಾಡಲು ನೆರವಾಗುತ್ತದೆ.

      ಇದರಲ್ಲಿರುವ ವಿಟಮಿನ್ B-6 ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ನೆರವಾಗಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳಲು ಸಹಕರಿಸುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪೋಷಣೆ ನೀಡುತ್ತದೆ.

9. ಬಿ.ಪಿ ಕಡಿಮೆಗೊಳಿಸುತ್ತದೆ :

      ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಈ ಪ್ರಮಾಣವನ್ನು FDA(Food and Drug administration) ಇಲಾಖೆ ಅಂಗೀಕರಿಸಿದ್ದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

10. ಜೀರ್ಣಕ್ರಿಯೆ ಕಡಿಮೆ ಗೊಳಿಸುತ್ತದೆ :

Related image

      ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

      ಕೆಲವು ಸಲಹೆಗಳನ್ನು ಗಮನಿಸಬೇಕು ಹಣ್ಣಾದ ಬಾಳೆಹಣ್ಣು ಸೇವನೆ ಮಾಡಿ. ಇದರಲ್ಲಿ ಶೇ. 90ರಷ್ಟು ಸುಕ್ರೊಸ್ ಮತ್ತು ಶೇ. 7ರಷ್ಟು ಪಿಷ್ಠವಿದೆ. ಸುಕ್ರೊಸ್ ಎನ್ನುವುದು ಗ್ಲುಕೋಸ್ ಮತ್ತು ಫ್ರುಕ್ಟೊಸ್ ನ ಮಿಶ್ರಣವಾಗಿದೆ. ಇದನ್ನು ದೇಹವು ಬೇಗನೆ ಹೀರಿಕೊಳ್ಳುವುದು. ಇದು ಇನ್ಸುಲಿನ್ ಮತ್ತು ಗ್ಲೈಸೆಮಿಯಾ ಮೇಲೆ ತೀವ್ರ ಪರಿಣಾಮ ಬೀರುವುದು. ಬಾಳೆಹಣ್ಣು ಹಣ್ಣಾದಷ್ಟು ಮತ್ತು ಹಳದಿಯಾದಷ್ಟು ಅದರಲ್ಲಿ ಆ್ಯಂಟಿಆಕ್ಸಿಡೆಂಟ್ ಮಟ್ಟವು ಹೆಚ್ಚುವುದು. ಇದು ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಯಿಂದ ನಿಮ್ಮ ರಕ್ಷಿಸುವುದು.

      ಕಂದು ಅಥವಾ ಸಿಪ್ಪೆಯಲ್ಲಿ ಕಪ್ಪು ಕಲೆಗಳು ಇರುವಂತಹ ಬಾಳೆಹಣ್ಣು ಸೇವಿಸಿ. ಇದು ಹೆಚ್ಚಿನ ಟ್ಯುಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ ಎಫ್) ಉನ್ನತ ಮಟ್ಟದಲ್ಲಿ ಉತ್ಪಾದಿಸುವುದು. ಇದರಿಂದ ಬಿಳಿರಕ್ತದ ಕಣಗಳು ಉತ್ಪತ್ತಿಯು ಉತ್ತೇಜಿಸಲ್ಪಟ್ಟು, ಅಸಾಮಾನ್ಯ ಗಡ್ಡೆಕೋಶಗಳು ಬೆಳೆಯುವುದು ತಡೆಯುವುದು ಎಂದು ಜಪಾನ್ ನಲ್ಲಿನ ಅಧ್ಯಯನಗಳು ಹೇಳಿವೆ.

     ಸಿಪ್ಪೆಯಲ್ಲಿ ಕಪ್ಪು ಕಲೆಗಳು ಇರುವಂತಹ ಹಣ್ಣು ಬಾಳೆಹಣ್ಣುಗಳು ಬಿಳಿ ರಕ್ತದ ಕಣಗಳ ಕಾರ್ಯ ಸುಧಾರಿಸಲು ತುಂಬಾ ಪರಿಣಾಮಕಾರಿ. ಮುಂದಿನ ಸಲ ನೀವು ಬಾಳೆಹಣ್ಣಿನ ಸಿಪ್ಪೆಯು ಕಂದು ಅಥವಾ ಕಪ್ಪು ಕಲೆಗಳು ಇದ್ದರೆ ಅದನ್ನು ಎಸೆಯಬೇಡಿ. ಯಾಕೆಂದರೆ ಇದು ಕೊಳೆತಿರುವುದಿಲ್ಲ. ಇದನ್ನು ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳು ಸಿಗುವುದು. ಇದು ನಿಮ್ಮ ದೇಹವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವುದು.

Recent Articles

spot_img

Related Stories

Share via
Copy link
Powered by Social Snap