ಸವಣೂರ :
ಯಲವಗಿ ತಾಲೂಕು ಪಂಚಾಯತಿಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಕ್ಕಮ್ಮ ಬಸವರಾಜ ವಡ್ಡರ ಪರವಾಗಿ ಬಿಜೆಪಿ ಪಕ್ಷದ ಮುಖಂಡರು ಪ್ರಚಾರ ಮಾಡಿದರು. ಭೋಜರಾಜ ಕರೂದಿ ಹಾಗೂ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ಅಲ್ಲಿಪುರ ಹಾಗೂ ಯಲವಗಿ ಗ್ರಾಮಗಳಲ್ಲಿ ಮತ ಯಾಚಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ಪರಮೇಶ ಭಜಂತ್ರಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕರ್ಯದರ್ಶಿ ಗುಡ್ಡಪ್ಪ, ಜಿಲ್ಲಾ ಕಾರ್ಯಕಾರ್ಯಿಣಿ ಸದಸ್ಯರಾದ ಮಧುಕೇಶ್ವರ ಹಂದ್ರಾಳ, ನವೀನ್ ದೊಡ್ಡಣ್ಣನವರ, ರಾಹುಲ್ ನವಲೆ, ಮಲ್ಲೇಶ ವಡ್ಡರ, ರುದ್ರಮುನಿ ಹಿರೇಮಠ, ಹನುಮಂತಪ್ಪ, ಬಸಪ್ಪ ಶಿಗ್ಗಾವ, ರವಿ ಲಮಾಣಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
