ಮಾನಸಿಕ ಖಾಯಿಲೆ ಇರುವ ಮಕ್ಕಳನ್ನು ಪೋಷಿಸುವುದು ಹೇಗೆ ?

0
22

     ಮಕ್ಕಳಲ್ಲಿ ಮಾನಸಿಕ ಖಾಯಿಲೆಯ ಸಾಮಾನ್ಯ ಲಕ್ಷಣಗಳು ಮಾನಸಿಕ ಖಾಯಿಲೆಯ ವಿಧವನ್ನು ಆಧರಿಸಿ ಭಿನ್ನವಾಗಿರಬಹುದು, ಆದರೆಕೆಲವು ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ.

Related image

 1. ಮಕ್ಕಳ ಶಾಲೆಯ ಕಲಿಕೆ ಮತ್ತು ಸಾಧನೆಯ ಮೇಲೆ ಪ್ರಭಾವ ಬೀರಿರುವುದು.
 2. ಮಕ್ಕಳು ಅಧಿಕ ಸಕ್ರಿಯತೆ ತೋರುವುದು.
 3. ಮಕ್ಕಳು ತಮ್ಮ ಕೆಲಸದಲ್ಲಿ ಅಸಕ್ತಿಯನ್ನು ಕೇಂದ್ರೀಕರಿಸಲು ಕಷ್ಟವಾಗುವುದು.
 4. ಮಕ್ಕಳು ಹೆಚ್ಚು ಚಿಂತಿತರಾಗಿರುವುದು ಅಥವಾ ಹೆಚ್ಚು ಆತಂಕ ಪಡುತ್ತಿರುವುದು.
 5. ಮಕ್ಕಳು ನಡವಳಿಕೆಯಲ್ಲಿ ಬದಲಾವಣೆಗಳು ಕಂಡುಬಂದಿರುವುದು.
 6. ಮಕ್ಕಳಲ್ಲಿ ಹಸಿವಿಲ್ಲದಿರುವುದು.
 7. ಮಕ್ಕಳ ತೂಕದಲ್ಲಿ ಅನಿರೀಕ್ಷಿತ ಬದಲಾವಣೆಗಳು.
 8. ಮಕ್ಕಳಲ್ಲಿ ತಮ್ಮ ಸ್ನೇಹಿತರ ಮತ್ತು ಹವ್ಯಾಸಗಳ ಬಗ್ಗೆ ಆಸಕ್ತಿ ಕಡಿಮೆಯಾಗುವುದು.
 9. ಮಕ್ಕಳ ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆಗಳು ಕಂಡುಬಂದಿರುವುದು.
 10. ಮಕ್ಕಳು ನಿಷೇಧಿತ ಮಾದಕ ಪದಾರ್ಥಗಳ ಅಥವಾ ಮದ್ಯಪಾನದ ಬಳಕೆ.

ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಖಾಯಿಲೆಗೆ ಹೇಗೆ ಚಿಕಿತ್ಸೆ ನೀಡಬಹುದು ?

ಮಕ್ಕಳಲ್ಲಿ ಸಾಮಾನ್ಯಚಿಕಿತ್ಸಾ ಅಯ್ಕೆಗಳು ಹೀಗಿವೆ :

ಮನೋ ಚಿಕಿತ್ಸೆ :

       ಮಕ್ಕಳ ಮನಸ್ಸಿನಲ್ಲಿ ಉಂಟಾಗಿರುವ ತೋಳಲಾಟವನ್ನು ಅಥವಾ ಅಲ್ಲೋಲ-ಕಲ್ಲೋಲ, ಗೊಂದಲ, ಹಿಡಿತದಲ್ಲಿರದೆ ಇರುವ ಅಂತರಾಳದ ಭಾವನೆಗಳನ್ನು ಮತ್ತು ಯೋಚನೆಗಳನ್ನು ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಇರುವ ನ್ಯೂನತೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಸೂಕ್ತ ಸಲಹೆಗಳನ್ನು ಮತ್ತು ಚಿಕಿತ್ಸೆಯನ್ನು ಕೊಡುವುದಕ್ಕೆ ಮನೋಚಿಕಿತ್ಸೆ ಎನ್ನುತ್ತಾರೆ.

ಆಪ್ತಸಮಾಲೋಚನೆಯ ಸಲಹೆಗಳು :

      ಮಕ್ಕಳಲ್ಲಿ ಉಂಟಾಗಿರುವ ನ್ಯೂನತೆಗಳ ಬಗ್ಗೆ ಮಾಹಿತಿಯನ್ನು ಮತ್ತು ಕಾರಣಗಳನ್ನು ಕುರಿತು, ಸೂಕ್ತವಾದ ಸಲಹೆಗಳೊಂದಿಗೆ ಹಾಗೂ ಆರೈಕೆಯೊಂದಿಗೆ ಮಕ್ಕಳಿಗೆ ಮತ್ತು ಪೋಷಕರ ಜವಾಬಬ್ಧಾರಿಯನ್ನು ತಿಳಿಸಿ ಹೇಳುವುದು. ಇದು ಮಗುವಿನ ಸ್ಥಿತಿ, ಆಲೋಚನೆ ಮತ್ತು ಭಾವನೆಗಳ ಹಾಗೂ ಕ್ರಿಯೆಗಳು ಬಗ್ಗೆ ಕಲಿಯಲು ಆತ/ಆಕೆಗೆ ನೆರವಾಗುತ್ತದೆ. 

ಮಾನಸಿಕ ಚಿಕಿತ್ಸೆ :

       ಮನೋರೋಗ ಮತ್ತು ಮಾನಸಿಕ ಚಿಕಿತ್ಸಾ ತಜ್ಞರು ಮಕ್ಕಳಲ್ಲಿ ಕಂಡು ಬರುವ ಸ್ಥಿತಿಗೆ ಅನುಸಾರವಾಗಿ, ಸರಿಯಾದ ಔಷಧಿಗಳನ್ನು ಬಳಸಿ ನೀಡುವ ಚಿಕಿತ್ಸೆ ಇದಾಗಿರುತ್ತದೆ, ಇಲ್ಲಿ ನೀಡುವ ಚಿಕಿತ್ಸೆ ಮಕ್ಕಳಲ್ಲಿರುವ ಮಾನಸಿಕ ಖಾಯಿಲೆಯ ವಿಧಾನವನ್ನು ಅವಲಂಬಿಸಿ ಪ್ರಚೋದಕಗಳು, ಖಿನ್ನತೆನಿರೋಧಕಗಳು, ಆತಂಕ ನಿರೋಧಕ ಔಷಧಿಗಳು, ಮಾನಸಿಕ ವಿರುದ್ಧ ನಿರೋಧಕ ಅಥವಾ ಭಾವನೆಗಳನ್ನು ಸ್ಥಿರಗೊಳಿಸುವಂತಹ ಔಷಧಿಗಳನ್ನು ಶಿಫಾರಸು ಮಾಡುವುದು.

ಮಾನಸಿಕ ಖಾಯಿಲೆಯಿಂದ ಮಕ್ಕಳು ಹೊರಬರಲು ಪೋಷಕರು ಮಕ್ಕಳಿಗೆ ಹೇಗೆ ನೆರವಾಗಬಹುದು ?

Related image

 1. ಮಾನಸಿಕ ಖಾಯಿಲೆ ಇರುವ ಮಕ್ಕಳನ್ನು/ಮಗುವನ್ನು ಹೊಂದಿರುವುದು ಪೋಷಕರಿಗೆ ಒಂದು ಸಾವಲಾಗಿರುತ್ತದೆ. ನಿಮ್ಮ ಮಗುವಿನಲ್ಲಿ ಮಾನಸಿಕ ಖಾಯಿಲೆಯ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ ಮತ್ತು ಲಕ್ಷಣಗಳನ್ನು ನಿರ್ವಹಿಸಲು ಅವರಿಗೆ ನೆರವಾಗಬೇಕು.
 2. ಪೋಷಕರು ಯಾವಾಗಲೂ ಸಕಾರಾತ್ಮಕವಾಗಿದ್ದು ಮಕ್ಕಳಲ್ಲಿ/ಮಗುವಿನಲ್ಲಿ ವಿಶ್ವಾಸ ಹೊಂದಬೇಕು.
 3. ನಿಮ್ಮ ಮಗುವಿನ ಚಿಕಿತ್ಸಕರೊಂದಿಗೆ ಮಾತನಾಡಿ ಮತ್ತು ಮಕ್ಕಳೊಂದಿಗೆ/ಮಗುವಿನೊಂದಿಗೆ ಹೇಗೆ ವರ್ತಿಸುವುದು ಮತ್ತು ಮಗುವಿನ/ಮಕ್ಕಳ ನಡವಳಿಕೆಯ ಸಮಸ್ಯೆಗಳನ್ನು ಹೇಗೆ ನಿರ್ವಹಿಸುವುದೆಂದು ಚರ್ಚಿಸಿ ತಿಳಿದುಕೊಳ್ಳಿ.
 4. ಯಾವಾಗಲೂ ನಿಮ್ಮ ಮಕ್ಕಳ/ಮಗುವಿನ ದೃಢತೆ ಮತ್ತು ಸಾಮರ್ಥ್ಯಗಳನ್ನು ಪ್ರಶಂಸಿಸಿ ಮತ್ತು ಪ್ರೋತ್ಸಾಹಿಸಿ.
 5. ಮಕ್ಕಳಿಗೆ/ಮಗುವಿಗೆ ನಿಯಮಿತವಾದ ಸಮಯದಲ್ಲಿ ನಿದ್ರಿಸಲು ಮತ್ತು ಎಚ್ಚರವಾಗಲು ಅಭ್ಯಾಸ ಮಾಡಿಸಬೇಕು.
 6. ಮಕ್ಕಳಿಗೆ/ಮಗುವಿಗೆ ಆರಾಮ ಎನಿಸುವ ಮತ್ತು ವಿನೋದಮಯವಾದ ವಿಧಾನಗಳನ್ನು ಚಿಕಿತ್ಸಕರಿಂದ ತಿಳಿದುಕೊಂಡು ಪರಿಚಿಯಿಸಿ.
 7. ಮಕ್ಕಳಿಗೆ/ಮಗುವಿಗೆ ಚೆನ್ನಾಗಿ ಮಾಡುವ ಕೆಲಸ ಮತ್ತು ಚಟುವಟಿಕೆಗಳನ್ನು ಪರಿಚಯಿಸಿ ಮತ್ತು ಪ್ರೋತ್ಸಾಹಿಸಿ.
 8. ಮಕ್ಕಳಿಗೆ/ಮಗುವಿಗೆ ಕೌಟುಂಬಿಕ ಸಮಾಲೋಚನೆ ಮತ್ತು ಬೆಂಬಲ ಚಿಕಿತ್ಸಕರ ನೆರವನ್ನು ಪಡೆಯಿರಿ ಮತ್ತು ಪಡೆಯುವುದನ್ನ ಮರೆಯಬೇಡಿ ಮತ್ತು ಪರಿಗಣಿಸಿ.
 9. ಇತರ ಮಕ್ಕಳ/ಮಗುವಿನ ಚಿಕಿತ್ಸಕರೊಂದಿಗೆ ಮತ್ತು ಆರೈಕೆಯ ಪೋಷಕರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಮಾತನಾಡಿ ಮಕ್ಕಳಲ್ಲಿರುವ/ಮಗುವಿನಲ್ಲಿರುವ ಈ ತರ ನಡವಳಿಕೆಗಳಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿದೆಯೇ ಎಂಬುದನ್ನು ಗಮನಿಸಿತ್ತೀರಿ.

ಪೋಷಕರು ಮಕ್ಕಳ ಮಾನಸಿಕ ಖಾಯಿಲೆಯಿಂದ ಹೊರಬರಲು ಹೇಗೆ ನೆರವಾಗಬಹುದು :

 1. ಪೋಷಕರು ಮೊದಲು ನಿಮ್ಮ ಆತಂಕವನ್ನು ನಿರ್ವಹಿಸುವುದನ್ನ ಕಲಿತುಕೊಳ್ಳಬೇಕು, ನಂತರ ಮಕ್ಕಳಿಗೆ ನೀವು ಕಲಿಸುವಾಗ ಇದು ಒತ್ತಡಯುಕ್ತ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸ್ಪಂದಿಸಲು ನಿಮಗೆ ಸಹಾಯವಾಗುತ್ತದೆ.
 2. ನಿಮ್ಮ ಮಕ್ಕಳು/ಮಗು ಶಾಲೆಯಲ್ಲಿದ್ದರೆ ಶಿಕ್ಷಕರಿಗೆ ನಿಮ್ಮ ಮಗುವಿನ ನಡವಳಿಕೆಯ ಬಗ್ಗೆ ತಿಳಿಸಿ ಹೇಳಿ ಮತ್ತು ಈ ಮಾಹಿತಿಯನ್ನು ನಿಮ್ಮ ಮಗುವಿನ ಚಿಕಿತ್ಸಕರೊಂದಿಗೆ ವಿನಿಮಯ ಮಾಡಿಕೊಳ್ಳಿ.
 3. ನಿಮ್ಮ ಮಕ್ಕಳ/ಮಗುವಿನ ಕಲಿಕೆ, ದೃಡತೆ ಮತ್ತು ದೌರ್ಬಲ್ಯಗಳ ಬಗ್ಗೆ ಅವರ ಶಿಕ್ಷಕರೊಂದಿಗೆ ಮಾತನಾಡಿ.
 4. ನಿಮ್ಮ ಮಕ್ಕಳಲ್ಲಿ/ಮಗುವಿನಲ್ಲಿ ನಡವಳಿಕೆಯ ಬದಲಾವಣೆಗಳನ್ನು ತಿಳಿಯಲು ಅ ಶಾಲೆಯ ಶಿಕ್ಷಕರೊಂದಿಗೆ ನಿಯಮಿತವಾಗಿ ಮಾತನಾಡಿ ತಿಳಿದುಕೊಳ್ಳಿ.
 5. ನಿಮ್ಮ ಮಕ್ಕಳು/ಮಗು ಶಾಲೆಯಲ್ಲಿ ಯಶಸ್ವಿಯಾಗಲು, ನಿಮ್ಮ ಮಗುವಿನ ಅಗತ್ಯಗಳಿಗೆ ಅನುಗುಣವಾಗಿ ಶೈಕ್ಷಣಿಕ ಯೋಜನೆ ಅಭಿವೃದ್ಧಿಪಡಿಸಲು ನಿಮ್ಮ ಮಗುವಿನ ಶಿಕ್ಷಕರೊಂದಿಗೆ ಕೆಲಸಮಾಡಿ ಮತ್ತು ಸಹಕರಿಸಿ.
 6. ಮಗುವಿನ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹೊಸ ಶಿಕ್ಷಕರು ಬರುತ್ತಾರೆ, ನಿಮ್ಮ ಮಕ್ಕಳು/ಮಗು ಹೊಸ ತರಗತಿಗೆ ಬರುತ್ತಿದ್ದಂತೆ ನಿಮ್ಮ ಮಕ್ಕಳ/ಮಗುವಿನ ಮಾನಸಿಕ ಖಾಯಿಲೆಯ ಬಗ್ಗೆ ಅ ಶಾಲೆಯ ಶಿಕ್ಷಕರಿಗೆ ತಿಳಿಸಿ ಹೇಳಿ.

 

 

 

 

LEAVE A REPLY

Please enter your comment!
Please enter your name here