ಬಿಎಸ್’ವೈ ಭೇಟಿ ಮಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು ಹಾಗೂ ಗುರುಪೂರ್ಣಿಮೆ ಪ್ರಯುಕ್ತ ಹಿರಿಯರ ಆರ್ಶೀವಾದ ಪಡೆಯಲು ಬಂದಿದ್ದೇನೆ ಬೇರೆ ಏನೂ ಇಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಕಿದರು.

ಬುಧವಾರ ಬಿಎಸ್‍ವೈ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕೆಲ ಹೊತ್ತು ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಹೊತೆ ಮಾತನಾಡಿದ ಅವರು, ಈ ಭೇಟಿಯಲ್ಲಿ ಯಾವುದೇ ಕುತೂಹಲವಿಲ್ಲ. ಬೆಂಗಳೂರು ಬಂದಾಗ ಸಹಜವಾಗಿ ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಹಾಗೂ ಸಮಾಜದ ಮುಖಂಡರಾಗಿದ್ದಾರೆ. ಅವರ ಅರ್ಶಿವಾದ ಪಡೆಯುವ ನಿಟ್ಟಿನಲ್ಲಿ ಭೇಟಿಯಾಗಿದ್ದೇನೆ ಎಂದು ಹೇಳಿದರು. ಇದೊಂದು ಸೌಹಾರ್ದತವಾದ ಭೇಟಿ ಆಗಿದ್ದು, ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ, ಸಮುದಾಯದ ಅಥವಾ ರಾಜಕೀಯದ ಬಗ್ಗೆ ಚರ್ಚೆನಾ ಎಂಬ ಪ್ರಶ್ನೆಗೆ, ಎರಡೂ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಸಮುದಾಯದ ಮುಖಂಡರು ಅವರಿಗೆ ಗೌರವ ಕೊಡುತ್ತಾ ಬಂದಿದ್ದೇನೆ ಎಂದು ಹೇಳಿದರು.

2ಎ ಮೀಸಲಾತಿ ವಿಚಾರವಾಗಿ ಭೇಟಿ :

ಸಮುದಾಯದಕ್ಕೆ 2 ಎ ಮೀಸಲಾತಿ ವಿಚಾರ ತಾಂತ್ರಿಕ ಕಾರಣದಿಂದ ವಿಳಂಬವಾಗುತ್ತಿದೆ. ಈ ಅವಧಿಯಲ್ಲಿ ಮೀಸಲಾತಿ ಸಿಗುವ ಭರವಸೆ ಇದೆ. ಸಿಎಂ ಬೊಮ್ಮಾಯಿ ಅವರು ಸಹ ಬರವಸೆ ನೀಡಿದ್ದಾರೆ. ಬೇರೆ ಸಮುದಾಯಕ್ಕೆ ಮೀಸಲಾತಿ ತೊಂದರೆ ಆಗದಂತೆ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದರು. ರಾಜಕೀಯವಾಗಿ ನಮ್ಮ ಮತ್ತು ಯಡಿಯೂರಪ್ಪನವರ ವಿಚಾರಧಾರೆ ಬೇರೆ ಇರಬಹುದು. ಆದರೆ ವೈಯಕ್ತಿಕವಾಗಿ ಬೇರೆ. ಇದರಲ್ಲಿ ಆಡಳಿತ ಮತ್ತು ವಿಪಕ್ಷ ಅಂತ ಬರೋದಿಲ್ಲ. ಕೆಲವೊಂದು ವಿಚಾರದಲ್ಲಿ ಯಡಿಯೂರಪ್ಪನವರ ಮಾರ್ಗದರ್ಶನ ತಗೆದುಕೊಳ್ಳುತ್ತೇವೆ ಎಂದರು.

ಸಿದ್ದರಾಮೋತ್ಸವ ಸಮಿತಿಯಲ್ಲಿ ನಾನು ಇದ್ದೇನೆ. ಸಮಿತಿಯ ಪೂರ್ವಭಾವಿ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ. ಸಿದ್ದರಾಮಯ್ಯನವರು 75 ವರ್ಷ ರಾಜಕೀಯ ಜೀವನದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಿದ್ದರಾಮೋತ್ಸವವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ. 75 ವರ್ಷದ ಮನುಷ್ಯ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅವರು ಹಿರಿಯರು ಅವರೊಬ್ಬರೇ ಕಾರ್ಯಕ್ರಮ ಮಾಡಿ ಅಂತಿಲ್ಲ. ನಾವೆಲ್ಲ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರಿಗೆ ಒಳ್ಳೆಯದು ಆಗಲಿ ಅನ್ನುವುದು ನಮ್ಮೆಲ್ಲರ ಆಸೆ ಎಂದು ಹೇಳಿದರು.

Recent Articles

spot_img

Related Stories

Share via
Copy link
Powered by Social Snap